ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ಪಾಸ್ ಆಗಿದ್ರೆ ಸಾಕು ಅಪ್ಲೈ ಮಾಡಿ!

Story Highlights

ಪ್ರಸ್ತುತ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗಳು ಮತ್ತು ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತಿ ಇರುವ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿ (Apply For Job) ಸಲ್ಲಿಸಬಹುದು.

ಕಡಿಮೆ ಓದಿ ಒಳ್ಳೆಯ ಕೆಲಸ ಸಿಕ್ಕಿಲ್ಲ ಎಂದುಕೊಂಡವರಿಗೆ ಇದೀಗ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಕೇಳಿಬಂದಿದೆ. ಹೌದು, 10ನೇ ತರಗತಿ ಮತ್ತು ಪಿಯುಸಿ ಪಾಸ್ ಆಗುರುವವರಿಗೆ ಇದೊಂದು ಉತ್ತಮವಾದ ಅವಕಾಶ ಆಗಿದ್ದು, ಜನರು ಈ ಅವಕಾಶದ ಸದುಪಯೋಗಪಡಿಸಿಕೊಳ್ಳಬೇಕು.

ರಾಜ್ಯದಲ್ಲಿ ಅಂಗನವಾಡಿಯಲ್ಲಿ ಖಾಲಿ ಇರುವ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳನ್ನು (Jobs) ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದ್ದು, ಆಸಕ್ತಿ ಇರುವವರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ..

ಪ್ರಸ್ತುತ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆ ಹುದ್ದೆಗಳು ಖಾಲಿ ಇರುವುದು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ. ಬೆಳಗಾವಿ ಜಿಲ್ಲೆಯ ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗಳು ಮತ್ತು ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತಿ ಇರುವ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿ (Apply For Job) ಸಲ್ಲಿಸಬಹುದು.

12ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ! ಇನ್ಮುಂದೆ ಪ್ರತಿ ತಿಂಗಳು ಇದೇ ದಿನ ಹಣ ಬರುತ್ತೆ!

ಬೆಳಗಾವಿಯಲ್ಲಿ (Belagavi) ಒಟ್ಟು 7 ಕಾರ್ಯಕರ್ತೆ ಹುದ್ದೆಗಳು ಮತ್ತು 26 ಸಹಾಯಕಿ ಹುದ್ದೆಗಳು ಖಾಲಿ ಇದೆ, ಅವುಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ, ಬೇಕಿರುವ ಅರ್ಹತೆಗಳು ಏನೇನು ಎಂದು ತಿಳಿಯೋಣ..

ವಿದ್ಯಾಭ್ಯಾಸ: ಅಧಿಸೂಚನೆಯ ಅನುಸಾರ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿರಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವವರು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆ ಇಂದ ಪಿಯುಸಿ ಪಾಸ್ ಆಗಿರಬೇಕು.

ವಯೋಮಿತಿ: ಸರ್ಕಾರದ ಅಧಿಸೂಚನೆಯ ಅನುಸಾರ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಯ ವಯಸ್ಸು 19 ರಿಂದ 35 ವರ್ಷಗಳ ಒಳಗಿರಬೇಕು ಎಂದು ತಿಳಿಸಲಾಗಿದೆ..

Anganwadi Teacherಅಗತ್ಯವಿರುವ ದಾಖಲೆಗಳು:

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವರ ಬಳಿ ಈ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು
*ಭರ್ತಿ ಮಾಡಿರುವ ಅಪ್ಲಿಕೇಶನ್ ಫಾರ್ಮ್
*ಬರ್ತ್ ಸರ್ಟಿಫಿಕೇಟ್
*ಹುಟ್ಟಿದ ದಿನಾಂಕ ಇರುವ 10ನೇ ತರಗತಿ ಮಾರ್ಕ್ಸ್ ಕಾರ್ಡ್ ಅಥವಾ ಪಿಯುಸಿ ಮಾರ್ಕ್ಸ್ ಕಾರ್ಡ್
*ಅಡ್ರೆಸ್ ಪ್ರೂಫ್
*ಕ್ಯಾಸ್ಟ್ ಸರ್ಟಿಫಿಕೇಟ್
*ರೇಷನ್ ಕಾರ್ಡ್
*ವೋಟರ್ ಐಡಿ
*ಆಧಾರ್ ಕಾರ್ಡ್

3 ಲಕ್ಷ ಬಿಪಿಎಲ್ ಕಾರ್ಡ್ ಕ್ಯಾನ್ಸಲ್, ಯಾವುದೇ ಯೋಜನೆಯ ಸೌಲಭ್ಯ ಸಿಗೋಲ್ಲ! ಸರ್ಕಾರ ಧಿಡೀರ್ ನಿರ್ಧಾರ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:

ಈ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು, ಬೆಳಗಾವಿ ಜಿಲ್ಲೆಯ ವ್ಯಾಪ್ತಿಗೆ ಬರುವವರು 8/8/2024ರ ಒಳಗೆ ಅರ್ಜಿ ಸಲ್ಲಿಸಬೇಕು. ಬೆಳಗಾವಿ ಹಳ್ಳಿಯ ವ್ಯಾಪ್ತಿಗೆ ಬರುವವರು 4/8/2024ರ ಒಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ವಿಧಾನ:

ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

https://karnemakaone.kar.nic.in/abcd/ ಈ ಲಿಂಕ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಬೆಳಗಾವಿ ಜಿಲ್ಲೆಯ ವತಿಯಿಂದ ಬಿಡುಗಡೆ ಆಗಿರುವ ಅಧಿಕೃತ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ..

Application Invitation for Anganwadi Teacher Posts, PUC pass is enough to apply

Related Stories