ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡೋರಿಗೆ ಸರ್ಕಾರದಿಂದಲೇ ಸಿಗಲಿದೆ ಸಹಾಯಧನ! ಎಷ್ಟು ಹಣ ಸಿಗುತ್ತೆ ಗೊತ್ತಾ?
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಕೂಡ ನಮ್ಮ ರೈತರಿಗೆ (Farmers) ಸಹಾಯ ಆಗುವ ಹಾಗೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲಿದೆ. ಅವುಗಳ ಮೂಲಕ ರೈತರು ತಮ್ಮ ಕೆಲಸಗಳಿಗೆ ಆರ್ಥಿಕ ಸಹಾಯ ಪಡೆದುಕೊಳ್ಳಬಹುದು. ನಮಗೆಲ್ಲಾ ಗೊತ್ತಿರುವ ಹಾಗೆ ರೈತರು ಯಾವಾಗಲೂ ಕೃಷಿ (Agriculture) ಮೇಲೆಯೇ ಅವಲಂಬಿಸಿ ಇರಲು ಸಾಧ್ಯವಿಲ್ಲ.
ಉತ್ತಮ ಆದಾಯ ಪಡೆಯುವುದಕ್ಕೆ ಬೇರೆ ಕೆಲಸವನ್ನು ಮಾಡುವುದು ಒಳ್ಳೆಯದು. ಆ ರೀತಿಯಲ್ಲಿ ಒಳ್ಳೆಯ ಆಯ್ಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಆಗಿದೆ. ಹೌದು, ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು (Goat and Sheep Farming) ರೈತರು ಸುಲಭವಾಗಿ ತಾವಿರುವ ಹಳ್ಳಿ ಇಂದಲೇ ಮಾಡಬಹುದು.

ಕುರಿ ಮತ್ತು ಮೇಕೆ ಸಾಕಾಣಿಕೆ ಇಂದ ಹೆಚ್ಚು ಲಾಭ ಸಿಗುವುದರಿಂದ ಇದು ಉತ್ತಮವಾದ ಉದ್ಯಮ ಆಗಿದೆ. ಇದೀಗ ಸರ್ಕಾರವು ರೈತರು ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವುದಕ್ಕೆ ಆರ್ಥಿಕವಾಗಿ ಸಹಾಯ ಮಾಡಲಿದ್ದು, ಈ ಒಂದು ಯೋಜನೆಯ ಸೌಲಭ್ಯವನ್ನು ರೈತರು ಪಡೆದುಕೊಳ್ಳಬಹುದು. ಅಷ್ಟಕ್ಕೂ ಈ ಯೋಜನೆ ಯಾವುದು? ರೈತರಿಗೆ ಹೇಗೆ ಈ ಸೌಲಭ್ಯ ಸಿಗುತ್ತದೆ ಎನ್ನುವುದನ್ನು ತಿಳಿಯೋಣ..
ಗ್ರಾಮ ಒನ್ ಕಚೇರಿ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ! ಒಳ್ಳೆಯ ಆದಾಯ ಗಳಿಸೋಕೇ ಒಳ್ಳೆಯ ಚಾನ್ಸ್
ರಾಜ್ಯದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಸಹಕಾರ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ, ಈ ಎರಡು ಕೂಡ ಜೊತೆಯಾಗಿ ಸೇರಿ ರೈತರಿಗೆ ಸಹಾಯ ಆಗುವ ಹಾಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಒಂದು ಯೋಜನೆಯ ಹೆಸರು ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ. ಈ ಒಂದು ಯೋಜನೆಯ ಮೂಲಕ ಕುರಿ ಮೇಲೆ ಸಾಕಾಣಿಕೆ ಮಾಡುವ ರೈತರಿಗೆ ಸಬ್ಸಿಡಿ Loan ಸಿಗುತ್ತದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಹೆಸರಿನ ಈ ಒಂದು ಹೊಸ ಯೋಜನೆಯ ಮೂಲಕ ಕುರಿ ಮೇಕೆ ಸಾಕಾಣಿಕೆ ಮಾಡುವ ರೈತರಿಗೆ, ಸಹಾಯಧನ ಮತ್ತು ಕುರಿ ಮೇಕೆಗಳ ನಿರ್ವಹಣೆಗೆ ಶೆಡ್ ನಿರ್ಮಿಸಲು ಆರ್ಥಿಕವಾಗಿ ಸಬ್ಸಿಡಿ ಸಾಲವನ್ನು (Subsidy Loan) ಸಹ ನೀಡಲಾಗುತ್ತದೆ.
ಇದರಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಕಡೆಯಿಂದ ಅರ್ಹತೆ ಇರುವವರಿಗೆ 21 ಕುರಿಗಳಿಗೆ ಘಟಕ ನಿರ್ಮಿಸಲು ₹1,75,000 ರೂಪಾಯಿ ಹಣವನ್ನು ನೀಡಲಾಗುತ್ತದೆ. ಹೀಗೆ ಕುರಿಗಾಹಿಗಳಿಗೆ ಸಹಾಯ ಮಾಡುವುದು ಸರ್ಕಾರದ ಉದ್ದೇಶ ಆಗಿದೆ.
ಬೋಗಸ್ ರೇಷನ್ ಕಾರ್ಡ್ ಪತ್ತೆ ಹಾಗೂ ಶೀಘ್ರದಲ್ಲೇ 1.73 ಲಕ್ಷ ಹೊಸ ಬಿಪಿಎಲ್ ಕಾರ್ಡ್ ವಿತರಣೆ!
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
*ಕುರಿ ಮತ್ತು ಮೇಕೆ ಉತ್ಪಾದಕರ ಸಂಘದಿಂದ ಸಿಗುವ ಸರ್ಟಿಫಿಕೇಟ್
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್ (Income Certificate)
*ಅಭ್ಯರ್ಥಿ ವಿಕಲಚೇತನರಾದರೆ ಅದರ ಪ್ರಮಾಣಪತ್ರ
* https://kswdcl.karnataka.govt.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
Sheep and goat farmers will get subsidies from the government