14 ಗ್ರಾಮ ಪಂಚಾಯಿತಿಗಳು ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆ! ಭೂಮಿಗೆ ಚಿನ್ನದ ಬೆಲೆ
ತುಮಕೂರಿನ 14 ಗ್ರಾಮ ಪಂಚಾಯಿತಿಗಳು ಬೆಂಗಳೂರಿಗೆ ಸೇರ್ಪಡೆ ಆಗಲಿವೆ ಎಂಬ ಸುದ್ದಿ ರಿಯಲ್ ಎಸ್ಟೇಟ್ನಲ್ಲಿ ಧೂಳು ಎಬ್ಬಿಸಿದೆ. ಈ ಭಾಗಗಳಲ್ಲಿ ಜಾಗ ಇದ್ದರೆ, ಕೋಟ್ಯಾಧಿಪತಿ ಆಗುವುದು ಖಂಡಿತ!

- 14 ಗ್ರಾಮ ಪಂಚಾಯಿತಿಗಳು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆ ಸಾಧ್ಯತೆ
- ಸೇರ್ಪಡೆಗೊಳಗಾದ ಪ್ರದೇಶಗಳಲ್ಲಿ ಭೂಮಿಗೆ ಭರ್ಜರಿ ಬೆಲೆ ಏರಿಕೆ
- ರಿಯಲ್ ಎಸ್ಟೇಟ್ನಲ್ಲಿ ಬೂಸ್ಟ್, ಕೋಟ್ಯಾಧಿಪತಿಗಳ ಕನಸು ಸಾಕಾರ
ಬೆಂಗಳೂರು (Bengaluru): ಬೆಂಗಳೂರು ನಗರದ ಬ್ರ್ಯಾಂಡ್ ವ್ಯಾಲ್ಯೂ (Brand Value) ಮತ್ತಷ್ಟು ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ತುಮಕೂರಿನ 14 ಗ್ರಾಮ ಪಂಚಾಯಿತಿಗಳನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (GBDA) ವ್ಯಾಪ್ತಿಗೆ ಸೇರಿಸುವ ಚರ್ಚೆ ಭರ್ಜರಿಯಾಗಿ ಸಾಗುತ್ತಿದೆ.
ಈ ಯೋಜನೆ ಸಫಲವಾದರೆ, ಈ ಪ್ರದೇಶಗಳಲ್ಲಿ ಭೂಮಿ ಹೊಂದಿರುವವರು (Property in Bengaluru) ನಿಜಕ್ಕೂ ಕೋಟ್ಯಾಧಿಪತಿಗಳಾಗಬಹುದು!
ಇದನ್ನೂ ಓದಿ: ಕರ್ನಾಟಕ ರೈತರಿಗೆ ಸಬ್ಸಿಡಿ ಬೆಲೆಗೆ ಕೌಮ್ಯಾಟ್ ವಿತರಣೆ, ಇಂದೇ ಅರ್ಜಿ ಸಲ್ಲಿಸಿ
ಈ ಭಾಗಗಳಲ್ಲಿ ಈಗಾಗಲೇ ಜಾಗದ (Land) ಮೇಲೆ ಹೋರಾಟ ಶುರುವಾಗಿದೆ. ಭೂಮಿಯ ಬೆಲೆ ಷೇರುಮಾರುಕಟ್ಟೆಯಂತೆಯೇ ಏರಿಕೆಯಾಗುತ್ತಿದ್ದು, ಬೆಂಗಳೂರಿನ ಹೊರವಲಯ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ರಿಯಲ್ ಎಸ್ಟೇಟ್ (Real Estate) ಬೂಸ್ಟ್ ಆಗುತ್ತಿದೆ. ತಜ್ಞರ ಪ್ರಕಾರ, ಈ ಭಾಗಗಳಲ್ಲಿ ಇನ್ನು ಮುಂದೆ ಜಾಗ ಖರೀದಿ ಮಾಡುವವರು ಭವಿಷ್ಯದಲ್ಲಿ ಭಾರಿ ಲಾಭ ಕಾಣಬಹುದು.
