ಬೆಂಗಳೂರು: ‘ಹೌ ಟು ಕಿಲ್’ ಪುಸ್ತಕ ಓದಿ ಅಳಿಯನ ಹತ್ಯೆ ಮಾಡಿದ ಅತ್ತೆ
ನಿದ್ರೆ ಮಾತ್ರೆ, ಮದ್ಯದ ಮೂಲಕ ಪ್ಲಾನ್, ಹತ್ಯೆಗೆ ತಾಯಿ ಜೊತೆಗೆ ಮಗಳು ಸೇರಿಕೊಂಡು ಸಂಚು. ಹತ್ಯೆಗೆ ಮುನ್ನ ಈ ಇಬ್ಬರೂ ‘ಹೌ ಟು ಕಿಲ್’ ಎಂಬ ಪುಸ್ತಕ ಓದಿದ್ದು ಬಹಿರಂಗ.
Publisher: Kannada News Today (Digital Media)
- ‘ಹೌ ಟು ಕಿಲ್’ (How to Kill) ಪುಸ್ತಕ ಓದಿ ಹತ್ಯೆ ಪ್ಲಾನ್ ಮಾಡಿದ ಅತ್ತೆ
- ನಿದ್ರೆ ಮಾತ್ರೆ ಹಾಕಿ, ಮದ್ಯ ಕುಡಿಸಿ ಹತ್ಯೆ ಮಾಡಿದ ಶಾಕಿಂಗ್ ಘಟನೆ
- ನಿದ್ರೆ ಮಾತ್ರೆ ಬೆರೆಸಿದ ಆಹಾರ ನೀಡಿ, ನಂತರ ಕತ್ತು (throat) ಕೊಯ್ದು ಹತ್ಯೆ
ಬೆಂಗಳೂರು (Bengaluru): ಯಶವಂತಪುರದ ಮಾಗಡಿ ರಸ್ತೆಯ ರಿಯಲ್ ಎಸ್ಟೇಟ್ ವ್ಯವಹಾರಿಯ ಹತ್ಯೆ ಪ್ರಕರಣದ ತನಿಖೆಯಲ್ಲಿ ದಿನದಿಂದ ದಿನಕ್ಕೆ ಹೊಸ ಅಂಶಗಳು ಬೆಳಕಿಗೆ ಬರುತ್ತಿವೆ.
37 ವರ್ಷದ ಲೋಕನಾಥ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಆತನ ಪತ್ನಿ ಯಶಸ್ವಿ ಹಾಗೂ ಅತ್ತೆ ಹೇಮಾ, ಹತ್ಯೆಗಾಗಿ ಅಚ್ಚರಿಯ ಪ್ಲಾನ್ ಮಾಡಿದ್ದರು ಎಂಬುದು ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಬಹಿರಂಗವಾಗಿದೆ.
ಹತ್ಯೆಗೆ ಮುನ್ನ ಈ ಇಬ್ಬರೂ ‘ಹೌ ಟು ಕಿಲ್’ ಎಂಬ ಪುಸ್ತಕ ಓದಿದ್ದು, ಅಲ್ಲಿಂದಲೇ ಸಂಚು ರೂಪಿಸಿಕೊಂಡಿದ್ದಾರೆ. ಇಂಟರ್ನೆಟ್ ಮೂಲಕ ಸಹ ಉಪಾಯಗಳ ಬಗ್ಗೆ ಸಂಶೋಧನೆ ನಡೆಸಿದ ಹೇಮಾ, ಮಗಳಿಗೆ “ಊಟದಲ್ಲಿ ನಿದ್ರೆ ಮಾತ್ರೆ (sleeping pills) ಬೆರೆಸು” ಎಂದು ಸಲಹೆ ನೀಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಪರಾರಿಯಾದ ಪತಿ
ಹತ್ಯೆಯ ಕ್ರಮ:
ಘಟನೆ ನಡೆದ ದಿನ, ಭಾನುವಾರ ರಾತ್ರಿ ಲೋಕನಾಥ್ ಅನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು, ಆತನಿಗೆ ಮದ್ಯ (alcohol) ಕುಡಿಸಿದರು. ಅದಾದ ಬಳಿಕ, ನಿದ್ರೆ ಮಾತ್ರೆ ಬೆರೆಸಿದ ಆಹಾರ ನೀಡಿ, ನಂತರ ಕತ್ತು (throat) ಕೊಯ್ದು ಹತ್ಯೆ ಮಾಡಿದರು.
ಹತ್ಯೆಗೆ ಕಾರಣವೇನು?
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಯಶಸ್ವಿಯ ಬಗ್ಗೆ ಖಾಸಗಿ ವೀಡಿಯೋ ಹೊಂದಿದ್ದ ಲೋಕನಾಥ್, ಅದನ್ನು ಬಳಸಿಕೊಂಡು ಹೆದರಿಸುತ್ತಿದ್ದ. ಜೊತೆಗೆ ಮತ್ತೊಬ್ಬಳನ್ನು ಮದುವೆಯಾಗುವ ಯೋಜನೆ ಬಿಚ್ಚಿಟ್ಟಿದ್ದಕ್ಕೆ, ಆಕ್ರೋಶಗೊಂಡ ಪತ್ನಿ ಮತ್ತು ಅತ್ತೆ ಈ ಕ್ರಮ ಕೈಗೊಂಡಿದ್ದಾರೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
Mother-in-Law Kills Son-in-Law in Bengaluru