3 ಲಕ್ಷ ಬಿಪಿಎಲ್ ಕಾರ್ಡ್ ಕ್ಯಾನ್ಸಲ್, ಯಾವುದೇ ಯೋಜನೆಯ ಸೌಲಭ್ಯ ಸಿಗೋಲ್ಲ! ಸರ್ಕಾರ ಧಿಡೀರ್ ನಿರ್ಧಾರ

Story Highlights

ನಮ್ಮ ರಾಜ್ಯದಲ್ಲಿ ಒಟ್ಟು 3 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರಾಜ್ಯ ಸರ್ಕಾರ ಕ್ಯಾನ್ಸಲ್ ಮಾಡಿದೆ, ಯಾರ ರೇಷನ್ ಕಾರ್ಡ್ (Ration card) ಬಂದ್ ಆಗಿದೆ? ಯಾವ ಕಾರಣಕ್ಕೆ ರೇಷನ್ ಕಾರ್ಡ್ ಬಂದ್ ಆಗಿದೆ? ತಿಳಿಯೋಣ

ರಾಜ್ಯದಲ್ಲಿ ಈಗ ಬಿಪಿಎಲ್ ಕಾರ್ಡ್ ಗೆ (BPL Card) ಸಂಬಂಧಿಸಿದ ಹಾಗೆ ಕೆಲವು ಮುಖ್ಯ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿದ್ದು, ಇದರಿಂದ ಎಲ್ಲರೂ ಕೂಡ ಬಹಳ ಹುಷಾರಾಗಿ ಇರಬೇಕು. ನಮ್ಮ ರಾಜ್ಯದಲ್ಲಿ ಒಟ್ಟು 3 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರಾಜ್ಯ ಸರ್ಕಾರ ಕ್ಯಾನ್ಸಲ್ ಮಾಡಿದೆ.

ಇದರಿಂದ ಜನರಿಗೆ ಬಿಗ್ ಶಾಕ್ ಆಗಿದ್ದು, ಯಾರ ರೇಷನ್ ಕಾರ್ಡ್ (Ration card) ಬಂದ್ ಆಗಿದೆ? ಯಾವ ಕಾರಣಕ್ಕೆ ರೇಷನ್ ಕಾರ್ಡ್ ಬಂದ್ ಆಗಿದೆ? ಎಲ್ಲವನ್ನು ತಿಳಿಯೋಣ…

ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಈಗ ರೇಶನ್ ಕಾರ್ಡ್ ಗಳು ಬೇಕೇ ಬೇಕು. ಆದರೆ ಹಲವರು ತಮಗೆ ಅನುಕೂಲ ಇದ್ದರೂ ಸಹ ಸರ್ಕಾರಕ್ಕೆ ಮೋಸ ಮಾಡಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಟಿಕೆಟ್ ಖರೀದಿ ಕಡ್ಡಾಯ! ಉಚಿತ ಬಸ್ ಪ್ರಯಾಣ ಮಾಡೋ ಮಹಿಳೆಯರಿಗೆ ಇನ್ಮುಂದೆ ಹೊಸ ನಿಯಮ‌

ಕಳೆದ 6 ತಿಂಗಳುಗಳ ಸಮಯದಿಂದ ಸರ್ಕಾರ ಅಂಥವರನ್ನು ಪತ್ತೆ ಹಚ್ಚಿ, ಅಂಥ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡುತ್ತಿದ್ದು, ಈವರೆಗೂ 3.24 ಲಕ್ಷ ರೇಷನ್ ಕಾರ್ಡ್ ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.

