Bangalore NewsKarnataka News

ರೇಷನ್ ಕಾರ್ಡ್‌ಗೆ ಮಕ್ಕಳ ಹೆಸರು ಸೇರಿಸಲು ಅವಕಾಶ! ಬಿಟ್ಟುಹೋದ ಹೆಸರನ್ನು ಸೇರಿಸಿಕೊಳ್ಳಲು ಡೈರೆಕ್ಟ್ ಲಿಂಕ್

ಈಗ ನಮ್ಮ ರಾಜ್ಯದಲ್ಲಿ ಬಡಜನರ ಬಳಿ ಇರಬೇಕಾದ ಪ್ರಮುಖವಾದ ದಾಖಲೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಎಂದರೆ ತಪ್ಪಲ್ಲ. ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿರುವ 5 ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯಬೇಕು ಎಂದರೆ ಬಿಪಿಎಲ್ ರೇಷನ್ ಕಾರ್ಡ್ ಇರಲೇಬೇಕು.

ಆದರೆ ಹಲವರ ಬಳಿ ರೇಷನ್ ಕಾರ್ಡ್ ಇಲ್ಲದೇ, ಅವರುಗಳು ಇನ್ನು ಕೂಡ ಸರ್ಕಾರದ ಸೌಲಭ್ಯಗಳನ್ನ ಪಡೆಯಲು ಸಾಧ್ಯವಾಗಿಲ್ಲ. ಇನ್ನಷ್ಟು ಜನರು ಮನೆಯ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಲು ಕಾಯುತ್ತಿದ್ದಾರೆ.

Opportunity to add children's name to ration card, Direct link to add

ನಮ್ಮ ದೇಶದ ಬಡಜನರು ಹಸಿವಿನಿಂದ ಕಷ್ಟ ಅನುಭವಿಸಬಾರದು, ಅವರಿಗೆ ಆರೋಗ್ಯ ಸಮಸ್ಯೆ ಬರಬಾರದು ಎಂದು ರೇಷನ್ ಕಾರ್ಡ್ ಕೊಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು, ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಅನ್ನು ವಿತರಣೆ ಮಾಡಲಾಗುತ್ತದೆ.

ಈ ಎರಡು ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಸಿಗುತ್ತದೆ. ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ (Ration Card) ವಿತರಣೆ ಮಾಡಲಾಗುತ್ತದೆ..

ಕೃಷಿ ಕುಟುಂಬದ ರೈತ ಮಹಿಳೆಯರಿಗಾಗಿ ಹೊಸ ಯೋಜನೆ! ಹೈನುಗಾರಿಕೆ ಪ್ರೋತ್ಸಾಹ, ಕಡಿಮೆ ಬಡ್ಡಿಗೆ ಸಾಲ

ರೇಷನ್ ಕಾರ್ಡ್ ಗೆ ಸದಸ್ಯರ ಹೆಸರು ಸೇರ್ಪಡೆ:

ಹಲವು ಜನರು ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಆದರೆ ಇನ್ನಷ್ಟು ಜನರು ತಮ್ಮ ಬಳಿ ಈಗಾಗಲೇ ಇರುವ ರೇಷನ್ ಕಾರ್ಡ್ ಗೆ ತಮ್ಮ ಮಕ್ಕಳ ಹೆಸರನ್ನು ಸೇರಿಸಲು ಕಾಯುತ್ತಿದ್ದಾರೆ.

ಮೊದಲೆಲ್ಲಾ ಈ ರೀತಿ ಮಕ್ಕಳ ಹೆಸರನ್ನು ಅಥವಾ ಮನೆಯ ಹೊಸ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬೇಕು ಎಂದರೇ, ಪದೇ ಪದೇ ಸರ್ಕಾರಿ ಆಫೀಸ್ ಗೆ ಹೋಗಿ ಅಲೆದಾಡಬೇಕಿತ್ತು, ಆದರೆ ಈಗ ಅಷ್ಟೆಲ್ಲಾ ಕಷ್ಟ ಪಡಬೇಕಿಲ್ಲ, ಮನೆಯಿಂದಲೇ ಸುಲಭವಾಗಿ ಮಾಡಬಹುದು.

Ration Cardಈ ವಿಧಾನ ಅನುಸುರಿಸಿ:

ಮನೆಯಲ್ಲಿ ಹೊಸದಾಗು ಮಗು ಹುಟ್ಟು, ಬೆಳೆಯುತ್ತಿದ್ದು ಆ ಮಗುವಿನ ಹೆಸರನ್ನು ಹೊಸದಾಗಿ ರೇಷನ್ ಕಾರ್ಡ್ ಗೆ ಸೇರಿಸಲು, ಹೆಚ್ಚಾಗಿ ಏನನ್ನು ಮಾಡಬೇಕಾದ ಅವಶ್ಯಕತೆ ಇಲ್ಲ. ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ (Website) ಭೇಟಿ ನೀಡಿ,

ಅಲ್ಲಿ ಸದಸ್ಯರನ್ನು ರೇಷನ್ ಕಾರ್ಡ್ ಗೆ ಸೇರಿಸಿ ಎನ್ನುವ ಆಪ್ಶನ್ ಇರುತ್ತದೆ, ಅದನ್ನು ಕ್ಲಿಕ್ ಮಾಡಿ, ಅಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಫಿಲ್ ಮಾಡಿ, ಮಗುವಿನ ಬಗ್ಗೆ ದಾಖಲೆಗಳನ್ನು ಸರಿಯಾಗಿ ಫಿಲ್ ಮಾಡಿದ ಬಳಿಕ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ (Upload) ಮಾಡಿ. ಇದಿಷ್ಟು ಮಾಡಿದರೆ ಮುಗಿಯಿತು, ಮನೆಯಿಂದಲೇ ಈ ಕೆಲಸ ಮಾಡಬಹುದು.

ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಆಯ್ತು ಈಗ ₹800 ರೂಪಾಯಿ ಸಿಗುವ ಹೊಸ ಯೋಜನೆ ಬಂತು!

ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ವಿತರಣೆ:

ಕಳೆದ ವರ್ಷ ಎಲೆಕ್ಷನ್ ನಡೆಯುವುದಕ್ಕಿಂತ ಮೊದಲೇ ಹೊಸ ರೇಷನ್ ಕಾರ್ಡ್ ಗೆ ಸುಮಾರು 3 ಲಕ್ಷ ಜನರು ಅರ್ಜಿ ಸಲ್ಲಿಸಿದ್ದರು, ಅವರಿಗೆಲ್ಲಾ ಶೀಘ್ರದಲ್ಲೇ ಅರ್ಜಿಗಳನ್ನು ಪರಿಶೀಲಿಸಿ, ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಸರ್ಕಾರದಿಂದ ಮಾಹಿತಿ ಸಿಕ್ಕಿದೆ.

ಹಾಗೆಯೇ ಯಾರೆಲ್ಲಾ ಸುಳ್ಳು ಮಾಹಿತಿ ನೀಡಿ, ಬಿಪಿಎಲ್ ರೇಷನ್ ಕಾರ್ಡ್ ಪಡೆದಿದ್ದರೋ, ಅಂಥವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

Opportunity to add children’s name to ration card, Direct link to add

Our Whatsapp Channel is Live Now 👇

Whatsapp Channel

Related Stories