15,393 ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಆಸಕ್ತರು ಇಂದೇ ಅಪ್ಲೈ ಮಾಡಿ
ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಖಾಲಿ ಇರುವ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಯಾರೆಲ್ಲಾ ಕಡಿಮೆ ಓದಿದ್ದು, ಒಳ್ಳೆಯ ಕೆಲಸ ಸಿಗಲಿ ಎಂದು ಬಯಸುತ್ತಿದ್ದೀರೋ ಅಂಥವರಿಗೆ ಈಗ ಒಂದು ಉತ್ತಮವಾದ ಅವಕಾಶ ಸಿಕ್ಕಿದೆ. ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರದಿಂದ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಒಟ್ಟು 15,393 ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರ ನಿರ್ಧರಿಸಿದೆ.
ಹೌದು, ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಖಾಲಿ ಇರುವ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗೆ ಬೇಕಿರುವ ಅರ್ಹತೆ ಏನು? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? ಎಲ್ಲವನ್ನು ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ..
ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್! ಇದ್ದಕ್ಕಿದ್ದಂತೆ ಹೊಸ ರೂಲ್ಸ್ ತಂದ ಸರ್ಕಾರ
ನೇಮಕಾತಿ ನಡೆಯುತ್ತಿರುವುದು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD)
ವೇತನ: ನಿಯಮಗಳ ಅನುಸಾರ
ಕೆಲಸದ ಸ್ಥಳ: ಕರ್ನಾಟಕದ ಎಲ್ಲೆಡೆ
ಈ ಹುದ್ದೆಗಳಿಗೆ ತಮ್ಮ ಗ್ರಾಮಗಳಲ್ಲಿ ಮಾತ್ರ ಮಹಿಳೆಯರು ಅರ್ಜಿ ಸಲ್ಲಿಸಬಹುದು. ತಾವು ಇರುವ ಜಾಗದ 3 ಕಿಲೋಮೀಟರ್ ಒಳಗಿರುವ ಅಂಗನವಾಡಿ ಕೇಂದ್ರಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಬೇರೆ ಊರು ತಾಲ್ಲೂಕಿಗೆ ಅರ್ಜಿ ಸಲ್ಲಿಸುವ ಹಾಗಿಲ್ಲ. ಇದಕ್ಕಾಗಿ ವಾಸಸ್ಥಳ ದೃಢೀಕರಣ, ಡಿ.ಎ.ಆರ್ ನಂಬರ್, ಆಧಾರ್ ಕಾರ್ಡ್ ಇದೆಲ್ಲವೂ ಬೇಕಾಗುತ್ತದೆ.
ಖಾಲಿ ಇರುವ ಹುದ್ದೆಗಳು:
*ಅಂಗನವಾಡಿ ಕಾರ್ಯಕರ್ತೆಯರು
*ಅಂಗನವಾಡಿ ಶಿಕ್ಷಕಿಯರು
ವಿದ್ಯಾರ್ಹತೆ:
*ಕಾರ್ಯಕರ್ತೆ ಕೆಲಸಕ್ಕೆ ಅರ್ಜಿ ಹಾಕುವವರು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಪಿಯುಸಿ ಮುಗಿಸಿರಬೇಕು. ಇವರು 10ನೇ ತರಗತಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಓದಿರಬೇಕು.
*ಸಹಾಯಕಿ ಕೆಲಸಕ್ಕೆ ಅರ್ಜಿ ಹಾಕುವವರು 10ನೇ ತರಗತಿ ಪಾಸ್ ಆಗಿರಲೇಬೇಕು. ಇವರು ಸಹ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಲೇಬೇಕು.
ಇಂತಹ ಕುಟುಂಬಗಳ ರೇಷನ್ ಕಾರ್ಡ್ ಇಂದು ಕ್ಯಾನ್ಸಲ್ ಆಗೋಗಿದೆ! ಈ ರೀತಿ ಚೆಕ್ ಮಾಡಿಕೊಳ್ಳಿ
ವಯಸ್ಸಿನ ಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 19 ರಿಂದ 35 ವರ್ಷಗಳ ಒಳಗಿರಬೇಕು. ಈ ಹುದ್ದೆಗೆ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ: ಇಲ್ಲ
ಬೇಕಾಗುವ ದಾಖಲೆಗಳು:
*ಆನ್ಲೈನ್ ಅಪ್ಲಿಕೇಶನ್ ಫಾರ್ಮ್
*ಕ್ಯಾಸ್ಟ್ ಸರ್ಟಿಫಿಕೇಟ್
*ಡೇಟ್ ಆಫ್ ಬರ್ತ್ ಇರುವ SSLC ಅಥವಾ ಪಿಯುಸಿ ಮಾರ್ಕ್ಸ್ ಕಾರ್ಡ್
*ಬರ್ತ್ ಸರ್ಟಿಫಿಕೇಟ್
*ಓದಿರುವುದಕ್ಕೆ ಪ್ರಮಾಣಪತ್ರ
*ವಾಸಸ್ಥಳ ದೃಢೀಕರಣ ಪತ್ರ
*ಕ್ಯಾಸ್ಟ್ ಸರ್ಟಿಫಿಕೇಟ್
*ಆಧಾರ್ ಕಾರ್ಡ್/ವೋಟರ್ ಐಡಿ/ರೇಶನ್ ಕಾರ್ಡ್
*ಅಭ್ಯರ್ಥಿ ವಿಕಲಚೇತನರು, ವಿಧವೆ, ವಿಚ್ಛೇದಿತೆ, ನಿರಾಶ್ರಿತ, ಲಿಂಗೈಕ್ಯ ಮಹಿಳೆಯಾದರೆ ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರ.
ಮುಖ್ಯವಾದ ದಿನಾಂಕ:
*12/7/2024 :- ಅರ್ಜಿ ಸಲ್ಲಿಕೆ ಶುರುವಾದ ದಿನಾಂಕ
*12/8/2024 :- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಅರ್ಜಿ ಸಲ್ಲಿಕೆ:
https://karnemakaone.kar.nic.in/abcd/ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಮಹಿಳೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಈ ವೆಬ್ಸೈಟ್ ಗೆ ಭೇಟಿ ನೀಡಿ, ನಿಮ್ಮ ಹಳ್ಳಿ, ತಾಲ್ಲೂಕು, ಜಿಲ್ಲೆ ಇದೆಲ್ಲದರ ಬಗ್ಗೆ ಸರಿಯಾದ ಮಾಹಿತಿ ನೀಡಿ, ಆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Application Invitation for Anganwadi Teacher and Assistant Posts