ನಮ್ಮ ರಾಜ್ಯದ ಮಹಿಳೆಯರು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಇನ್ನು ಕೂಡ ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿಲ್ಲ ಎಂದು ಆತಂಕಗೊಂಡು, ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಲೇ ಇದ್ದಾರೆ.
ಇತ್ತ ಸರ್ಕಾರವು ಆದಷ್ಟು ಬೇಗ ಹಣ ವರ್ಗಾವಣೆ ಆಗುತ್ತದೆ ಎಂದು ಹೇಳುತ್ತಿದ್ದರು ಕೂಡ, ಮಹಿಳೆಯರ ಬ್ಯಾಂಕ್ ಖಾತೆಗೆ ಇನ್ನು ಕೂಡ 11 ಮತ್ತು 12ನೇ ಕಂತಿನ ಹಣ ವರ್ಗಾವಣೆ ಆಗಿರಲಿಲ್ಲ. ಆದರೆ ಈಗ ಸರ್ಕಾರದಿಂದ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಒಟ್ಟಿಗೆ ₹4000 ರೂಪಾಯಿಗಳು ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಜಮೆ ಆಗಲಿದೆ.
ಹೌದು, ಮಹಿಳೆಯರ ಆತಂಕ ಕಡಿಮೆ ಮಾಡುವಂಥ ಸುದ್ದಿ ಇದಾಗಿದ್ದು, ರಾಜ್ಯದ ಎಲ್ಲಾ ಮಹಿಳೆಯರು ಕೂಡ ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಹಣವನ್ನು ಶೀಘ್ರದಲ್ಲೇ ಪಡೆಯಲಿದ್ದು, ಇದು ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಸರ್ಕಾರವು ಮಹಿಳೆಯರಿಗೆ ಗಿಫ್ಟ್ ಇದ್ದ ಹಾಗೆ ಆಗಿದೆ.
ಮೊದಲ ಹಂತದಲ್ಲಿ ಈ ಕೆಲವು ಜಿಲ್ಲೆಯ ಮಹಿಳೆಯರಿಗೆ 2 ತಿಂಗಳ ಗೃಹಲಕ್ಷ್ಮಿ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ (Bank Transfer) ಮಾಡಲಾಗುತ್ತದೆ ಎಂದು ಸರ್ಕಾರದ ಪರವಾಗಿ ಮಹಿಳಾ ಮತ್ತು ಹಣಕಾಸು ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ..
ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ಆದೇಶ! ಸರ್ಕಾರದಿಂದ ಹೊಸ ನಿರ್ಧಾರ
ಇತ್ತೀಚೆಗೆ ನಡೆದ ಕಾಂಗ್ರೆಸ್ ಆಂದೋಲನದಲ್ಲಿ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಪ್ಡೇಟ್ ಕೊಟ್ಟಿದ್ದಾರೆ. ಅವರು ಹೇಳಿರುವ ಮಾತಿನ ಅನುಸಾರ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದ್ದ ಕಾರಣ, ಮಹಿಳೆಯರಿಗೆ ಆ ಎರಡು ಕಂತುಗಳ ಹಣ ವರ್ಗಾವಣೆ ಆಗಿಲ್ಲ. ಆದರೆ ಇನ್ನೂ ಕೆಲವೇ ದಿನಗಳಲ್ಲಿ ಹಣ ವರ್ಗಾವಣೆ ಆಗಲಿದ್ದು, ಈಗಾಗಲೇ ಈ ಪ್ರಕ್ರಿಯೆಯನ್ನು ಸಹ ಸರ್ಕಾರ ಶುರು ಮಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ..
ಮೊದಲ ಸುಮಾರು 26.65 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಆಗಿದ್ದು, ಬೆಳಗಾವಿ, ಬೀದರ್, ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಹಾವೇರಿ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಈ ಜಿಲ್ಲೆಯಲ್ಲಿರುವ ಮಹಿಳೆಯರಿಗೆ ಮೊದಲ ಹಂತದಲ್ಲಿ ಎರಡು ತಿಂಗಳುಗಳ ಹಣ ಒಟ್ಟಾರೆಯಾಗಿ ₹4000 ರೂಪಾಯಿಗಳು ಅವರ ಬ್ಯಾಂಕ್ ಖಾತೆಗಳಿಗೆ ಜಮೆ (Money Deposit) ಆಗಲಿದೆ. ಮಹಿಳೆಯರು ತಮಗೆ ಹಣ ಬಂದಿದ್ಯಾ ಎಂದು ಡಿಬಿಟ್ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ಗೃಹಲಕ್ಷ್ಮಿ ಹಣ ಬಂದಿದ್ಯಾ ಎಂದು ತಿಳಿಯುವುದು ಹೇಗೆ?
ಕೆಲವು ವಿವಿಧ ವಿಧಾನಗಳನ್ನು ಅನುಸರಿಸುವ ಮೂಲಕ, ತಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದ್ಯಾ ಎಂದು ಚೆಕ್ ಮಾಡಬಹುದು..
*ಮೊದಲಿಗೆ ಗೃಹಲಕ್ಷ್ಮೀ ಯೋಜನೆಗೆ ಲಿಂಕ್ ಮಾಡಿರುವ ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್ (Bank Balance) ಹಾಗೂ ಬ್ಯಾಂಕ್ ಸ್ಟೇಟ್ಮೆಂಟ್ ಚೆಕ್ ಮಾಡುವ ಮೂಲಕ ಹಣ ಬಂದಿದ್ಯಾ ಎಂದು ಚೆಕ್ ಮಾಡಬಹುದು.
*ಸರ್ಕಾರ ಬಿಡುಗಡೆ ಮಾಡಿರುವ ಡಿಬಿಟಿ ಕರ್ನಾಟಕ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿ, ಅದಕ್ಕೆ ನಿಮ್ಮ ಮಾಹಿತಿಗಳನ್ನು ಬಳಸಿ ಲಾಗಿನ್ ಮಾಡಿ, ನಂತರ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು.
ಈ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಅಕೌಂಟ್ ಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿದ್ಯಾ ಎಂದು ಚೆಕ್ ಮಾಡಿ..
Money deposit for the women of this district, Big update about Gruha Lakshmi Yojana
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.