ಮೊಬೈಲ್‌ನಲ್ಲೇ ನಿಮ್ಮ ಆಸ್ತಿ, ಜಮೀನು, ಕೃಷಿ ಭೂಮಿಯ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ!

Story Highlights

ನಿಮ್ಮ ಆಧಾರ್ ಕಾರ್ಡ್ ಅನ್ನು ಪಹಣಿ ಪತ್ರದ ಜೊತೆಗೆ ಲಿಂಕ್ ಮಾಡಬೇಕು ಎಂದರೆ, ಇದಕ್ಕಾಗಿ ನೀವು ಸರ್ಕಾರದ ವೆಬ್ಸೈಟ್ ಗೆ ಭೇಟಿ ನೀಡಬೇಕು, ಈ ಪ್ರಕ್ರಿಯೆಗಾಗಿಯೇ ಸರ್ಕಾರವು ಬೇರೆ ವೆಬ್ಸೈಟ್ ಅನ್ನೇ ಲಾಂಚ್ ಮಾಡಿದೆ.

ರಾಜ್ಯ ಸರ್ಕಾರವು ನಮ್ಮಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಡೆಯಲು ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ. ಅದೇನು ಎಂದರೆ, ರೈತರು (Farmers) ಅವರ ಬಳಿ ಇರುವ ಜಮೀನಿನ ಪತ್ರವನ್ನು ಆಧಾರ್ ಕಾರ್ಡ್ (Aadhaar Card) ಜೊತೆಗೆ ಲಿಂಕ್ ಮಾಡಬೇಕು. ಈ ಕೆಲಸವನ್ನು ಕಡ್ಡಾಯ ಮಾಡಿದೆ ಸರ್ಕಾರ.

ಇದರಿಂದ ರೈತರಿಗೇ ಒಳ್ಳೆಯದು. ಹಾಗೆಯೇ ಮುಂದೆ ಆಗುವ ತೊಂದರೆಗಳು ಕೂಡ ಕಡಿಮೆ ಆಗಲಿದೆ. ಈಗ ನಮಗೆ ಆಧಾರ್ ಕಾರ್ಡ್ ಎಷ್ಟು ಮುಖ್ಯ ಎಂದರೆ, ಭಾರತೀಯರಾದ ನಮಗೆ ಪ್ರಮುಖ ಗುರುತಿನ ಚೀಟಿ ಆಗಿದೆ ಆಧಾರ್ ಕಾರ್ಡ್.

ಇದನ್ನು ಬೇರೆ ಎಲ್ಲಾ ಪ್ರಮುಖ ದಾಖಲೆಗಳ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯ ಆಗಿದೆ. ಅದೇ ರೀತಿ ಜಮೀನಿನ (Property)  ಪಹಣಿ ಪತ್ರ RTC ಜೊತೆಗೆ ಕೂಡ ಲಿಂಕ್ ಮಾಡಬೇಕು ಎಂದು ಕಡ್ಡಾಯ ಮಾಡಲಾಗಿದೆ. ಈ ಮೂಲಕ ಸರ್ಕಾರಕ್ಕೆ ರೈತರ ಅಂಕಿ ಅಂಶ, ಯಾರ ಹೆಸರಿನಲ್ಲಿ ಎಷ್ಟು ಜಮೀನಿದೆ ಎನ್ನುವುದು ಗೊತ್ತಾಗುತ್ತದೆ.

ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡೋರಿಗೆ ಸರ್ಕಾರದಿಂದಲೇ ಸಿಗಲಿದೆ ಸಹಾಯಧನ! ಎಷ್ಟು ಹಣ ಸಿಗುತ್ತೆ ಗೊತ್ತಾ?

ಜೊತೆಗೆ ರೈತರಿಗೆ ಆಗುತ್ತಿರುವ ವಂಚನೆಯನ್ನು ಸಹ ಕಡಿಮೆ ಮಾಡಬಹುದು. ಕೆಲವೊಮ್ಮೆ ಸುಳ್ಳು ದಾಖಲೆಗಳನ್ನು ಇಟ್ಟುಕೊಂಡು, ಭೂಮಿಯನ್ನು ಇನ್ನೊಬ್ಬರಿಗೆ ಮಾರಾಟ ಮಾಡಿ, ರೈತರಿಗೆ ಮೋಸ ಮಾಡುವಂಥ ಪ್ರಕರಣಗಳು ಕೂಡ ಆಗಾಗ ಬೆಳಕಿಗೆ ಬರುತ್ತಲೇ ಇದೆ.

ಇಂಥ ಅಕ್ರಮಗಳನ್ನು ತಡೆಹಿಡಿಯುವುದಕ್ಕೆ ಸಹ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಹಾಗಿದ್ದಲ್ಲಿ ಪಹಣಿ ಪತ್ರವನ್ನು ಆಧಾರ್ ಗೆ ಲಿಂಕ್ ಮಾಡುವುದು ಹೇಗೆ ಎಂದು ತಿಳಿಯೋಣ..

