ಬೆಂಗಳೂರು ಚಂದಾಪುರ ಬಳಿ ನಿಗೂಢ ಸ್ಫೋಟ
ಬೆಂಗಳೂರಿನ ಚಂದಾಪುರ ಬಳಿ ಸಂಭವಿಸಿದ ನಿಗೂಢ ಸ್ಪೋಟದಿಂದ ಜನರಲ್ಲಿ ಆತಂಕ ಸೃಷ್ಟಿಯಾಯಿತು. ಅಂಡರ್ ಗ್ರೌಂಡ್ ಗ್ಯಾಸ್ ಪೈಪ್ ಲೈನ್ ಇರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ತನಿಖೆ ಆರಂಭವಾಗಿದೆ.

- ಬೆಂಗಳೂರು ಚಂದಾಪುರ ಬಳಿ ಭಾರೀ ಸ್ಪೋಟದಿಂದ ರಸ್ತೆ ನಾಶ
- ಸುತ್ತಮುತ್ತಲ ಜನರಲ್ಲಿ ಆತಂಕ
- ಅಂಡರ್ ಗ್ರೌಂಡ್ ಗ್ಯಾಸ್ ಪೈಪ್ ಲೈನ್ ಎಂಬ ಶಂಕೆ
ಬೆಂಗಳೂರು (Bengaluru): ಸೋಮವಾರ ಬೆಳಿಗ್ಗೆ ಬೆಂಗಳೂರಿನ ಚಂದಾಪುರದ ಸಮೀಪವಿರುವ ಬನಹಳ್ಳಿ ಪ್ರದೇಶದಲ್ಲಿ ಸಂಭವಿಸಿದ ಭಾರೀ ಸ್ಪೋಟದಿಂದ ಜನರ ಮಧ್ಯೆ ಭೀತಿಯ ವಾತಾವರಣ ನಿರ್ಮಾಣವಾಯಿತು. ಸ್ಪೋಟದ ಶಬ್ದ ಹತ್ತಿರದ ಪ್ರದೇಶದವರನ್ನೆಲ್ಲಾ ತೀವ್ರ ಆತಂಕಕ್ಕೆ ಒಳಪಡಿಸಿತು.
ಸ್ಫೋಟದ ತೀವ್ರತೆಗೆ ಸಿಮೆಂಟ್ (cement road) ರಸ್ತೆಯ ಭಾಗವೂ ಸೀರುವಂತೆ ನಾಶವಾಗಿದ್ದು, ಇದರಿಂದ ಸ್ಥಳೀಯರು ತಕ್ಷಣವೇ ತಮ್ಮ ಮನೆಗಳಿಂದ ಹೊರಬಂದು ಸುರಕ್ಷಿತ ಸ್ಥಳಕ್ಕೆ ಓಡಿದರು.
ಇದನ್ನೂ ಓದಿ: ಬೆಂಗಳೂರು ಪ್ರತ್ಯೇಕ ಬೈಕ್ ಅಪಘಾತದಲ್ಲಿ ಇಬ್ಬರು ಸಾವು
ಪ್ರಾಥಮಿಕ ಮಾಹಿತಿ ಪ್ರಕಾರ, ಇದು ಅಂಡರ್ ಗ್ರೌಂಡ್ ಗ್ಯಾಸ್ ಪೈಪ್ ಲೈನ್ (underground gas pipeline) ಸೋರಿಕೆಯ ಪರಿಣಾಮವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಪೋಟದ ಮೂಲ ಕಾರಣವನ್ನು ತಿಳಿಯಲು ಪೊಲೀಸರು ಮತ್ತು ತಂತ್ರಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.
ಈ ಸ್ಪೋಟದಲ್ಲಿ ಯಾವುದೇ ಜೀವ ಹಾನಿಯ ವರದಿ ಬಂದಿಲ್ಲವಾದರೂ, ಈ ರೀತಿಯ ಘಟನೆಗಳು ನಗರದಲ್ಲಿ ಸುರಕ್ಷತೆಗೆ ಎಚ್ಚರಿಕೆ ನೀಡುತ್ತವೆ.
Mysterious Explosion Rocks Banahalli Area in Bengaluru



