ಬೆಂಗಳೂರಿನಲ್ಲಿ 5 ವರ್ಷದ ಮಗುವನ್ನು ಕೊಂದ ತಾಯಿ! ಆಮೇಲೆ ಮಾಡಿದ್ದೇನು ಗೊತ್ತಾ
ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಗೃಹಿಣಿಯು ತನ್ನ ಮಗುವನ್ನು ಕೊಲೆ ಮಾಡಿ, ತಾನೂ ಸಾವಿಗೆ ಶರಣಾದ ಘಟನೆ ನಡೆದಿದೆ.
- ಪತಿ ವಿರುದ್ಧ ಅಕ್ರಮ ಸಂಬಂಧ ಆರೋಪ, ಗೃಹಿಣಿ ಶೃತಿ ಸಾವಿಗೆ ಶರಣು
- 5 ವರ್ಷದ ಮಗಳು ರೋಶಿಣಿಯನ್ನು ಕೊಲೆ ಮಾಡಿದ ತಾಯಿ
- ಪತಿ ಗೋಪಾಲಕೃಷ್ಣ ವಿರುದ್ಧ ಅಕ್ರಮ ಸಂಬಂಧ ಆರೋಪ
ಬೆಂಗಳೂರು (Bengaluru): ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧಾರುಣ ಘಟನೆ ಸಂಭವಿಸಿದೆ. ಶೃತಿ (33) ಎಂಬ ಗೃಹಿಣಿಯು ತನ್ನ 5 ವರ್ಷದ ಮಗಳನ್ನು ಕೊಲೆಮಾಡಿ ಬಳಿಕ ತಾನೂ ಸಾವಿಗೆ ಶರಣಾದ ಘಟನೆ ಭಾನುವಾರ ಸಂಜೆ ರಾಮಯ್ಯ ಲೇಔಟ್ ನಲ್ಲಿ ನಡೆದಿದೆ.
ಮೂಲತಃ ಪಾವಗಡ ತಾಲೂಕಿನ ಒಂದು ಗ್ರಾಮಕ್ಕೆ ಸೇರಿದ ಶೃತಿ, ಈ ಹಿಂದೆ ಪಂಚಾಯತ್ ಕಚೇರಿಯಲ್ಲಿ ಆಡಿಟಿಂಗ್ ಕಾರ್ಯವನ್ನು ನಿರ್ವಹಿಸಿದ್ದ ಗೋಪಾಲಕೃಷ್ಣ ಅವರನ್ನು ಪ್ರೀತಿಸಿ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದರು.
ಆದರೆ ಭಾನುವಾರ ಪತಿ ಮನೆಯಿಂದ ಹೊರಗಡೆ ಹೋದಾಗ, ಶೃತಿ ಆತನ ವಿರುದ್ಧ ಅಕ್ರಮ ಸಂಬಂಧ ಆರೋಪ ಮಾಡಿ ಪತ್ರ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಆಟವಾಡುತ್ತಿದ್ದ ಹಿರಿಯ ಮಗ ಮನೆಯೊಳಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಪತಿ ಮನೆಯಿಂದ ಹೊರಹೋದ ವೇಳೆ ಶೃತಿ ತನ್ನ ಮಗಳನ್ನು ಕೊಂದು ಸಾವಿಗೆ ಶರಣಾಗಿದ್ದಾರೆ. ಘಟನೆಯ ಬಗ್ಗೆ ಪತಿ ಗೋಪಾಲಕೃಷ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Mother kills child in Bengaluru
Our Whatsapp Channel is Live Now 👇