ಬೆಂಗಳೂರು: ಮದುವೆಗಳಲ್ಲಿ ಚಿನ್ನ ದೋಚುತ್ತಿದ್ದ ಖಾಸಗಿ ಕಾಲೇಜಿನ ಕನ್ನಡ ಲೆಕ್ಚರರ್‌ ಬಂಧನ

ಮದುವೆ ಸಮಾರಂಭಗಳಿಗೆ ಬಂಧುವಿನಂತೆ ತೆರಳಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಖಾಸಗಿ ಕಾಲೇಜಿನ ಕನ್ನಡ ಲೆಕ್ಚರರ್‌ ರೇವತಿಯನ್ನು ಬೆಂಗಳೂರು ಬಸವೇಶ್ವರನಗರ ಪೊಲೀಸರು ಬಂಧಿಸಿ ಭಾರೀ ಚಿನ್ನ ವಶಪಡಿಸಿಕೊಂಡಿದ್ದಾರೆ.

  • ಮದುವೆಗಳಲ್ಲಿ ಚಿನ್ನ ದೋಚುತ್ತಿದ್ದ ಕನ್ನಡ ಲೆಕ್ಚರರ್‌
  • ಬಸವೇಶ್ವರನಗರ ಪೊಲೀಸ್‌ ಕಾರ್ಯಾಚರಣೆ, 3 ಪ್ರಕರಣ ಪತ್ತೆ
  • ಆಕೆಯಿಂದ ₹32 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು (Bengaluru): ಮದುವೆ ಸಮಾರಂಭಗಳನ್ನೇ ಗುರಿಯಾಗಿಸಿಕೊಂಡು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ (Wedding Theft) ಮಹಿಳೆಯೊಬ್ಬರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕನ್ನಡ ಲೆಕ್ಚರರ್‌ (Kannada Lecturer) ಆಗಿ ಕೆಲಸ ಮಾಡುತ್ತಿದ್ದ ರೇವತಿ ಈ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ ಮೂಲದ ರೇವತಿ, ಕೆಆರ್ ಪುರನಲ್ಲಿ ವಾಸವಾಗಿದ್ದು, ಬೆಳ್ಳಂದೂರು ಸಮೀಪದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ವಾರಾಂತ್ಯ ಬಂದರೆ ಸಾಕು, ಯಾವ ಮದುವೆ ಎಲ್ಲಿದೆ ಎಂದು ಫಂಕ್ಷನ್‌ ಹಾಲ್‌ಗಳ ಸುತ್ತಾಟ, ಬಂಧುವಿನಂತೆ ಪರಿಚಯ, ಸೌಹಾರ್ದ ಮಾತು, ಇವೆಲ್ಲ ಆಕೆಯ ರೂಢಿ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸರಣಿ ಚೋರಿ! ಜೈಲಲ್ಲಿ ಹುಟ್ಟಿದ ಸ್ನೇಹ, ಹೊರಬಂದು ಕಳ್ಳತನ: ಪೊಲೀಸರ ಬಲೆಗೆ

ಮದುವೆ ಊಟ, ನಂತರ ಚಿನ್ನ ಕಳ್ಳತನ

ಆತಿಥ್ಯ ಸ್ವೀಕರಿಸಿ ಊಟ ಮುಗಿಸಿದ ಬಳಿಕ, ಮಹಿಳೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣಗಳನ್ನು ಎತ್ತಿಕೊಂಡು ಹೊರಬರುವುದು ಆಕೆಯ ಕಾರ್ಯಪದ್ದತಿ. ಶನಿವಾರ ರಾತ್ರಿ ಸಮಾರಂಭಗಳು ನಡೆಯುವ ಹಾಲ್‌ಗಳಿಗೆ ಭೇಟಿ ನೀಡಿ ಮದುವೆ ಸ್ಥಳಗಳನ್ನು ಗುರುತಿಸುವುದು ಆಕೆಯ ವಿಶೇಷತೆಯಾಗಿದೆ.

ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಚೋರಿ ಪ್ರಕರಣಗಳ ತನಿಖೆ ವೇಳೆ ರೇವತಿ ಕೈಗೆ ಸಿಕ್ಕಿಬಿದ್ದಿದ್ದು, ಆಕೆಯಿಂದ 262 ಗ್ರಾಂ ಚಿನ್ನಾಭರಣ ಸೇರಿದಂತೆ ಸುಮಾರು ₹32 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮ್ಯಾಂಡ್‌ಗೆ ಕಳುಹಿಸಲಾಗಿದೆ.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories