ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ: ಆದ್ರೆ ಎಲ್ಲರಿಗೂ ಅವಕಾಶವಿಲ್ಲ
ಬಡ ಕುಟುಂಬಗಳಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ: ಅರ್ಹತೆ, ಅಗತ್ಯ ದಾಖಲೆಗಳು ಸೇರಿದಂತೆ ಅಗತ್ಯ ಮಾಹಿತಿ ಇಲ್ಲಿದೆ!
- ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶ
- ವೈದ್ಯಕೀಯ ತುರ್ತು ಪರಿಸ್ಥಿತಿಗೆ ಪ್ರಥಮ ಆದ್ಯತೆ
- ಅರ್ಜಿ ಸಲ್ಲಿಕೆ, ಅಗತ್ಯ ದಾಖಲೆಗಳ ಮಾಹಿತಿ ಇಲ್ಲಿದೆ
New Ration Card : ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶ ನೀಡಲಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಪ್ರಥಮ ಆದ್ಯತೆ. ಅರ್ಜಿ ಸಲ್ಲಿಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಡಿತರ ವ್ಯವಸ್ಥೆಯಡಿ ಬಡತನ ರೇಖೆಗಿಂತ ಕೆಳಗಿರುವ (BPL Card) ಕುಟುಂಬಗಳಿಗೆ ಸರ್ಕಾರವು ಪಡಿತರ ಚೀಟಿಯನ್ನು ಒದಗಿಸುತ್ತಿದೆ. ಇದರಿಂದ ಆರ್ಥಿಕವಾಗಿ ದುರ್ಬಲ ಕುಟುಂಬಗಳು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಬಿಪಿಎಲ್ ರೇಷನ್ ಕಾರ್ಡ್ ಇದ್ದೋರಿಗೆ ಕೊನೆಯ ಅವಕಾಶ! ಫೆಬ್ರವರಿ 28, 2025 ಡೆಡ್‍ಲೈನ್
ಈಗ ಕರ್ನಾಟಕ ಸರ್ಕಾರವು ಹೊಸ BPL ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದ್ದು, ಅರ್ಹ ಫಲಾನುಭವಿಗಳು ತಮ್ಮ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
ಈ ಪಡಿತರ ಚೀಟಿಯೊಂದಿಗೆ, ಉಚಿತ ಅಥವಾ ಕಡಿಮೆ ದರದಲ್ಲಿ ಧಾನ್ಯಗಳು, ಆಹಾರ ಭದ್ರತೆ ಯೋಜನೆಗಳ ಲಾಭಗಳು ಮತ್ತು ಸರ್ಕಾರದಿಂದ ಒದಗಿಸಲಾಗುವ ಆರೋಗ್ಯ ಸಂಬಂಧಿತ ಸೌಲಭ್ಯಗಳು ದೊರೆಯುತ್ತವೆ.
ಬಡ ಕುಟುಂಬಗಳಿಗೆ ಸಹಾಯವಾಗುವ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಇದೀಗ ಪುನರಾರಂಭಗೊಂಡಿದೆ. ಸರ್ಕಾರದ ಹೊಸ ಆದೇಶದ ಪ್ರಕಾರ, ವಿಶೇಷವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಪ್ರಾಥಮಿಕವಾಗಿ ಹೊಸ ಪಡಿತರ ಚೀಟಿ ನೀಡಲಾಗುವುದು.
ಇಂತಹ ಅರ್ಹ ಫಲಾನುಭವಿಗಳು ತಮ್ಮ ಹತ್ತಿರದ ಸಿ.ಎಸ್.ಸಿ ಸೆಂಟರ್ ಅಥವಾ ಗ್ರಾಮ ಒನ್ ಕೇಂದ್ರವನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ನಿಟ್ಟುಸಿರು ಬಿಟ್ಟ ಮಹಿಳೆಯರು
ಯಾರು ಅರ್ಹರು?
ಬಡತನ ರೇಖೆಗಿಂತ ಕೆಳಗಿನ (BPL Ration Card) ಕುಟುಂಬಗಳು
ಹೊಸ ದಂಪತಿಗಳು (ಮದುವೆಯಾದ ತಕ್ಷಣ ಹೊಸ ಪಡಿತರ ಚೀಟಿ ಪಡೆಯಬಹುದು)
ಆರ್ಥಿಕವಾಗಿ ದುರ್ಬಲರು, ನಿರುದ್ಯೋಗಿಗಳು
ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿರುವವರು (ಅವರಿಗೇ ಪ್ರಥಮ ಆದ್ಯತೆ)
ಅಗತ್ಯ ದಾಖಲೆಗಳು:
✔ ಆಧಾರ್ ಕಾರ್ಡ್
✔ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್
✔ ಮೊಬೈಲ್ ನಂಬರ್
✔ ಪಾಸ್‌ಪೋರ್ಟ್ ಗಾತ್ರದ ಫೋಟೋ
✔ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು, ಅರ್ಹ ಫಲಾನುಭವಿಗಳು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸಿ.ಎಸ್.ಸಿ ಕೇಂದ್ರಗಳಿಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
📢 ಸೂಚನೆ: ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿರುವ ಫಲಾನುಭವಿಗಳಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಸಿ.ಎಸ್.ಸಿ ಸೆಂಟರ್ ಅಥವಾ ಗ್ರಾಮ ಒನ್ ಕೇಂದ್ರವನ್ನು ಸಂಪರ್ಕಿಸಿ.
New Ration Card Applications Open for BPL Families
Our Whatsapp Channel is Live Now 👇