ಬಿಪಿಎಲ್ ಕಾರ್ಡ್ ಬೇಕು ಅಂತ 3 ಲಕ್ಷ ಅರ್ಜಿಗಳು! ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಬಿಗ್ ಅಪ್ಡೇಟ್

Story Highlights

ಸುಮಾರು 3 ಲಕ್ಷ ಅರ್ಜಿಗಳು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸರ್ಕಾರವನ್ನು ತಲುಪಿದ್ದು, ಅವುಗಳನ್ನು ಪರಿಶೀಲಿಸಿ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಕೆಲಸವನ್ನು ಸರ್ಕಾರ ಶುರು ಮಾಡಿರಲಿಲ್ಲ

ರಾಜ್ಯದ ಜನರಿಗೆ ಮುಖ್ಯವಾಗಿ ಬೇಕಾಗಿರುವುದು ರೇಷನ್ ಕಾರ್ಡ್ (Ration Card). ಹೌದು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ರೇಷನ್ ರೇಷನ್ ಕಾರ್ಡ್ ಬೇಕೇ ಬೇಕು.

ರಾಜ್ಯ ಸರ್ಕಾರದ ಸೇವೆಗಳು, ಸೌಲಭ್ಯಗಳು ಮಾತ್ರವಲ್ಲ, ಕೇಂದ್ರ ಸರ್ಕಾರದ ಸೌಲಭ್ಯ ಗಳನ್ನು ಪಡೆದುಕೊಳ್ಳುವುದಕ್ಕೆ, ಸರ್ಕಾರದಿಂದ ಸಿಗುವ ಸೇವೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಆದರೆ 3 ಲಕ್ಷ ಜನರ ಬಳಿ ರೇಷನ್ ಕಾರ್ಡ್ ಇಲ್ಲ.

ಹೌದು, ನಮ್ಮ ದೇಶದಲ್ಲಿ ಕಷ್ಟದಲ್ಲಿದ್ದು, ಬಡತನದ ರೇಖೆಗಿಂತ ಕೆಳಗೆ ಇರುವ ಲಕ್ಷಾಂತರ ಜನರ ಬಳಿ ಇಂದಿಗೂ ರೇಶನ್ ಕಾರ್ಡ್ ಇಲ್ಲ. ಇವರೆಲ್ಲರು ಕಳೆದ ವರ್ಷ ಎಲೆಕ್ಷನ್ ನಡೆಯುವುದಕ್ಕಿಂತ ಮೊದಲೇ ಹೊಸದಾಗಿ ರೇಶನ್ ಕಾರ್ಡ್ ಗೆ ಅರ್ಜಿ (Apply For New Ration card) ಸಲ್ಲಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಬರೋದಿರ್ಲಿ, ಇನ್ಮುಂದೆ ಇಂತ ಮಹಿಳೆಯರಿಗೆ ಹಣ ಬರೋದೇ ಗ್ಯಾರೆಂಟಿ ಇಲ್ಲ!

ಸುಮಾರು 3 ಲಕ್ಷ ಅರ್ಜಿಗಳು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸರ್ಕಾರವನ್ನು ತಲುಪಿದ್ದು, ಅವುಗಳನ್ನು ಪರಿಶೀಲಿಸಿ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಕೆಲಸವನ್ನು ಸರ್ಕಾರ ಶುರು ಮಾಡಿರಲಿಲ್ಲ. ಆದರೆ ಈಗ ಜನರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಒಂದು ಕೇಳಿಬಂದಿದೆ.

ಸರ್ಕಾರ ಈಗ ಜನರಿಗೆ ಅನ್ಯಾಯ ಆಗುವುದನ್ನು ತಡೆಯಲು ಪ್ರಮುಖ ಕ್ರಮ ಒಂದನ್ನು ತೆಗೆದುಕೊಳ್ಳುತ್ತಿದೆ. ಅದೇನು ಎಂದರೆ, ಹಲವು ಜನರು ಬಿಪಿಎಲ್ ರೇಶನ್ ಕಾರ್ಡ್ ವಿಚಾರದಲ್ಲಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ, ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು (BPL Ration Card) ಮಾಡಿಸಿಕೊಂಡಿದ್ದಾರೆ..

ಒಂದೇ ಅಡ್ರೆಸ್ ಇರುವ ಮನೆಯಲ್ಲಿ, ಎರಡು ಮೂರು ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡಿರುವವರಿದ್ದಾರೆ, ಇನ್ನು ಬೇರೆ ಬೇರೆ ರೀತಿಯ ಮೋಸಗಳು ಕೂಡ ಸರ್ಕಾರಕ್ಕೆ ನಡೆದಿದ್ದು, ಅವುಗಳನ್ನು ಪತ್ತೆ ಹಚ್ಚುವ ಕೆಲಸ ಶುರುವಾಗಿದೆ.

ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ಪಾಸ್ ಆಗಿದ್ರೆ ಸಾಕು ಅಪ್ಲೈ ಮಾಡಿ!

New Ration cardಕುಟುಂಬಗಳಲ್ಲಿ ಯಾರಾದರೂ ಮೃತರಾಗಿದ್ದರು ಸಹ ಹಲವರು ಅಂಥವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕಿಸಿಲ್ಲ, ಇನ್ನು ಕೆಲವರು ತಮ್ಮ ಆದಾಯ ಚೆನ್ನಾಗಿದ್ದರೂ, ಸ್ವಂತ ಭೂಮಿ (Property) ಹೊಂದಿದ್ದರೂ, ಆದಾಯ ತೆರಿಗೆ (Tax Pay) ಕಟ್ಟುತ್ತಿರುವವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಒಟ್ಟು 1.26 ಕೋಟಿ ಬಿಪಿಎಲ್ ಕಾರ್ಡ್ ಗಳಿದ್ದು, 4.36 ಕೋಟಿ ಜನರು ಅದರ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಈಗ ಪರಿಶೀಲನೆ ನಡೆಸಿ, ಅನರ್ಹರ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲಾಗುತ್ತದೆ..

ಫ್ರೀ ಕರೆಂಟ್ ಇದ್ರೂ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವವರಿಗೆ ಸರ್ಕಾರದಿಂದ ಬಂತು ಹೊಸ ರೂಲ್ಸ್!

ಹೌದು, ಈಗಾಗಲೇ ಇದಕ್ಕಾಗಿ ಕ್ರಮ ತೆಗೆದುಕೊಳ್ಳಲಾಗಿದ್ದು, ಈ ಪ್ರಕ್ರಿಯೆ ಶುರುವಾಗಿದೆ. ಈ ಕೆಲಸಗಳು ಸಾಗುತ್ತಿರುವುದರ ಜೊತೆಗೆ ಅರ್ಹತೆ ಇರುವವರಿಗೆ ಹೊಸ ರೇಷನ್ ಕಾರ್ಡ್ ಕೂಡ ಕೊಡಲಾಗುತ್ತದೆ.

ಜನರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಸಿಕ್ಕಿದ್ದು, ಇದು ಜನರಿಗೆ ಗುಡ್ ನ್ಯೂಸ್ ಆಗಿದೆ.

3 lakh applications for BPL card, Big update for new ration card applicants

Related Stories