Bangalore News

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಕಾರಿನಲ್ಲೆ ವ್ಯಕ್ತಿ ಸಜೀವ ದಹನ

ಬೆಂಗಳೂರು (Bengaluru): ಅನುಮಾನಾಸ್ಪದ ರೀತಿಯಲ್ಲಿ ಕಾರಿನಲ್ಲಿ ಕುಳಿತಿದ್ದ ಕಾರಿನ ಮಾಲೀಕ ಸಜೀವ ದಹನ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ನಡೆದಿದೆ.

ಖಾಲಿ ಜಾಗದಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಸ್ಕೋಡಾ ಕಾರಿಗೆ (Skoda Car) ಬೆಂಕಿ ಹೊತ್ತಿಕೊಂಡಿತ್ತು, ಅದರಲ್ಲಿ ಕುಳಿತಿದ್ದ ವ್ಯಕ್ತಿಯೂ ಸುಟ್ಟು ಬೂದಿಯಾಗಿದ್ದಾನೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಕಾರಿನಲ್ಲೆ ವ್ಯಕ್ತಿ ಸಜೀವ ದಹನ

ಬ್ಯಾಡರಹಳ್ಳಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ಕಾರು ಹಾಗೂ ಅದರಲ್ಲಿದ್ದವರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಇದುವರೆಗೂ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಕೊಲೆಯೋ ಆತ್ಮಹತ್ಯೆಯೋ ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ.

ಇನ್ನೊಂದೆಡೆ ಕಾರು ಮಾಲೀಕ ಓರ್ವ ಉದ್ಯಮಿ ಎಂದು ತಿಳಿದು ಬಂದಿದ್ದು, ಆತ ಪೆಟ್ರೋಲ್ ಬಂಕ್ ನಲ್ಲಿ (Petrol Bunk) ಪೆಟ್ರೋಲ್ ಖರೀದಿ ಮಾಡುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ, ಮೈದಾನದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡ ಕೂಡಲೇ ಅಲ್ಲೇ ಆಟವಾಡುತ್ತಿದ್ದ ಹುಡುಗರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು, ಪ್ರಾಥಾಮಿಕವಾಗಿ ಆತ ಸಾಲದ ಸುಳಿಯಲ್ಲಿ ಸಿಲುಕಿದ್ದ ಎಂಬ ಮಾಹಿತಿ ಸಿಕ್ಕಿದೆ

Man burnt alive in car in Byadarahalli Bengaluru

Our Whatsapp Channel is Live Now 👇

Whatsapp Channel

Related Stories