ಬೆಂಗಳೂರಿನಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ

Story Highlights

ದಂಪತಿ ನಡುವೆ ಮೊಬೈಲ್ ನಲ್ಲಿ ಯುವತಿಯೊಂದಿಗೆ ಮಾತನಾಡುತ್ತಿರುವ ಬಗ್ಗೆ ಜಗಳ ನಡೆದು ಕೊನೆಗೆ ಮಕ್ಕಳ ಸಾವಿನೊಂದಿಗೆ ಅಂತ್ಯವಾಗಿದೆ

ಬೆಂಗಳೂರು (Bengaluru): ಮಕ್ಕಳನ್ನು ತಾಯಿಯೇ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಜಾರ್ಖಂಡ್ ಮೂಲದ ಸುನೀಲ್ಸಾಹು ಮತ್ತು ಮಮತಾಸಾಹು ದಂಪತಿಗಳು. ಅವರಿಗೆ ಶುಂಭುಸಾಹು (7) ಮತ್ತು ಶ್ರೇಯಾ (3) ಎಂಬ ಇಬ್ಬರು ಮಕ್ಕಳಿದ್ದರು. 8 ತಿಂಗಳ ಹಿಂದೆ ಬೆಂಗಳೂರು ನಗರಕ್ಕೆ ಬಂದು ಉತ್ತರಹಳ್ಳಿ ಮುನಿಸ್ವಾಮಿಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಸುನಿಲ್ ಸಾಹು ಓಲಾ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಯುವತಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ಪತ್ನಿ ಪತಿಯಿಂದಿಗೆ ಜಗಳವಾಡಿದ್ದಾರೆ. ಗುರುವಾರ ರಾತ್ರಿ ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ.

ಈ ವೇಳೆ ಪತಿ ಸುನೀಲಸಾಹು ಹೊರಗೆ ಹೋಗಿದ್ದಾಗ, ಹಗ್ಗದಿಂದ ಕತ್ತು ಹಿಸುಕಿ ಇಬ್ಬರು ಮಕ್ಕಳನ್ನು ಕೊಂದ ಮಮತಾ ಸಾಹು, ಹಗ್ಗದಿಂದ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಹಗ್ಗ ತುಂಡಾಗಿದೆ. ಬಳಿಕ ಚಾಕುವಿನಿಂದ ಕತ್ತು ಕೊಯ್ದುಕೊಂಡು ಕೆಳಗೆ ಬಿದ್ದಿದ್ದಾಳೆ.

ಹೊರಗೆ ಹೋಗಿದ್ದ ಪತಿ ರಾತ್ರಿ 10.30ರ ವೇಳೆಗೆ ಮನೆಗೆ ಬಂದು ನೋಡಿದಾಗ ಮಕ್ಕಳು ಕೊಲೆಯಾಗಿರುವುದು ಕಂಡು ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ, ಪ್ರಾಣಾಪಾಯದಿಂದ ಆಕೆ ಪಾರಾಗಿದ್ದಾರೆ.

ಆದರೆ ದುಡುಕಿನ ನಿರ್ಧಾರದಿಂದ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ, ಮಕ್ಕಳ ಸಾವಿನ ಕುರಿತು ಸುನೀಲಸಾಹು ಅವರು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Mother Kills Two Children and Attempts Suicide in Bengaluru, Investigation Underway

English Summary
Related Stories