ಇಂತಹ ಕುಟುಂಬಗಳ ರೇಷನ್ ಕಾರ್ಡ್ ಇಂದು ಕ್ಯಾನ್ಸಲ್ ಆಗೋಗಿದೆ! ಈ ರೀತಿ ಚೆಕ್ ಮಾಡಿಕೊಳ್ಳಿ

Story Highlights

ರೇಷನ್ ಕಾರ್ಡ್ ಬಳಕೆ ಮಾಡುತ್ತಿರುವವರ ಪೈಕಿ ಕೆಲವರು ಸುಳ್ಳು ಮಾಹಿತಿ ನೀಡಿದ್ದಾರೆ, ಇನ್ನು ಕೆಲವರು ಉತ್ತಮ ಸ್ಥಿತಿಯಲ್ಲಿದ್ದರು ಸಹ ಬಿಪಿಎಲ್ ರೇಷನ್ ಕಾರ್ಡ್ ಪಡೆದಿದ್ದಾರೆ, ಅಂತಹವರ ರೇಷನ್ ಕಾರ್ಡ್ ಬಂದ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ .

ಜನರ ಹಿತದೃಷ್ಟಿಯಿಂದ, ಬಡ ಜನರಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಸರ್ಕಾರವು ಬಡಜನರಿಗೆ ರೇಷನ್ ಕಾರ್ಡ್ (Ration Card) ವಿತರಣೆ ಮಾಡುತ್ತದೆ. ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card), ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಇನ್ನು ನಮ್ಮ ರಾಜ್ಯದಲ್ಲಿ ಚಾಲ್ತಿಯಲ್ಲಿರುವ 5 ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಇರಲೇಬೇಕು. ಆದರೆ ಇದೀಗ ರಾಜ್ಯ ಸರ್ಕಾರವು ಇಂಥವರ ರೇಷನ್ ಕಾರ್ಡ್ ಅನ್ನು ಬಂದ್ ಮಾಡಿದೆ.

ಹೌದು, ನಮ್ಮ ರಾಜ್ಯದಲ್ಲಿ ಈಗ ಜನರಿಗೆ ಹೆಚ್ಚಿನ ಸೌಲಭ್ಯಗಳು ಸಿಗಲು ಬಿಪಿಎಲ್ ಕಾರ್ಡ್ ಇರಲೇಬೇಕು. ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ಮಾತ್ರವಲ್ಲದೇ, ಚಿಕಿತ್ಸೆ ಹಾಗೂ ಇನ್ನಿತರ ರಿಯಾಯಿತಿಗಳು ಕೂಡ ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗುತ್ತದೆ.

ಬಿಪಿಎಲ್ ಕಾರ್ಡ್ ಬೇಕು ಅಂತ 3 ಲಕ್ಷ ಅರ್ಜಿಗಳು! ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಬಿಗ್ ಅಪ್ಡೇಟ್

ಬಿಪಿಎಲ್ ಕಾರ್ಡ್ ಇರುವವರ ಸಂಖ್ಯೆ ನಮ್ಮ ರಾಜ್ಯದಲ್ಲಿ ಜಾಸ್ತಿಯೇ ಇದೆ. ಒಟ್ಟು 1.03 ಕೋಟಿ ಕುಟುಂಬಗಳ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದೆ, ಹಾಗೆಯೇ 14, ಒಟ್ಟು 1.14 ಕೋಟಿ ಜನರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರಬೇಕು ಎಂದು ಮಿತಿ ಇದೆ.

ಆದರೆ ನಮ್ಮ ರಾಜ್ಯದಲ್ಲಿ ಈಗ ಪ್ರಸ್ತುತ 1.33 ಕೋಟಿ ಕುಟುಂಬಗಳ ಬಳಿ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇದೆ. ಇದು ಮಿತಿಯನ್ನು ಮೀರಿರುವ ಮಟ್ಟ ಆಗಿದ್ದು, ಹೆಚ್ಚುವರಿ ಕುಟುಂಬಗಳ ಬಳಿ ಇರುವ ರೇಶನ್ ಕಾರ್ಡ್ ಗಳಿಗೆ ಸರ್ಕಾರವೇ ವೆಚ್ಚ ಭರಿಸುತ್ತಿದೆ.

