ರೇಷನ್ ಕಾರ್ಡ್‌ ಇದ್ದೋರಿಗೆ 8 ಭರ್ಜರಿ ಉಚಿತ ಸೌಲಭ್ಯಗಳು! ಬಿಗ್ ಅನೌನ್ಸ್‌ಮೆಂಟ್

ರೇಷನ್ ಕಾರ್ಡ್‌ ಇರುವವರಿಗೆ ಅಕ್ಕಿ ಮಾತ್ರವಲ್ಲ, ಉಚಿತ ಹೊಲಿಗೆ ಯಂತ್ರದಿಂದ ಹಿಡಿದು ಉಜ್ವಲ ಗ್ಯಾಸ್‌ ಯೋಜನೆವರೆಗೆ ಒಟ್ಟು 8 ಪ್ರಮುಖ ಸೌಲಭ್ಯಗಳು ಸರ್ಕಾರದಿಂದ ನೇರವಾಗಿ ಸಿಗುತ್ತವೆ.

  • ರೇಷನ್ ಕಾರ್ಡ್‌ ಮೇಲೆ ಗ್ಯಾಸ್‌ ಸಿಲಿಂಡರ್‌, ಬೆಳೆ ವಿಮೆ ಲಾಭ
  • ಉಚಿತ ಹೊಲಿಗೆ ಯಂತ್ರ, ಶ್ರಮಿಕ್ ಕಾರ್ಡ್‌ ಸಹಾಯ
  • ಪಡಿತರವಿತರಣೆ ಹೊರತಾಗಿಯೂ ಹಲವು ಸೌಲಭ್ಯಗಳ ಮೂಲ

ಬೆಂಗಳೂರು (Bengaluru): ಹೆಚ್ಚು ಜನರ ದೃಷ್ಟಿಯಲ್ಲಿ ರೇಷನ್ ಕಾರ್ಡ್ (Ration Card) ಅಂದರೆ ಅಕ್ಕಿ, ಬೇಳೆ, ಸಕ್ಕರೆ ಅಗ್ಗದ ದರಕ್ಕೆ ಸಿಗೋ ಸರ್ಕಾರಿ ಕಾರ್ಡ್ ಮಾತ್ರ. ಆದರೆ ನಿಜವಾಗಿಯೂ ನೋಡಿದರೆ, ಇದು ಪಡಿತರವಿತರಣೆಗೆ ಮಾತ್ರ ಸೀಮಿತವಲ್ಲ.

ಸರ್ಕಾರ ಈ ಕಾರ್ಡ್‌ಮೂಲಕ ಹಲವಾರು ಉಚಿತ (Free) ಸೌಲಭ್ಯಗಳನ್ನು ನೀಡುತ್ತಿದೆ. ಅದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲವಷ್ಟೇ.. ಉಚಿತ ಹೊಲಿಗೆ ಯಂತ್ರದಿಂದ ಹಿಡಿದು ಉಜ್ವಲ ಗ್ಯಾಸ್‌ ಯೋಜನೆವರೆಗೆ ಒಟ್ಟು 8 ಪ್ರಮುಖ ಸೌಲಭ್ಯಗಳು ರೇಷನ್ ಕಾರ್ಡ್ (Ration Card) ಇದ್ದರೆ ಸರ್ಕಾರದಿಂದ ನೇರವಾಗಿ ಸಿಗುತ್ತವೆ.

ಇದನ್ನೂ ಓದಿ: ಟ್ಯಾಕ್ಸಿ ವಾಹನ ಖರೀದಿಗೆ ₹3 ಲಕ್ಷ ನೆರವು! ಕರ್ನಾಟಕ ಸಾರಥಿ ಯೋಜನೆ ಬಗ್ಗೆ ಗೊತ್ತಾ

