12ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ! ಇನ್ಮುಂದೆ ಪ್ರತಿ ತಿಂಗಳು ಇದೇ ದಿನ ಹಣ ಬರುತ್ತೆ!
ಇದೇ ತಿಂಗಳಲ್ಲಿ ಎರಡು ಕಂತುಗಳ ಹಣವನ್ನು ಅಂದರೆ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಜಮೆ ಮಾಡುವುದಾಗಿ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
12ನೇ ಕಂತಿನ ಗೃಹಲಕ್ಷ್ಮಿ ಹಣದ ಅಪ್ಡೇಟ್ ಬಗ್ಗೆ ಹೆಚ್ಚಿನ ಮಹಿಳೆಯರು ಕಾಯ್ತಾ ಇದ್ದಾರೆ. ಹೌದು, ಖಾತೆಗೆ (Bank Account) ಯಾವಾಗ ಹಣ ಬರಲಿದೆ? ಸರಕಾರ ಬಿಡುಗಡೆ ಮಾಡಿತೇ? ಇತ್ಯಾದಿ.. ಇದೀಗ ಈ ಬಗ್ಗೆ ಸಚಿವೆ ಕೂಡ ಪ್ರತಿ ತಿಂಗಳು ಹಣ ಜಮೆ ಮಾಡುವ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದಲ್ಲಿ ಹಣ ಯಾವಾಗ ಬರಲಿದೆ? ಯಾವ ಮಹಿಳೆಯರಿಗೆ ಹಣ ತಲುಪಲಿದೆ ಎನ್ನುವ ಮಾಹಿತಿ ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿ.
ಹೌದು ಇದುವರೆಗೂ ಸುಮಾರು ಹತ್ತು ಕಂತಿನ ವರೆಗೆ ಮಹಿಳೆಯರು ಗೃಹಲಕ್ಷ್ಮಿ ಹಣ (Gruha Lakshmi Scheme) ಪಡೆದು ಕೊಂಡಿದ್ದು ಹನ್ನೊಂದು ಮತ್ತು ಹನ್ನೇರಡನೇ ಕಂತಿನ ಹಣಕ್ಕಾಗಿ ಮಹಿಳೆಯರು ಕಾಯ್ತಾ ಇದ್ದಾರೆ.
3 ಲಕ್ಷ ಬಿಪಿಎಲ್ ಕಾರ್ಡ್ ಕ್ಯಾನ್ಸಲ್, ಯಾವುದೇ ಯೋಜನೆಯ ಸೌಲಭ್ಯ ಸಿಗೋಲ್ಲ! ಸರ್ಕಾರ ಧಿಡೀರ್ ನಿರ್ಧಾರ
ಈಗಾಗಲೇ ಜೂನ್ ತಿಂಗಳ ಹಣ ಬರುವುದು ಬಹಳಷ್ಟು ತಡವಾಗಿದ್ದು ಹಣ ಬಂದಿಲ್ಲ ಅಂತ ಮಹಿಳೆಯರು ಚರ್ಚೆ ಮಾಡ್ತಾ ಇದ್ದಾರೆ. ಇದೀಗ ಈ ಬಗ್ಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜೂನ್ ತಿಂಗಳ ಹಣವನ್ನು ಅತೀ ಶೀಘ್ರವೇ, ಅಂದರೆ ಇನ್ನೇರಡು ದಿನದಲ್ಲಿ ಮಹಿಳೆಯರ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದಾರೆ.
ಇದೇ ತಿಂಗಳಲ್ಲಿ ಎರಡು ಕಂತುಗಳ ಹಣವನ್ನು ಅಂದರೆ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಜಮೆ ಮಾಡುವುದಾಗಿ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಹಾಗಾಗಿ ಗೃಹಲಕ್ಷ್ಮಿ ಹಣ ಇದೇ ತಿಂಗಳ ಇಪ್ಪತ್ತರ ಒಳಗೆ ನೊಂದಣಿ ಮಾಡಿದ ಪ್ರತಿ ಮಹಿಳೆಯರ ಖಾತೆಗೆ (Bank Account) ಜಮೆ ಯಾಗಬಹುದು.ಇನ್ನು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣ ಜಮೆ ಮಾಡುವುದಾಗಿ ಸಹ ಸಚಿವೆ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಇದೇ ತಿಂಗಳಿನಲ್ಲಿ ಮಹಿಳೆಯರಿಗೆ ಒಟ್ಟು ನಾಲ್ಕು ಸಾವಿರ ಹಣ ಬಿಡುಗಡೆ ಯಾಗಲಿದೆ. ಆದರೆ ಈ ಹಣ ಮಹಿಳೆಯರ ದಾಖಲೆ ಗಳು ಸರಿ ಇದ್ದರೆ ಮಾತ್ರ ಖಾತೆಗೆ ಬರಲಿದೆ.
ಟಿಕೆಟ್ ಖರೀದಿ ಕಡ್ಡಾಯ! ಉಚಿತ ಬಸ್ ಪ್ರಯಾಣ ಮಾಡೋ ಮಹಿಳೆಯರಿಗೆ ಇನ್ಮುಂದೆ ಹೊಸ ನಿಯಮ
ಹಣ ಬಾರದೇ ಇರೋ ಮಹಿಳೆಯರು ತಮ್ಮ ದಾಖಲೆಗಳನ್ನು ಸರಿಪಡಿಸಿ ಅನ್ನುವ ಸೂಚನೆ ಕೂಡ ನೀಡಿದ್ದಾರೆ. ಈ ಬಗ್ಗೆ ಸರಕಾರ ಹಲವು ಭಾರಿ ಮಹಿಳೆಯರಿಗೆ ಅರಿವು ಮೂಡಿಸಿದೆ. ಆದರೂ ಆದಾರ್ ಕಾರ್ಡ್ (Aadhaar Card) ಸಿಡಿಂಗ್ ಸಮಸ್ಯೆ , ಬ್ಯಾಂಕ್ ಖಾತೆ ನಿಷ್ಕ್ರಿಯ, ರೇಷನ್ ಕಾರ್ಡ್ ಅಪ್ಡೇಟ್ ಇತ್ಯಾದಿ ಸಮಸ್ಯೆ ಯಾಗಿದ್ದು ಮಹಿಳೆಯರು ಇಂತಹ ದಾಖಲೆಗಳನ್ನು ಸರಿಪಡಿಸಬೇಕೆಂದು ಸೂಚನೆ ನೀಡಿದ್ದಾರೆ.
ಹಣ ಬಂದಿರುವ ಬಗ್ಗೆ ಚೆಕ್ ಮಾಡಲು ಮಹಿಳೆಯರು ಡಿಬಿಟಿ ಕರ್ನಾಟಕ (DBT Karnataka) ಎಂಬ ಆಪ್ ಡೌನ್‌ಲೋಡ್ (Download App) ಮಾಡಿ ಹಣ ಜಮಾ ಆಗಿರುವ ಬಗ್ಗೆ ಚೆಕ್ ಮಾಡುಬಹುದಾಗಿದೆ.
Gruha Lakshmi Yojana money will Deposit on the same day every month