ಗೃಹಲಕ್ಷ್ಮಿ ಹಣ ಬಂತಾ, ಇಲ್ವಾ? ಎಷ್ಟು ಬಂದಿದೆ ಅಂತ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ - Karnataka Scheme

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರ ನೀಡುವ ₹2,000 ನೆರವು ಮೊಬೈಲ್ ಅಥವಾ ವೆಬ್‌ಸೈಟ್ ಮೂಲಕ ಖಾತೆಗೆ ಬಂದಿದೆಯೇ ಎಂದು ಚೆಕ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

  • ಗೃಹಲಕ್ಷ್ಮಿ ಯೋಜನೆ ಹಣದ ಸ್ಥಿತಿ ಮೊಬೈಲ್‌ನಲ್ಲಿ ತಿಳಿಯಬಹುದು
  • DBT Karnataka ಆಪ್ ಮೂಲಕ ಪೇಮೆಂಟ್ ಸ್ಟೇಟಸ್ ಪರಿಶೀಲನೆ
  • ಮಾಹಿತಿ ಕಣಜ ವೆಬ್‌ಸೈಟ್ ಮೂಲಕ ಖಾತೆ ವಿವರ ಪಡೆಯುವ ಅವಕಾಶ

ಬೆಂಗಳೂರು (Bengaluru): ಮಹಿಳೆಯರಿಗೆ ತಿಂಗಳಿಗೆ ₹2,000 ನೀಡುವ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಕಾಂಗ್ರೆಸ್ ಸರ್ಕಾರದ ಪ್ರಮುಖ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ.

ಇತ್ತೀಚೆಗೆ ಕೆಲ ತಾಂತ್ರಿಕ ಸಮಸ್ಯೆಗಳಿಂದ ಹಣ ಜಮಾ ವಿಳಂಬವಾದರೂ, ಅಧಿಕಾರಿಗಳು ಶೀಘ್ರದಲ್ಲೇ ಹಣ ಖಾತೆಗೆ ಬರುತ್ತದೆ ಎಂದು ಖಚಿತಪಡಿಸಿದ್ದಾರೆ. ಆದರೆ, ಹಣ ಬಂದಿದೆಯೇ ಎಂದು ಪರಿಶೀಲಿಸಲು ಸರಳ ಆನ್‌ಲೈನ್ ಮಾರ್ಗಗಳಿವೆ.

ಮೊದಲನೆಯದು, DBT Karnataka ಆಪ್. ಈ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಆಧಾರ್ ನಂಬರ್ ಹಾಕಿ OTP ಮೂಲಕ ಲಾಗಿನ್ ಮಾಡಿದ ನಂತರ mPIN ರಚಿಸಬಹುದು.

ಇದನ್ನೂ ಓದಿ: ಹೊಸ ವಿದ್ಯುತ್ ಸಂಪರ್ಕ ಈಗ ಸುಲಭ, ಆನ್‌ಲೈನ್‌ನಲ್ಲೇ ಎಲ್ಲಾ ಪ್ರಕ್ರಿಯೆ! ಬೆಂಗಳೂರು ವಾಸಿಗಳಿಗೆ ಬಿಗ್ ರಿಲೀಫ್

ಆ ಬಳಿಕ ಹೋಂ ಪೇಜ್‌ನಲ್ಲಿರುವ Payment Status ಆಯ್ಕೆ ಮಾಡಿದರೆ, ಈಗಾಗಲೇ ಬಂದಿರುವ ನೇರ ನಗದು ವರ್ಗಾವಣೆಯ ವಿವರಗಳು ಕಾಣಿಸುತ್ತವೆ. ಜೊತೆಗೆ, ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಸ್ಥಿತಿಯನ್ನೂ ಇಲ್ಲಿ ತಿಳಿಯಬಹುದು.

ಇದೇ ರೀತಿ, ಮಾಹಿತಿ ಕಣಜ (Mahiti Kanaja) ವೆಬ್‌ಸೈಟ್ ಕೂಡ ಪೇಮೆಂಟ್ ಪರಿಶೀಲನೆಗೆ ಬಳಸಬಹುದು. mahitikanaja.karnataka.gov.in ವೆಬ್‌ಸೈಟ್‌ಗೆ ಹೋಗಿ, ಟ್ರೆಂಡಿಂಗ್ ಸೇವೆಗಳು ವಿಭಾಗದಲ್ಲಿ “ಗೃಹಲಕ್ಷ್ಮಿ ಅರ್ಜಿ ಸ್ಥಿತಿ” ಕ್ಲಿಕ್ ಮಾಡಿ. ಪಡಿತರ ಚೀಟಿ ಸಂಖ್ಯೆ ನಮೂದಿಸಿದ ನಂತರ, ಹಣದ ವಿವರವನ್ನು ತಕ್ಷಣವೇ ಪಡೆಯಬಹುದು.

ಇದನ್ನೂ ಓದಿ: ಅರಣ್ಯ ಇಲಾಖೆಯಲ್ಲಿ 540 ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ! ಇಲ್ಲಿದೆ ಮಾಹಿತಿ

Gruha Lakshmi Scheme

ಗೃಹಲಕ್ಷ್ಮಿ ಹಣ ಖಾತೆಗೆ ಬಾರದಿದ್ದರೆ ಏನು ಮಾಡಬೇಕು?

ಇಂತಹ ಸಂದರ್ಭಗಳಲ್ಲಿ ಹತ್ತಿರದ CDPO ಕಚೇರಿ ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಆಧಾರ್ ಕಾರ್ಡ್, ಬ್ಯಾಂಕ್ ವಿವರ, ರೇಷನ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಮೊಬೈಲ್ ನಂಬರ್ ತೆಗೆದುಕೊಂಡು ಹೋಗುವುದು ಅಗತ್ಯ.

ಕೆಲವೊಮ್ಮೆ NPCI FAILURE ಅಥವಾ E-KYC ದೋಷದಿಂದ ಹಣ ಜಮಾ ಆಗದೆ ಇರಬಹುದು, ಅಂಥ ಸಂದರ್ಭಗಳಲ್ಲಿ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಬೇಕು.

ಇದನ್ನೂ ಓದಿ: ಗೃಹಲಕ್ಷ್ಮಿ ಬಾಕಿ ಹಣ, ಗೌರಿ-ಗಣೇಶ ಹಬ್ಬಕ್ಕೂ ಮುನ್ನವೇ 6000 ಮಹಿಳೆಯರ ಖಾತೆಗೆ

ಸರ್ಕಾರವು ಸಹಾಯಕ್ಕಾಗಿ ಟೋಲ್-ಫ್ರೀ ನಂಬರ್ 190700192216 ಹಾಗೂ 080-22279954 ಸೇರಿದಂತೆ ಇತರೆ ಸಂಪರ್ಕ ಸಂಖ್ಯೆಗಳನ್ನೂ ಒದಗಿಸಿದೆ. ಈ ಮೂಲಕ ಯೋಜನೆಯ ಫಲಾನುಭವಿಗಳು ತಮ್ಮ ಹಣದ ಸ್ಥಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

Check Gruha lakshmi Scheme Payment Status on Mobile

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories