ಬೆಂಗಳೂರು ನಗರದಲ್ಲಿ ಸುರಿದ ಮಳೆಗೆ ಮುಳುಗಿದ 30ಕ್ಕೂ ಹೆಚ್ಚು ಬೈಕ್ ಗಳು
ಬೆಂಗಳೂರು ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ (Bengaluru Rains) ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ (Bengaluru Rains) ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರವಾಸಿಗಳು ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ.
ನಗರದಲ್ಲಿ ಬುಧವಾರ ಸಂಜೆ 4 ಗಂಟೆಯಿಂದ ಸುರಿದ ಭಾರಿ ಮಳೆಗೆ (Heavy Rain) ರಿಚ್‌ಮಂಡ್ ರಸ್ತೆ ಜಲಾವೃತವಾಗಿತ್ತು. ಪಕ್ಕದಲ್ಲಿ ನಿಲ್ಲಿಸಿದ್ದ 30ಕ್ಕೂ ಹೆಚ್ಚು ಬೈಕ್ ಗಳು (Bikes) ನೀರಿನಲ್ಲಿ ಮುಳುಗಿದ್ದವು. ಅಷ್ಟರಲ್ಲಿ ಮರದ ಕೊಂಬೆ ಮುರಿದು ಆ ಬೈಕ್‌ಗಳ ಮೇಲೆ ಬಿದ್ದಿದೆ.
ಬೆಂಗಳೂರು ಜನಜೀವನ ದುಸ್ತರ! ಎಡೆಬಿಡದ ಮಳೆ, ಹಲವು ರಸ್ತೆಗಳು ಇನ್ನೂ ಜಲಾವೃತ
ವಿಧಾನಸೌಧ, ಕೆ.ಆರ್.ವೃತ್ತ, ಮೈಸೂರು ಬ್ಯಾಂಕ್ ವೃತ್ತ (Mysore Bank Circle), ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಕಾರ್ಪೊರೇಷನ್, ಶಾಂತಿನಗರ, ರಿಚ್ಮಂಡ್ ವೃತ್ತ, ಶಿವಾಜಿನಗರ, ಜಯನಗರ ಸೇರಿದಂತೆ ಎಲ್ಲ ಪ್ರಮುಖ ಪ್ರದೇಶಗಳು ತೀವ್ರ ಟ್ರಾಫಿಕ್ ಸಮಸ್ಯೆಯಿಂದ ಜಲಾವೃತಗೊಂಡಿತ್ತು.
More than 30 bikes drowned in the rain in Bengaluru city