ಹಾಗೂ ಇನ್ನು 3 ಲಕ್ಷಕ್ಕಿಂತ ಹೆಚ್ಚು ಜನರು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಹೆಚ್ಚು ರೇಷನ್ ಕಾರ್ಡ್ ಗಳನ್ನು ನೀಡಿರುವ ಕಾರಣ ಸರ್ಕಾರ ಇನ್ನು ಕೂಡ ಹೊಸ ರೇಶನ್ ಕಾರ್ಡ್ ವಿತರಣೆ ಮಾಡಿಲ್ಲ.

Ration Cardಜೊತೆಗೆ ಪ್ರಸ್ತುತ ರೇಶನ್ ಕಾರ್ಡ್ ಬಳಕೆ ಮಾಡುತ್ತಿರುವವರ ಪೈಕಿ ಕೆಲವರು ಸುಳ್ಳು ಮಾಹಿತಿ ನೀಡಿದ್ದಾರೆ, ಇನ್ನು ಕೆಲವರು ಉತ್ತಮ ಸ್ಥಿತಿಯಲ್ಲಿದ್ದರು ಸಹ ಬಿಪಿಎಲ್ ರೇಷನ್ ಕಾರ್ಡ್ ಪಡೆದಿದ್ದಾರೆ, ಹಾಗೆಯೇ ಇನ್ನಷ್ಟು ಜನರು ಅವರ ಮನೆಗಳಲ್ಲಿ ಯಾರಾದರೂ ವ್ಯಕ್ತಿ ಮರಣ ಹೊಂದಿದ್ದರೆ, ಅಂಥವರ ಹೆಸರನ್ನು ರೇಶನ್ ಕಾರ್ಡ್ ಇಂದ ತೆಗೆದು ಹಾಕಿಸದೇ, ಹಾಗೆಯೇ ಬಿಟ್ಟಿದ್ದಾರೆ. ಇದೀಗ ಇದೆಲ್ಲವನ್ನು ಕೂಡ ಸರ್ಕಾರ ಪರಿಶೀಲಿಸುತ್ತಿದ್ದು, ಅರ್ಹತೆ ಇಲ್ಲದ ರೇಷನ್ ಕಾರ್ಡ್ ಗಳನ್ನು ಈಗಾಗಲೇ ಕ್ಯಾನ್ಸಲ್ ಮಾಡಿದೆ.

ಒಂದಷ್ಟು ಜನರು ಬಿಪಿಎಲ್ ರೇಶನ್ ಕಾರ್ಡ್ ಇಟ್ಟುಕೊಂಡಿದ್ದರು ಸಹ, ರೇಶನ್ ಪಡೆಯುತ್ತಿಲ್ಲ, 3 ತಿಂಗಳಿನಿಂದ ಯಾರೆಲ್ಲಾ ರೇಷನ್ ಪಡೆದಿಲ್ಲವೋ ಅಂಥವರ ರೇಷನ್ ಕಾರ್ಡ್ ಅನ್ನು ಸಸ್ಪೆನ್ಡ್ ಮಾಡಲಿದ್ದು, 6 ತಿಂಗಳಿನಿಂದ ರೇಷನ್ ಪಡೆದಿಲ್ಲ ಎಂದರೆ, ಕ್ಯಾನ್ಸಲ್ (Ration Card Cancellation) ಮಾಡಲಾಗಿದೆ.

ಈ ಕೆಲಸವನ್ನು ಸರ್ಕಾರ ಸ್ಟ್ರಿಕ್ಟ್ ಆಗಿ ಮಾಡುತ್ತಿದ್ದು, ಒಂದು ವೇಳೆ ನಿಮ್ಮ ರೇಶನ್ ಕಾರ್ಡ್ ಕೂಡ ಈಗಾಗಲೇ ಬಂದ್ ಆಗಿದ್ದರೆ, ಮತ್ತೆ ನೀವು ಎಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.

The ration card of such families has been cancelled

Related Stories