ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಆಯ್ತು ಈಗ ₹800 ರೂಪಾಯಿ ಸಿಗುವ ಹೊಸ ಯೋಜನೆ ಬಂತು!
ಈ ಯೋಜನೆಯ ಮೂಲಕ ಅವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ ಆರ್ಥಿಕ ಸಹಾಯ ಸಿಗಲಿದೆ. ಹಾಗಿದ್ದಲ್ಲಿ ಶೀಘ್ರದಲ್ಲೆ ಜಾರಿಗೆ ಬರಲಿರುವ ಈ ಯೋಜನೆ ಯಾವುದು?
Pension : ನಮ್ಮ ರಾಜ್ಯದಲ್ಲಿ ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತಂದಿದೆ. ಅವುಗಳೆಲ್ಲ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ.
ಸರ್ಕಾರವು ಮಹಿಳೆಯರಿಗೆ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರೆ ತಪ್ಪಲ್ಲ. ಶಕ್ತಿ ಯೋಜನೆ (Shakti Yojana), ಗೃಹಲಕ್ಷ್ಮಿ (Gruha Lakshmi Scheme)ಈ ಯೋಜನೆಗಳು ಮುಖ್ಯವಾಗಿ ಮಹಿಳೆಯರಿಗಾಗಿಯೇ ಜಾರಿಗೆ ಬಂದಿರುವ ಯೋಜನೆ ಆಗಿದೆ.
ಈ ಯೋಜನೆಗಳ ಜೊತೆಗೆ ಇದೀಗ ರಾಜ್ಯ ಸರ್ಕಾರವು ಇನ್ನು ಮದುವೆಯಾಗದ ಅವಿವಾಹಿತ ಮಹಿಳೆಯರಿಗಾಗಿ ಮತ್ತೊಂದು ವಿಶೇಷವಾದ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯ ಮೂಲಕ ಅವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ ಆರ್ಥಿಕ ಸಹಾಯ ಸಿಗಲಿದೆ. ಹಾಗಿದ್ದಲ್ಲಿ ಶೀಘ್ರದಲ್ಲೆ ಜಾರಿಗೆ ಬರಲಿರುವ ಈ ಯೋಜನೆ ಯಾವುದು? ಇದರಿಂದ ಏನೆಲ್ಲಾ ಲಾಭ ಮಹಿಳೆಯರಿಗೆ ಸಿಗುತ್ತದೆ? ಎಲ್ಲವನ್ನು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..
ಮೊಬೈಲ್‌ನಲ್ಲೇ ನಿಮ್ಮ ಆಸ್ತಿ, ಜಮೀನು, ಕೃಷಿ ಭೂಮಿಯ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ!
ಮಹಿಳೆಯರಿಗೆ ಹೊಸ ಯೋಜನೆ:
ಈ ಒಂದು ಯೋಜನೆಯ ಹೆಸರು ಮನಸ್ವಿನಿ ಯೋಜನೆ ಆಗಿದೆ, 2013ರಲ್ಲೇ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿತ್ತು, ಇದೀಗ ಮತ್ತೊಮ್ಮೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮನಸ್ವಿನಿ ಯೋಜನೆಯ ಮೂಲಕ 40 ರಿಂದ 64 ವರ್ಷದ ಒಳಗಿನ ಇನ್ನು ಮದುವೆ ಆಗಿರದ ಅಥವಾ ವಿಚ್ಛೇದನ ಪಡೆದಿರುವ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡಲಾಗುತ್ತದೆ. ಈ ಮೂಲಕ ಮಹಿಳೆಯರಿಗೆ ಸರ್ಕಾರದಿಂದ ಪ್ರತಿ ತಿಂಗಳು ಕೂಡ ಹಣ ಸಿಗಲಿದೆ.
ಇನ್ನು ಮದುವೆ ಅಗಿಲ್ಲದೆ ಕಷ್ಟಪಡುತ್ತಿರುವ ಮಹಿಳೆಯರು ಹಾಗೂ ವಿಚ್ಛೇದನ ಪಡೆದು ಕಷ್ಟಪಡುತ್ತಿರವ ಮಹಿಳೆಯರಿಗೆ ಅವರ ಜೀವನ ನಡೆಸಲು ಸಹಾಯ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ.
ಹಾಗಾಗಿ ಇಂಥ ಮಹಿಳೆಯರಿಗೆ ಪ್ರತಿ ತಿಂಗಳು ₹800 ರೂಪಾಯಿಗಳ ಪೆನ್ಶನ್ (Pension Scheme) ಕೊಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದು, 40 ರಿಂದ 64 ವರ್ಷಗಳ ಒಳಗಿರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಈ ಸಹಾಯವನ್ನು ಪಡೆದುಕೊಳ್ಳಬಹುದು.
ಬೋಗಸ್ ರೇಷನ್ ಕಾರ್ಡ್ ಪತ್ತೆ ಹಾಗೂ ಶೀಘ್ರದಲ್ಲೇ 1.73 ಲಕ್ಷ ಹೊಸ ಬಿಪಿಎಲ್ ಕಾರ್ಡ್ ವಿತರಣೆ!
ಅರ್ಜಿ ಸಲ್ಲಿಕೆಗೆ ಬೇಕಿರುವ ದಾಖಲೆಗಳು:
*ಅರ್ಜಿ ಹಾಕುವ ಮಹಿಳೆಯ ಇನ್ಕಮ್ ಸರ್ಟಿಫಿಕೇಟ್
*ಮಹಿಳೆಯ ಆಧಾರ್ ಕಾರ್ಡ್
*ಮಹಿಳೆ ಅವಿವಾಹಿತೆ ಅಥವಾ ವಿಚ್ಛೇದನ ಪಡೆದಿದ್ದಾರೆ ಎನ್ನುವುದಕ್ಕೆ ಸರ್ಟಿಫಿಕೇಟ್
*ಬ್ಯಾಂಕ್ ಅಕೌಂಟ್ ಡೀಟೇಲ್ಸ್
ಇದಿಷ್ಟು ದಾಖಲೆಗಳು ಇದ್ದರೆ ಸಾಕು, ನೀವು ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಿ, ಸರ್ಕಾರದಿಂದ ಸಹಾಯ ಪಡೆದುಕೊಳ್ಳಬಹುದು.
Under this new scheme of the government, women will get 800 Pension every month