Bengaluru NewsKarnataka News

ಗ್ರಾಮ ಒನ್ ಕಚೇರಿ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ! ಒಳ್ಳೆಯ ಆದಾಯ ಗಳಿಸೋಕೇ ಒಳ್ಳೆಯ ಚಾನ್ಸ್

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಬೇಕು ಎಂದು ಹಲವು ಯೋಜನೆಗಳನ್ನು (Government Schemes) ಜಾರಿಗೆ ತರುತ್ತಿದೆ. ಜನರು ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಕೂಡ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.

ಜನರಿಗೆ ಸಹಾಯ ಮಾಡಿ, ಸಾಲ (Loan) ಕೊಡುತ್ತಿದ್ದು, ಇನ್ನಿತರ ಸೌಲಭ್ಯಗಳನ್ನು ಸಹ ಕೊಡುತ್ತಿದೆ. ಇವುಗಳನ್ನು ಬಳಸಿಕೊಂಡು ಜನರು ತಮ್ಮದೇ ಸ್ವಂತ ಉದ್ಯಮ ಶುರು ಮಾಡಬಹುದು.

Apply to open Gram One Office Franchise, chance to earn good income

ಇದೇ ರೀತಿಯಲ್ಲಿ ಈಗ ಸರ್ಕಾರ ಜನರು ಹೊಸದಾಗಿ ಬ್ಯುಸಿನೆಸ್ ಶುರು (Start Business) ಮಾಡಲು ಹೊಸದೊಂದು ಸುದ್ದಿ ತಂದಿದೆ. ಇದೀಗ ಗ್ರಾಮ ಒನ್ ಕಚೇರಿ ತೆರೆಯುವುದಕ್ಕೆ ಸರ್ಕಾರ ಅರ್ಜಿ ಆಹ್ವಾನಿಸಿದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ ಗ್ರಾಮ ಒನ್ ಕಚೇರಿ ತೆರೆಯಬಹುದು. ಇದರಿಂದ ಉತ್ತಮವಾಗಿ ಲಾಭವನ್ನು ಕೂಡ ಗಳಿಸಬಹುದು. ಹಾಗಿದ್ದಲ್ಲಿ ಗ್ರಾಮ ಒನ್ ಕಚೇರಿ ತೆರೆಯುವುದು ಹೇಗೆ? ಇದರಿಂದ ಎಷ್ಟು ಲಾಭ ಪಡೆಯಬಹುದು? ಪೂರ್ತಿ ಮಾಹಿತಿ ತಿಳಿಯೋಣ..

ಬೋಗಸ್ ರೇಷನ್ ಕಾರ್ಡ್ ಪತ್ತೆ ಹಾಗೂ ಶೀಘ್ರದಲ್ಲೇ 1.73 ಲಕ್ಷ ಹೊಸ ಬಿಪಿಎಲ್ ಕಾರ್ಡ್ ವಿತರಣೆ!

ತೆರೆಯಿರಿ ಗ್ರಾಮ ಒನ್ ಫ್ರಾಂಚೈಸಿ:

ಹಲವು ಜನರಿಗೆ ತಮ್ಮದೇ ಆದ ಸ್ವಂತ ಉದ್ಯಮ (Own Business) ಶುರು ಮಾಡಬೇಕು ಎಂದು ಆಸೆ ಇರುತ್ತದೆ. ಅಂಥವರು ಗ್ರಾಮ ಒನ್ ಕಚೇರಿ ತೆರೆಯುವ ಮೂಲಕ ಬ್ಯುಸಿನೆಸ್ ಶುರು ಮಾಡಬಹುದು.

ಇದಕ್ಕಾಗಿ ಮುಖ್ಯವಾಗಿ ಕೆಲವು ದಾಖಲೆಗಳು ಬೇಕಾಗುತ್ತದೆ, ಅದನ್ನು ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
https://kal-mys.gramaone.karnataka.gov.in/ ಇದು ಗ್ರಾಮ ಒನ್ ಕಚೇರಿಗೆ ಅರ್ಜಿ ಸಲ್ಲಿಕೆ ಲಿಂಕ್ ಆಗಿದ್ದು, ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಗ್ರಾಮ ಒನ್ ಫ್ರಾಂಚೈಸಿ ತೆರೆಯಬಹುದು.

ಗ್ರಾಮ ಒನ್ ಕಚೇರಿ ಶುರು ಮಾಡಲು ಬೇಕಾದ ಅರ್ಹತೆ:

*ಅಭ್ಯರ್ಥಿಗೆ ಕಂಪ್ಯೂಟರ್ ಬಗ್ಗೆ ಗೊತ್ತಿರಬೇಕು
*ಹೆಚ್ಚಿನ ಜನರು ಓಡಾಡುವ ಜಾಗದಲ್ಲಿ ಗ್ರಾಮ ಒನ್ ಕಚೇರಿ ಶುರು ಮಾಡಬೇಕು
*ಪೊಲೀಸರಿಂದ ವೆರಿಫಿಕೇಶನ್, ಸರ್ಟಿಫಿಕೇಟ್ ಪಡೆದುಕೊಂಡಿರಬೇಕು
*ಇದಕ್ಕಾಗಿ 1 ರಿಂದ 2 ಲಕ್ಷ ಬಂಡವಾಳ ಬೇಕಾಗುತ್ತದೆ

15,393 ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಆಸಕ್ತರು ಇಂದೇ ಅಪ್ಲೈ ಮಾಡಿ

Gram One Office Franchiseಗ್ರಾಮ ಒನ್ ಕಚೇರಿ ಶುರು ಮಾಡಲು ಏನೆಲ್ಲಾ ಬೇಕಾಗುತ್ತದೆ:

*ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ (Laptop or Computer)
*ಪ್ರಿಂಟರ್ (Printer)
*ಸ್ಕ್ಯಾನರ್ (Scanner)
*ವೆಬ್ ಕ್ಯಾಮೆರಾ (Web Camera)
*ಬಯೋಮೆಟ್ರಿಕ್ ಸ್ಕ್ಯಾನರ್ (Biometric Scanner)
*ವೈಫೈ ರಿಸೀವರ್ (Wi-fi)
*ಇಂಟರ್ನೆಟ್ ಕನೆಕ್ಷನ್ (Internet Connection)

ಬೇಕಾಗುವ ದಾಖಲೆಗಳು:

*ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್ (Aadhaar Card)
*ಪ್ಯಾನ್ ಕಾರ್ಡ್ (Pan Card)
*ಬ್ಯಾಂಕ್ ಅಕೌಂಟ್ ಡೀಟೇಲ್ಸ್ (Bank Account Details)
*ಗ್ರಾಮ ಒನ್ ಆಫೀಸ್ ಶುರು ಮಾಡುವ ಜಾಗದ ದೃಢೀಕರಣ ಪತ್ರ
*ಎಲ್ಲಾ ಉಪಕರಣಗಳು ಇದೆ ಎನ್ನುವುದಕ್ಕೆ ಸರ್ಟಿಫಿಕೇಟ್

Apply to open Gram One Office Franchise, chance to earn good income

Related Stories