1. ಪಡಿತರದೊಂದಿಗೆ ಆರ್ಥಿಕ ಸಹಾಯ

ಬಿಪಿಎಲ್‌ (Below Poverty Line) ಮತ್ತು ಎಪಿಎಲ್‌ (Above Poverty Line) ಕಾರ್ಡ್‌ಗಳ ಮೂಲಕ ಜನರಿಗೆ ಗೋಧಿ, ಅಕ್ಕಿ, ಸೀಮೆ ಎಣ್ಣೆ ಮೊದಲಾದ ಆಹಾರ ಪದಾರ್ಥಗಳನ್ನು ಕಾನೂನುಬದ್ಧವಾಗಿ ಉಚಿತ ಅಥವಾ ಅಗ್ಗದ ದರದಲ್ಲಿ ನೀಡಲಾಗುತ್ತಿದೆ. ಇದರ ಮೂಲಕ ಲಕ್ಷಾಂತರ ಬಡ ಕುಟುಂಬಗಳು ಇಂದಿಗೂ ಅನುಕೂಲ ಪಡೆಯುತ್ತಿವೆ.

2. ಮಕ್ಕಳ ಶಿಕ್ಷಣಕ್ಕೆ ನೆರವು

Education Scholarship

ರೇಷನ್ ಕಾರ್ಡ್‌ ಒಂದು ಕುಟುಂಬದ ಆರ್ಥಿಕ ಸ್ಥಿತಿಯನ್ನು ತೋರಿಸುತ್ತಿರುವುದರಿಂದ, ಅನೇಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶಿಕ್ಷಣ ನೆರವು ಯೋಜನೆಗಳಲ್ಲಿ ಅರ್ಹತೆ ರೂಪದಲ್ಲಿ ಬಳಸಬಹುದು. ವಿದ್ಯಾರ್ಥಿಗಳಿಗೆ ಫೀಸ್ ಮನ್ನಾ (Fee Concession), ವಿದ್ಯಾರ್ಥಿ ವೇತನ (Education Scholarship) ಮೊದಲಾದ ಸೌಲಭ್ಯ ಸಿಗುತ್ತವೆ.

ಇದನ್ನೂ ಓದಿ: ಕರ್ನಾಟಕ ಯುವಕರ ಸ್ವಂತ ಉದ್ಯೋಗಕ್ಕೆ ₹2 ಲಕ್ಷ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಆಹ್ವಾನ

3. ಮನೆ ನಿರ್ಮಾಣಕ್ಕೆ ಸಹಾಯ

ಪಿಎಂ ಆವಾಸ್ ಯೋಜನೆ

ಹೆಚ್ಚಿನ ಜನರು ಅರಿಯದೇ ಇರುವ ಈ ಸೌಲಭ್ಯ ಅಂದರೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು. ಪಡಿತರ ಚೀಟಿದಾರರು ಶಾಶ್ವತ ಮನೆಗೆ ಅರ್ಜಿ ಸಲ್ಲಿಸಿ ಹಣದ ಸಹಾಯ ಪಡೆದು ತಮ್ಮ ಸ್ವಂತ ಮನೆ (own House) ಕಟ್ಟಿಕೊಳ್ಳಬಹುದು. ಪ್ರಧಾನ ಮಂತ್ರಿ ಅವಾಜ್ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದಲ್ಲಿಯೂ ಈ ಯೋಜನೆ ಇದೆ. ಹಾಗೂ ಹೋಮ್ ಲೋನ್ (Home Loan) ಮೇಲೆ ಸಬ್ಸಿಡಿ ಸಹ ಸಿಗುತ್ತದೆ.