ತುಮಕೂರು ಜಿಲ್ಲೆಯ ಹೆಸರನ್ನು ಬದಲಿಸಿ, ಅದನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಪರಿಗಣಿಸುವ ಪ್ರಸ್ತಾಪವನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಸಹ ಬಹಿರಂಗವಾಗಿ ಸ್ಪಷ್ಟನೆ ನೀಡಿದ್ದಾರೆ. ರಾಮನಗರದ ಹೆಸರು ಬದಲಾಗಿದಂತೆ, ತುಮಕೂರಿಗೂ ಅದೇ ಅನ್ವಯವಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕೊಟ್ಟ ಶಕ್ತಿ ಯೋಜನೆಯ ಬಿಗ್ ಅಪ್ಡೇಟ್
ಈ ಹಿಂದೆ ಬೆಂಗಳೂರಿನ ಮೇಲೆ ಉಂಟಾಗಿದ್ದ ಅಭಿವೃದ್ಧಿಯ ಒತ್ತಡವನ್ನು ಹಂಚಿಕೊಳ್ಳಲು, ರಾಜ್ಯ ಸರ್ಕಾರ (Karnataka Government) ಈಗಾಗಲೇ ಹೊಸ ಜಿಲ್ಲೆಗಳ ರೂಪದಲ್ಲಿ ಮುಂದಾಗಿದ್ದು, ದಕ್ಷಿಣ ಜಿಲ್ಲೆ ಉದಾಹರಣೆಯಾಗಿದೆ. ಇದೀಗ, ಹೊರವಲಯ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.
ಇದನ್ನೂ ಓದಿ: ಸರ್ಕಾರಿ ಭೂಮಿಯ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ಮಹತ್ವದ ಮಾಹಿತಿ
14 ಗ್ರಾಮ ಪಂಚಾಯಿತಿಗಳ ಸೇರ್ಪಡೆ ಕೇವಲ ಸ್ಥಳೀಯ ಮಟ್ಟದ ಚರ್ಚೆಯಲ್ಲ. ಇದು ಬೃಹತ್ ಆರ್ಥಿಕ ಬದಲಾವಣೆಗೆ ನಾಂದಿ ಹಾಕಬಹುದ್ದಾಗಿದೆ. ಈ ಪ್ರದೇಶಗಳಲ್ಲಿ ಜಾಗ ಹೊಂದಿರುವವರು ಇದೀಗ ತಮ್ಮ ಭೂಮಿಯನ್ನು “ಬಂಗಾರದಂತೆಯೇ” ನೋಡುತ್ತಿರುವುದು ವಾಸ್ತವ. ಈ ಪ್ರದೇಶಗಳಲ್ಲಿ ಚಿನ್ನದ ಬೆಲೆಗೂ ಮಿಗಿಲಾದ ಭೂಮಿ ಮೌಲ್ಯ ಕಂಡುಬರುತ್ತಿದೆ.
ಇದೊಂದು ಬಂಪರ್ ಗಿಫ್ಟ್ ಆಗಿದ್ದು, ಕೆಲವೇ ವರ್ಷಗಳಲ್ಲಿ ಈ ಭಾಗಗಳು ಹೊಸದೊಂದು ಆವೃತ್ತಿಗೆ ತಿರುಗಬಹುದು. ಈಗಲೇ ಜಾಗ ಖರೀದಿಸುವ, ಮನೆ ಕಟ್ಟುವ ಪ್ಲ್ಯಾನ್ಗಳು ಸಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ನಿಜಕ್ಕೂ, ಈ ಭಾಗಗಳಲ್ಲಿ ಜಾಗ ಇದ್ದರೆ, ನೀವೇ ಮುಂದಿನ ಕೋಟ್ಯಾಧಿಪತಿಗಳು!
Land turns to gold near Bengaluru








