ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್! ಇದ್ದಕ್ಕಿದ್ದಂತೆ ಹೊಸ ರೂಲ್ಸ್ ತಂದ ಸರ್ಕಾರ

ರಾಜ್ಯ ಸರ್ಕಾರವು ನಮ್ಮ ರಾಜ್ಯದ ಜನರಿಗೆ ಅನುಕೂಲ ಆಗಲಿ, ವಿದ್ಯುತ್ ಬಿಲ್ (Electricity Bill) ಕಟ್ಟುವ ತೊಂದರೆ ಇರುವುದು ಬೇಡ ಎನ್ನುವ ಕಾರಣಕ್ಕೆ ಗೃಹಜ್ಯೋತಿ ಯೋಜನೆಯನ್ನು (Gruha Jyothi Scheme) ಜಾರಿಗೆ ತರಲಾಯಿತು. ಈ ಒಂದು ಯೋಜನೆಯ ಮೂಲಕ ರಾಜ್ಯದ ಜನತೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.

ಮೊದಲಿಗೆ ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ (Free Electricity) ನೀಡಲಾಗುತ್ತದೆ ಎಂದು ಹೇಳಿದರೂ ಕೂಡ, ನಂತರದ ಸಮಯದಲ್ಲಿ ವಿದ್ಯುತ್ ಬಳಕೆ ವಿಚಾರಕ್ಕೆ ಬೇರೆಯದೇ ನಿಯಮವನ್ನು ಜಾರಿಗೆ ತರಲಾಯಿತು.

ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಸಿಗುವುದಿಲ್ಲ, ಬದಲಾಗಿ ಕಳೆದ 12 ತಿಂಗಳಲ್ಲಿ ಆ ಮನೆಯಲ್ಲಿ ಎಷ್ಟು ವಿದ್ಯುತ್ ಬಳಕೆ ಆಗಿದೆ ಎನ್ನುವುದನ್ನು ಲೆಕ್ಕ ಹಾಕಿ, ಅದರ ಸರಾಸರಿ ಆಧಾರದ ಆ ಮನೆಯವರು ಎಷ್ಟು ಫ್ರೀ ವಿದ್ಯುತ್ ಬಳಕೆ ಮಾಡಬಹುದು ಎನ್ನುವುದನ್ನು ನಿರ್ಧಾರ ಮಾಡಲಾಗಿದೆ.

ಇಂತಹ ಕುಟುಂಬಗಳ ರೇಷನ್ ಕಾರ್ಡ್ ಇಂದು ಕ್ಯಾನ್ಸಲ್ ಆಗೋಗಿದೆ! ಈ ರೀತಿ ಚೆಕ್ ಮಾಡಿಕೊಳ್ಳಿ

ಆ ಸರಾಸರಿ ಯೂನಿಟ್ ಗಳಷ್ಟು ವಿದ್ಯುತ್ ಅನ್ನು ಮಾತ್ರ ಜನರು ಫ್ರೀಯಾಗಿ ಬಳಕೆ ಮಾಡಬಹುದಿತ್ತು, ಅದನ್ನು ಹೊರತು ಪಡಿಸಿ 10% ಅಧಿಕ ವಿದ್ಯುತ್ ಬಳಕೆ ಮಾಡಬಹುದಿತ್ತು.

ಒಂದು ವೇಳೆ ಹೆಚ್ಚುವರಿ ವಿದ್ಯುತ್ ಗಿಂತಲು ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಅಂಥವರು ವಿದ್ಯುತ್ ಬಿಲ್ (Electricity Bill) ಅನ್ನು ಪೂರ್ತಿಯಾಗಿ ಪಾವತಿ ಮಾಡಬೇಕಿತ್ತು. ಇದು ಸರ್ಕಾರ ಜಾರಿಗೆ ತಂದಿದ್ದ ನಿಯಮ. ಮತ್ತೊಂದು ನಿಯಮದ ಅನುಸಾರ ಒಂದು ವೇಳೆ ಯಾರ ಮನೆಯಲ್ಲಾದರು 200 ಯೂನಿಟ್ ಗಿಂತಲು ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಅಂಥವರು ಗೃಹಜ್ಯೋತಿ ಯೋಜನೆ ಸೌಲಭ್ಯ ಸಿಗುವುದಿಲ್ಲ ಎನ್ನುವ ರೂಲ್ಸ್ ಅನ್ನು ಕೂಡ ಜಾರಿಗೆ ತರಲಾಗಿತ್ತು.

Electricity billಇದೆಲ್ಲವೂ ಜನರಿಗೆ ಒಂದು ರೀತಿ ಹೊರೆ ಅನ್ನಿಸಿದ್ದು ಕೂಡ ಇದೆ. ಆದರೆ ಇನ್ನಷ್ಟು ಜನರಿಗೆ ಅನುಕೂಲವು ಆಗಿದೆ. ಹೇಗೋ ಜನರು ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ಅಂದುಕೊಳ್ಳುವ ಹೊತ್ತಿಗೆ ಈಗ, ಸರ್ಕಾರ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.

ಗೃಹಜ್ಯೋತಿ ಯೋಜನೆಯ ಅನುಸಾರ ತಿಳಿಸಿರುವ ವಿದ್ಯುತ್ ಮಟ್ಟಕ್ಕಿಂತ ಯಾರು ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಾರೋ ಅಂಥವರಿಗೆ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಈ ಹೊಸ ನಿಯಮದ ಅನುಸಾರ ಹೆಚ್ಚು ವಿದ್ಯುತ್ ಬಳಕೆ ಮಾಡುವವರು ಇನ್ನುಮುಂದೆ ಹೆಚ್ಚುವರಿ ಭದ್ರತಾ ಠೇವಣಿ (Additional Security Deposit) ಪಾವತಿ ಮಾಡಬೇಕು. ಸರ್ಕಾರ ಹೆಚ್ಚುವರಿಯಾಗಿ ಕೊಡುವ 10% ಹೆಚ್ಚಿನ ವಿದ್ಯುತ್ ಗಿಂತಲು ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಅಂಥವರು ಹೆಚ್ಚುವರಿ ಭದ್ರತಾ ಠೇವಣಿಯನ್ನು ಮೊದಲೇ ಪಾವತಿ ಮಾಡಿರಬೇಕು, ಎಂದು ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ದೊಡ್ಡ ಶಾಕ್ ಎಂದು ಹೇಳಿದರೆ ತಪ್ಪಲ್ಲ.

The government has brought new rules for the beneficiaries of Gruha Jyothi Yojana

TRENDING ARTICLES1 / 8

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories