ಫೆಬ್ರವರಿ 15ರ ನಂತರ ಇಂಥವರಿಗೆ ರೇಷನ್ ಸೌಲಭ್ಯ ಸಿಗುವುದಿಲ್ಲ, ರಾಜ್ಯ ಸರ್ಕಾರ ಸ್ಪಷ್ಟನೆ
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪಡಿತರ ಚೀಟಿ (Ration Card) ಹೊಂದಿರುವ ನಾಗರಿಕರಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿವೆ. ಜೊತೆಗೆ ಹೊಸ ಹೊಸ ಯೋಜನೆಗಳು ಕೂಡ ಬಿಡುಗಡೆ ಆಗುತ್ತಿದ್ದು, ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡಿತರ ಚೀಟಿ ಹೊಂದಿರುವ ಜನರು ಪಡೆದುಕೊಳ್ಳಬಹುದು
ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಪಡಿತರ ವಸ್ತುಗಳನ್ನ ಪಡೆದುಕೊಳ್ಳಲು ಪಡಿತರ ಚೀಟಿ ಬೇಕೇ ಬೇಕು. ಅದರಲ್ಲೂ ಬಿಪಿಎಲ್ ಕಾರ್ಡ್ (BPL Card) ಇರುವವರಿಗೆ ಉಚಿತವಾಗಿ ರೇಶನ್ ಲಭ್ಯವಿದೆ. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಫೆಬ್ರುವರಿ 15ರ ಒಳಗೆ ಈ ಕೆಲಸ ಮಾಡಿಕೊಳ್ಳದೆ ಇದ್ರೆ ರೇಷನ್ ಪಡೆದುಕೊಳ್ಳಲು ಸಾಧ್ಯವಿಲ್ಲ.
ದೇಶದಲ್ಲಿ ಬಡತನದಲ್ಲಿರುವ ಜನರು ಹಸಿವಿನಿಂದ ಕಷ್ಟ ಪಡಬಾರದು ಎನ್ನುವ ಕಾರಣಕ್ಕೆ ಪಡಿತರ ಚೀಟಿ ಆಧಾರಿತ ಪಡಿತರ ವಸ್ತುಗಳ ವಿತರಣೆ ಕೆಲಸವನ್ನು ಆರಂಭಿಸಲಾಗಿದೆ
ಈಗಾಗಲೇ ಸರ್ಕಾರ ಉಚಿತವಾಗಿ ಅಕ್ಕಿ ಮತ್ತು ಇತರ ಧಾನ್ಯಗಳನ್ನು ಕೂಡ ನೀಡುತ್ತಿದೆ. ಆದರೆ ಸರ್ಕಾರದ ಮಾನದಂಡದ ಆಧಾರದ ಮೇಲೆ ಪಡಿತರ ಚೀಟಿಯನ್ನು ವಿತರಿಸಿ ಪಡಿತರ ವಸ್ತುಗಳನ್ನು ನೀಡಲಾಗುತ್ತದೆ.
ಫೆಬ್ರವರಿ 15ರ ಒಳಗೆ ಈ ಕೆಲಸ ಮಾಡಿ!
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿ ಪಡಿತರ ಚೀಟಿ (Ration Card) ಹೊಂದಿರುವವರು ಸರ್ಕಾರದ ಈ ಹೊಸ ಮಾರ್ಗಸೂಚಿಯನ್ನು ಅನುಸರಿಸಬೇಕು. ಸರ್ಕಾರದ ಮಾರ್ಗಸೂಚಿ ಅನುಸರಿಸದೇ ಇದ್ದರೆ ಫೆಬ್ರವರಿ 15, 2025 ರಿಂದ ಪಡಿತರ ವಸ್ತುಗಳು ಸಿಗದೇ ಹೋಗಬಹುದು ಎಂದು ತಿಳಿಸಲಾಗಿದೆ.
ಹೌದು, ಸರ್ಕಾರ ಈಗಾಗಲೇ ತಿಳಿಸಿರುವಂತೆ ಇ – ಕೆ ವೈ ಸಿ ಮಾಡಿಸಿಕೊಳ್ಳದೆ ಇರುವ ಫಲಾನುಭವಿಗಳಿಗೆ ಪಡಿತರ ವಸ್ತುಗಳನ್ನು ಕೊಡಲಾಗುವುದಿಲ್ಲ. ಹೀಗಾಗಿ ಶೀಘ್ರದಲ್ಲಿಯೇ ಫಲಾನುಭವಿಗಳು ಈ ಕೆಲಸವನ್ನು ಮಾಡಿಸಿಕೊಳ್ಳಬೇಕು.
ಇ – ಕೆ ವೈ ಸಿ ಮಾಡಿಸಿಕೊಳ್ಳಲು ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ ಇ -ಕೆ ವೈಸಿ ಮಾಡಿಸಿಕೊಳ್ಳಬಹುದು. ಇದಕ್ಕೆ ಆಧಾರ್ ಕಾರ್ಡ್ ಆಧಾರವಾಗಿ ನೀಡಬೇಕು ಇನ್ನು ಆನ್ಲೈನ್ ಮೂಲಕವೂ ಕೂಡ ಇ – ಕೆವೈಸಿ ಮಾಡಿಸಿಕೊಳ್ಳಬಹುದು.
No ration benefits for these people after February 15