ಕರ್ನಾಟಕದಲ್ಲಿ ಮನೆ ಇಲ್ಲದವರಿಗೆ 40 ಸಾವಿರ ಮನೆ ಹಂಚಿಕೆ! ನೀವೂ ಅರ್ಜಿ ಹಾಕಿದ್ರಾ - Karnataka Housing Scheme
ಕರ್ನಾಟಕದಲ್ಲಿ ಪಿಎಂ ಆವಾಜ್ ಯೋಜನೆಯಡಿ 2026 ಡಿಸೆಂಬರ್ ಒಳಗೆ 1.80 ಲಕ್ಷ ಮನೆ ನಿರ್ಮಾಣ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದು, ಎರಡನೇ ಹಂತದಲ್ಲಿ 40 ಸಾವಿರ ಮನೆ ಹಂಚಿಕೆಗೆ ಸಿದ್ಧತೆ ನಡೆದಿದೆ.

- ಪಿಎಂ ಆವಾಜ್ ಯೋಜನೆ ಅಡಿ ಮನೆ ಹಂಚಿಕೆ
- 40 ಸಾವಿರ ಮನೆ ಎರಡನೇ ಹಂತದಲ್ಲಿ ಸಿದ್ಧತೆ
- ವಸತಿ ಸಚಿವ ಜಮೀರ್ ಅಹಮದ್ ಖಾನ್ ಭರವಸೆ
ಬೆಂಗಳೂರು (Bengaluru): ಕರ್ನಾಟಕ ರಾಜ್ಯದ ಬಡವರ ಮನೆ ಕನಸನ್ನು ನನಸು (Karnataka Housing Scheme) ಮಾಡುವ ಉದ್ದೇಶದಿಂದ ಪಿಎಂ ಆವಾಜ್ (PMAY) ಯೋಜನೆಗೆ ಸರ್ಕಾರವೇ ಹೊಸ ಹೊಣೆ ಹೊತ್ತಿದೆ.
ಫಲಾನುಭವಿಗಳಿಂದ ವಂತಿಗೆ ಪಾವತಿ ಆಗದ ಕಾರಣ ಯೋಜನೆ ನಿಧಾನಗೊಂಡಿದ್ದರೂ, ಮುಖ್ಯಮಂತ್ರಿಯವರ ಮಧ್ಯಸ್ಥಿಕೆಯಿಂದ ಸರ್ಕಾರವೇ ಆ ವಂತಿಗೆಯನ್ನು ಪಾವತಿಸುವ ನಿರ್ಧಾರ ಕೈಗೊಂಡಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲ ಹಂತದಲ್ಲಿ 36,789 ಮನೆ ಹಂಚಿಕೆ ಆಗಿದ್ದು, ಇದೀಗ ಎರಡನೇ ಹಂತದಲ್ಲಿ 40,345 ಮನೆಗಳ ಹಂಚಿಕೆಗೆ ಸಿದ್ಧತೆ ನಡೆದಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಕಾರು–ಟ್ಯಾಕ್ಸಿ ಖರೀದಿಗೆ ₹4 ಲಕ್ಷ ಸಹಾಯಧನ! ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಹಾಕಿ
ಒಟ್ಟು 1,80,253 ಮನೆಗಳ ನಿರ್ಮಾಣ ಕಾರ್ಯವು 2026ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.
ಇದರ ಜೊತೆಗೆ, ರಾಜೀವ್ ಗಾಂಧಿ ವಸತಿ ನಿಗಮದ 47,870 ಮನೆಗಳ ಯೋಜನೆಯ ವಂತಿಗೆಯನ್ನು ಸಹ ಸರ್ಕಾರವೇ ಪಾವತಿಸಲು ಒಪ್ಪಿಗೆ ಸೂಚಿಸಿದ್ದು, ಸಂಪುಟದಿಂದ ಅಂತಿಮ ಅನುಮೋದನೆ ಪಡೆಯಲಾಗುತ್ತದೆ. ಈ ಮನೆಗಳ ಹಂಚಿಕೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಯೋಜನೆಯ ಮುಖ್ಯ ಅಂಶಗಳ ಕುರಿತು ಮಾಹಿತಿ ನೀಡಿದ ಸಚಿವರು, ಬಡವರು, ಕಡಿಮೆ ಹಾಗೂ ಮಧ್ಯಮ ಆದಾಯ ವರ್ಗದ ಕುಟುಂಬಗಳು, ಎಸ್‌ಸಿ, ಎಸ್‌ಟಿ, ಓಬಿಸಿ, ವಿಧವೆಯರು, ವೃದ್ಧರು ಹಾಗೂ ಅಂಗವಿಕಲರು ಈ ಯೋಜನೆಯಡಿ ಮನೆ ಪಡೆಯಲು ಅರ್ಹರು ಎಂದರು.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಂತಾ, ಇಲ್ವಾ? ಎಷ್ಟು ಬಂದಿದೆ ಅಂತ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ
ನಗರ ಪ್ರದೇಶಗಳಲ್ಲಿ 1.5 – 2.67 ಲಕ್ಷ ರೂ. ಸಹಾಯಧನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1.2 – 1.3 ಲಕ್ಷ ರೂ. ಸಹಾಯ ದೊರೆಯಲಿದೆ. ಸಾಲಕ್ಕೆ (Loan) 3%ರಿಂದ 6.5%ರ ವರೆಗಿನ ಬಡ್ಡಿ ರಿಯಾಯಿತಿ ನೀಡಲಾಗುವುದು. ಫಲಾನುಭವಿಯ ಹೆಸರಿನಲ್ಲಿ ಮನೆ ಇರಬಾರದು ಎಂಬುದು ಪ್ರಮುಖ ಅರ್ಹತೆ.
ಅರ್ಜಿ ಸಲ್ಲಿಸಲು pmaymis.gov.in ವೆಬ್‌ಸೈಟ್ ಮೂಲಕ ಪ್ರಕ್ರಿಯೆ ನಡೆಸಬಹುದಾಗಿದೆ.
Karnataka to Distribute 40,000 Homes Under PM Awas Yojana