ರೇಷನ್ ಕಾರ್ಡ್ ಬ್ಯಾನ್ (Ration Card Cancellation) ಆಗಿರುವುದು ಯಾವ ಕಾರಣಕ್ಕೆ ಎಂದು ನೋಡುವುದಾದರೆ, ಯಾವ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಜಾಸ್ತಿ ಇದೆಯೋ ಅಂಥವರ ರೇಷನ್ ಕಾರ್ಡ್, ಸ್ವಂತ ಸೈಟ್ ಹೊಂದಿರುವವರು, 3 ಹೆಕ್ಟರ್ ಗಿಂತ ಜಾಸ್ತಿ ಸ್ವಂತ ಭೂಮಿ (Own Property) ಹೊಂದಿರುವವರು, ತೆರಿಗೆ ಪಾವತಿ ಮಾಡುತ್ತಿರುವವರು, ಸ್ವಂತ ವಾಹನ ಹೊಂದಿರುವವರು ಇಂಥವರ ರೇಷನ್ ಕಾರ್ಡ್ ಗಳನ್ನು ಗುರುತಿಸಿದೆ. ಈಗಾಗಲೇ 3 ಲಕ್ಷಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ ಗಳನ್ನು ಬ್ಯಾನ್ ಮಾಡಿದೆ.

ಇಂತಹ ಮಹಿಳೆಯರ ಹೆಸರು ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ಡಿಲೀಟ್! ಮಹತ್ವದ ಬದಲಾವಣೆ

Ration Cardಕಳೆದ 6 ತಿಂಗಳುಗಳಿಂದ ಯಾರೆಲ್ಲಾ ರೇಷನ್ ಕಾರ್ಡ್ ಗಳನ್ನು ಗುರುತಿಸಿಲ್ಲವೋ ಅಂಥವರ ರೇಷನ್ ಕಾರ್ಡ್ ಗಳನ್ನು ಕೂಡ ಗುರುತಿಸಿದ್ದು, ಅವುಗಳನ್ನು ಕೂಡ ಕ್ಯಾನ್ಸಲ್ ಮಾಡಲಾಗುತ್ತಿದೆ.

ಕ್ಯಾನ್ಸಲ್ ಮಾಡಿರುವ ಎಲ್ಲಾ ರೇಷನ್ ಕಾರ್ಡ್ ಗಳನ್ನು ಬಿಪಿಎಲ್ ಇಂದ ಎಪಿಎಲ್ ಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರದಿಂದ ತಿಳಿದುಬಂದಿದೆ. ಹಾಗೆಯೇ ರೇಷನ್ ಕಾರ್ಡ್ ಗಳಲ್ಲಿ ಆಗಿರುವ ಕೆಲವು ತಪ್ಪುಗಳನ್ನು ಕೂಡ ಸರಿಪಡಿಸಲಾಗುತ್ತಿದೆ, ಸುಮಾರು 6.25 ಲಕ್ಷ ಜನರು ಮರಣ ಹೊಂದಿದ್ದು, ಅಂಥವರ ಹೆಸರನ್ನು ರೇಷನ್ ಕಾರ್ಡ್ ಇಂದ ತೆಗೆದು ಹಾಕಿರಲಿಲ್ಲ, ಆ ಹೆಸರುಗಳನ್ನು ತೆಗೆದು ಹಾಕಲಾಗುತ್ತಿದೆ.

ಈ 10 ಜಿಲ್ಲೆಗಳಿಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ! ಮೊದಲ ಹಂತದ ಹೊಸ ಪಟ್ಟಿ ಬಿಡುಗಡೆ

ಈ ಎಲ್ಲಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿರುವ ಕಾರಣ, ಅಕ್ರಮ ಬಿಪಿಎಲ್ ಕಾರ್ಡ್ ಮೇಲೆ ಕತ್ತರಿ ಬಿದ್ದಿದ್ದು, ಪ್ರಸ್ತುತ ನಮ್ಮ ರಾಜ್ಯದಲ್ಲಿ ಒಟ್ಟು 1.27 ಕೋಟಿ ಬಿಪಿಎಲ್ ಕಾರ್ಡ್ ಗಳಿವೆ, 4.6 ಕೋಟಿ ಜನರು ಇದರಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಕಳೆದ ವರ್ಷ ಎಲೆಕ್ಷನ್ ನಡೆಯುವುದಕ್ಕಿಂತ ಮೊದಲೇ ಸುಮಾರು 2.95 ಲಕ್ಷ ಜನರು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದು, ಅವರೆಲ್ಲರ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ವಿತರಣೆ ಮಾಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ.

3 Lakh BPL Card Cancelled by Govt, Here is the Reason

Related Stories