ನಿಮ್ಮ ಆಧಾರ್ ಕಾರ್ಡ್ ಅನ್ನು ಪಹಣಿ ಪತ್ರದ ಜೊತೆಗೆ ಲಿಂಕ್ ಮಾಡಬೇಕು ಎಂದರೆ, ಇದಕ್ಕಾಗಿ ನೀವು ಸರ್ಕಾರದ ವೆಬ್ಸೈಟ್ ಗೆ (Website) ಭೇಟಿ ನೀಡಬೇಕು, ಈ ಪ್ರಕ್ರಿಯೆಗಾಗಿಯೇ ಸರ್ಕಾರವು ಬೇರೆ ವೆಬ್ಸೈಟ್ ಅನ್ನೇ ಲಾಂಚ್ ಮಾಡಿದೆ.

ಅಲ್ಲಿಗೆ ಭೇಟಿ ನೀಡಿ, ಸುಲಭ ಸ್ಟೆಪ್ಸ್ ಗಳನ್ನು ಅನುಸರಿಸುವ ಮೂಲಕ ನಿಮ್ಮ ಮೊಬೈಲ್ ಇಂದಲೇ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಈ ಕೆಲಸ ಹೇಗೆ ಎಂದು ಸ್ಟೆಪ್ ಬೈ ಸ್ಟೆಪ್ ತಿಳಿಯೋಣ..

ಗ್ರಾಮ ಒನ್ ಕಚೇರಿ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ! ಒಳ್ಳೆಯ ಆದಾಯ ಗಳಿಸೋಕೇ ಒಳ್ಳೆಯ ಚಾನ್ಸ್

Aadhaar Link to RTCಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನ:

*ಮೊದಲಿಗೆ ನೀವು ಸರ್ಕಾರದ http://landrecords.karnataka.gov.in/service4  ಈ ವೆಬ್ಸೈಟ್ ಗೆ ಭೇಟಿ ನೀಡಿ

*ಲಾಗಿನ್ ಆಗುವುದಕ್ಕೆ ಅಲ್ಲಿ ಕೇಳುವ ಮಾಹಿತಿಗಳನ್ನು ಫಿಲ್ ಮಾಡಿ.

*ನಿಮ್ಮ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ, ಅದನ್ನು ಎಂಟರ್ ಮಾಡುವ ಮೂಲಕ ಲಾಗಿನ್ ಆಗಬಹುದು.

*ನಂತರ ಆಧಾರ್ ಗೆ ಪಹಣಿ ಲಿಂಕ್ ಮಾಡುವ ಆಪ್ಶನ್ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ, ಅಲ್ಲಿ ಪಹಣಿ ಯಾರ ಹೆಸರಿನಲ್ಲಿದೆ ಎನ್ನುವುದನ್ನು ಕೇಳುತ್ತದೆ. ಹೆಸರನ್ನು ಸರಿಯಾಗಿ ನಮೂದಿಸಿ

*ಬಳಿಕ Verify ಎನ್ನುವ ಆಪ್ಶನ್ ಕ್ಲಿಕ್ ಮಾಡಿ.

*ಈಗ ಬರುವ ekyc ಆಪ್ಶನ್ ಗಾಗಿ ಆಧಾರ್ ಡೀಟೇಲ್ಸ್ ಕೊಡಿ. ನಿಮ್ಮ ಫೋನ್ ನಂಬರ್ ಗೆ ಇನ್ನೊಂದು ಓಟಿಪಿ ಬರುತ್ತದೆ.

*ಅದನ್ನು ಎಂಟರ್ ಮಾಡಿ, ಬಳಿಕ Submit ಮಾಡಿ. ಇದಿಷ್ಟು ಆದ ನಂತರ ನಿಮ್ಮ ಅಕೌಂಟ್ ಓಪನ್ ಆಗುತ್ತದೆ.

*ನಿಮ್ಮ profile ನಲ್ಲಿ ಇರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ, Link Aadhar ಎನ್ನುವ ಆಪ್ಶನ್ ಕಾಣುತ್ತದೆ.

*ಅದನ್ನು ಸೆಲೆಕ್ಟ್ ಮಾಡಿದಾಗ, ನಿಮ್ಮ ಜಮೀನಿನ ಬಗ್ಗೆ ಎಲ್ಲಾ ಮಾಹಿತಿ ಕೇಳುತ್ತದೆ. ಅದಷ್ಟನ್ನು ನೀಡಿದರೆ, ನಿಮ್ಮ ಪಹಣಿಗೆ ಆಧಾರ್ ಲಿಂಕ್ ಆಗುತ್ತದೆ.

Link Aadhaar Card With Property Document RTC Online

Related Stories