ಬೆಂಗಳೂರು: ಕೆರೆಯಲ್ಲಿ ಯುವತಿ ಅನುಮಾನಸ್ಪದ ಸಾವು, ತಂದೆಯ ಮೇಲೆಯೇ ಅನುಮಾನ!
ಹುಸ್ಕೂರು ಕೆರೆಯಲ್ಲಿ ಬೈಕ್ ಬಿದ್ದು, ಆಕೆಯ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಪ್ರಿಯಕರನ ಕುಟುಂಬ ಈ ಸಾವನ್ನು ಸಾವು ಅಲ್ಲ, ಹತ್ಯೆ ಎಂದು ಆರೋಪಿಸುತ್ತಿದೆ.
- ತಂದೆ, ಮಗಳು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹುಸ್ಕೂರು ಕೆರೆಗೆ ಬಿದ್ದ ಘಟನೆ
- ತಂದೆ ದಡ ಸೇರಿ ಪೊಲೀಸ್ ಠಾಣೆಗೆ ಹೋಗಿದ್ರೆ, ಮಗಳು ನೀರಿನಲ್ಲಿ ಮುಳುಗಿ ಸಾವು
- ಪ್ರಿಯಕರನ ಕುಟುಂಬ ಪೋಷಕರ ವಿರುದ್ಧ ಹತ್ಯೆ ಆರೋಪ
ಬೆಂಗಳೂರು (Bengaluru): ಆನೇಕಲ್ ತಾಲೂಕಿನ ಹುಸ್ಕೂರು ಕೆರೆಯಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಸಹನಾ (21) ಎಂಬ ಯುವತಿ ಕಳೆದ ಒಂದು ವರ್ಷದಿಂದ ನಿತಿನ್ ಎಂಬ ಯುವಕನೊಂದಿಗೆ ಪ್ರೀತಿಯಲ್ಲಿ ಇದ್ದಳು. ಈ ವಿಷಯ ಪೋಷಕರಿಗೆ ತಿಳಿದು ಬಂದಾಗ, ತಂದೆ ರಾಮಮೂರ್ತಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಪ್ರೀತಿಗೆ ತಕ್ಷಣ ಒಪ್ಪದ ತಂದೆ, ಮಗಳ ಮೇಲೆ ಹಲ್ಲೆ ಮಾಡಿ, ವಿವಾಹಕ್ಕೆ ಒಪ್ಪುವುದಿಲ್ಲ ಎಂದು ತೀವ್ರ ಒತ್ತಡ ತಂದಿದ್ದರು.
ಬೆಂಗಳೂರಿನಲ್ಲಿ ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಗೆಳೆಯನಿಂದಲೇ ಕೊಲೆ
ಈ ನಡುವೆ ಇಬ್ಬರ ಪ್ರೀತಿಯನ್ನು ಒಪ್ಪಿಸಿಕೊಳ್ಳಲು ಯುವತಿಯ ಪ್ರಿಯಕರನ ತಾಯಿ ಮನವಿ ಮಾಡಿದ್ದರೂ, ಸಹನಾ ತಂದೆ ಮದುವೆಗೆ ಒಪ್ಪಲಿಲ್ಲ. ಈ ಮಧ್ಯೆ 2 ದಿನದ ಹಿಂದೆ, ಈ ವಿಷಯವನ್ನು ಪರಿಹಾರ ಮಾಡುವ ನೆಪದಲ್ಲಿ ಸಹನಾಳನ್ನು ತಂದೆ ಕರೆದೊಯ್ದರು. ಆದರೆ ಮಾರ್ಗ ಮಧ್ಯೆ ಹುಸ್ಕೂರು ಕೆರೆಯಲ್ಲಿ (Huskur Lake) ಬೈಕ್ ಬಿದ್ದು, ಆಕೆಯ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಪ್ರಿಯಕರನ ಕುಟುಂಬ ಈ ಸಾವನ್ನು ಸಾವು ಅಲ್ಲ, ಹತ್ಯೆ ಎಂದು ಆರೋಪಿಸುತ್ತಿದೆ.
ಬೆಂಗಳೂರು ಕಾಡುಗೋಡಿಯಲ್ಲಿ 20ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕಿ ಸಾವು
ಪೊಲೀಸರ ತನಿಖೆ ಮುಂದುವರಿದಿದೆ
ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ. ಸಹನಾಳ ತಂದೆ ಈ ಪ್ರಕರಣದಲ್ಲಿ ನಿಜಕ್ಕೂ ಆರೋಪಿಯೇ ಅಥವಾ ನಿಜಕ್ಕೂ ಇದು ಅಪಘಾತವೇ ಎಂಬುದನ್ನು ತನಿಖೆ ಸ್ಪಷ್ಟಪಡಿಸಲಿದೆ.
Mysterious Death of Young Woman in Bengaluru Anekal Lake
Our Whatsapp Channel is Live Now 👇