ಇದನ್ನೂ ಓದಿ: ಕರ್ನಾಟಕ ಅರಿವು ಶಿಕ್ಷಣ ಸಾಲ ಯೋಜನೆ, 2% ಬಡ್ಡಿದರದಲ್ಲಿ ₹5 ಲಕ್ಷದವರೆಗೆ ಸಾಲ

4. ಹೊಲಿಗೆ ಯಂತ್ರ – ಮಹಿಳೆಯರಿಗಾಗಿ ಬಲ

Free sewing machine

ಹೆಣ್ಣುಮಕ್ಕಳು ಸ್ವಾವಲಂಬಿ ಆಗಲು ಸರ್ಕಾರ ನೀಡುತ್ತಿರುವ ಇನ್ನೊಂದು ಉಪಕರಣ ಎಂದರೆ ಉಚಿತ ಹೊಲಿಗೆ ಯಂತ್ರ (Free Sewing Machine). ಪಡಿತರ ಚೀಟಿದಾರ ಮಹಿಳೆಯರು ಈ ಯಂತ್ರ ಪಡೆದು ಸ್ವಂತ ಉದ್ಯಮ ಪ್ರಾರಂಭಿಸಬಹುದು. ಸಣ್ಣ ಕೈಗಾರಿಕಾ ಪ್ರಾರಂಭಕ್ಕೆ ಇದು ದೊಡ್ಡ ಸಹಾಯ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 20ನೇ ಕಂತು ಬಿಡುಗಡೆಗೆ ದಿನಾಂಕ ಫಿಕ್ಸ್! ಹೊಸ ಅಪ್ಡೇಟ್

5. ಉಜ್ವಲ ಗ್ಯಾಸ್ ಸಿಲಿಂಡರ್

Gas Cylinder

ಅಡುಗೆ ಗ್ಯಾಸ್‌ ಇಲ್ಲದವರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್‌ ಸಿಲಿಂಡರ್‌ (Free Gas Cylinder) ದೊರೆಯುತ್ತದೆ. ಪಡಿತರ ಚೀಟಿಯನ್ನು ಉಪಯೋಗಿಸಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

6. ಶ್ರಮಿಕ್ ಕಾರ್ಡ್ ಸೌಲಭ್ಯ

labour card

ಅಸಂಘಟಿತ ವಲಯದ ಕಾರ್ಮಿಕರಿಗೆ ಶ್ರಮಿಕ್ ಕಾರ್ಡ್‌ (Shramik Card) ಯೋಜನೆಯಡಿ ರೇಷನ್ ಕಾರ್ಡ್ ಆಧಾರವಾಗಿ ಕೆಲಸದ ಲಾಭ, ಉದ್ಯೋಗ ಅವಕಾಶ, ಮೊದಲಾದ ಹಲವು ಸಹಾಯ ಸಿಗುತ್ತದೆ. ಈ ಮೂಲಕ ಕಾರ್ಮಿಕರು ಕಾನೂನುಬದ್ಧವಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

7. ಬೆಳೆ ವಿಮೆ – ರೈತರಿಗೆ ನೆರವು

Crop Insurance

ರೈತರಿಗೆ ಈ ಕಾರ್ಡ್‌ ಇನ್ನೊಂದು ಪ್ರಮುಖ ಉಪಯೋಗವೆಂದರೆ ಬೆಳೆ ವಿಮೆ (Crop Insurance). ಕೃಷಿಯಲ್ಲಿ ನಷ್ಟವಾದಾಗ ರೈತರು ರೇಷನ್ ಕಾರ್ಡ್‌ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಿ ಬೆಳೆ ನಷ್ಟ ಪರಿಹಾರ ಪಡೆಯಬಹುದು. ವಿಶೇಷವಾಗಿ ಬರ, ಮಳೆಹಾನಿಗೆ ಇದು ದೊಡ್ಡ ಆಧಾರ.

8. ಗುರುತಿನ ದಾಖಲೆ ಬಳಸಲು

BPL Ration Card

ಇದೊಂದು ಪುರಾವೆ ಕಾರ್ಡ್‌ ಆಗಿಯೂ ಕೆಲಸ ಮಾಡುತ್ತದೆ. ಪಡಿತರ ಚೀಟಿ ನಿಮ್ಮ ಹೆಸರು, ವಿಳಾಸ, ಕುಟುಂಬದ ವಿವರಗಳನ್ನು ಒಳಗೊಂಡಿರುವುದರಿಂದ ID Proof ಆಗಿ ವಿವಿಧ ಕಡೆ ಬಳಸಬಹುದಾಗಿದೆ. ಕೆಲವೊಂದು ಪಿಂಚಣಿ ಯೋಜನೆಗಳಿಗೆ (Pension Scheme) ಅಥವಾ ಬ್ಯಾಂಕ್‌ನಲ್ಲಿ ಖಾತೆ (Bank Account) ತೆರೆಯಲು ಸಹ ಇದು ಬೇಕಾಗುತ್ತದೆ.

These 8 Free Benefits You Can Get With a Ration Card

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories