ಇಂತಹ ಮಹಿಳೆಯರ ಹೆಸರು ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ಡಿಲೀಟ್! ಮಹತ್ವದ ಬದಲಾವಣೆ
ಯಾರೆಲ್ಲಾ ನಕಲಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಾರೋ, ಅಂಥವರ ಅರ್ಜಿಗಳನ್ನು ಪರಿಶೀಲಿಸಿ, ಅವರುಗಳಿಗೆ ಯೋಜನೆಯ ಹಣ ತಲುಪುತ್ತಿದ್ದರೆ, ಅದನ್ನು ಶೀಘ್ರದಲ್ಲೇ ಕ್ಯಾನ್ಸಲ್ ಮಾಡಲಾಗುತ್ತದೆ.
ರಾಜ್ಯ ಸರ್ಕಾರವು ಎಲ್ಲಾ ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಆಗಿದೆ. ಈ ಒಂದು ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಸಹಾಯ ಮಾಡುವ ಗುರಿಯನ್ನು ಸರ್ಕಾರ ಹೊಂದಿತ್ತು, ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ₹2000 ರೂಪಾಯಿಗಳನ್ನು ಡಿಬಿಟಿ ಮೂಲಕ ವರ್ಗಾವಣೆ (Money Transfer) ಮಾಡುತ್ತಾ ಬರಲಾಗುತ್ತಿದೆ. ಈ ವರೆಗು 10 ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಯನ್ನು ತಲುಪಿದೆ..
11 ಮತ್ತು 12ನೇ ತಿಂಗಳ ಹಣ ಬರುವುದಕ್ಕೆ ಇನ್ನು ಬಾಕಿ ಇದೆ. ನಡುವೆ ಚುನಾವಣೆ ಹಾಗೂ ಅದರ ಫಲಿತಾಂಶ ಬಂದ ಕಾರಣ ಇದರಿಂದ 11 ಮತ್ತು 12ನೇ ಕಂತಿನ ಹಣ ಮಹಿಳೆಯರನ್ನು ತಲುಪಿಲ್ಲ.
ಈ 10 ಜಿಲ್ಲೆಗಳಿಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ! ಮೊದಲ ಹಂತದ ಹೊಸ ಪಟ್ಟಿ ಬಿಡುಗಡೆ
ಶೀಘ್ರದಲ್ಲೇ ಮಹಿಳೆಯರಿಗೆ ಹಣ ಜಮೆ ಆಗೋದು ಖಂಡಿತ ಆಗಿದೆ. ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮವಾದ ಫಲಿತಾಂಶ ಪಡೆಯದೇ ಹೋದ ಕಾರಣ ಈ ಗ್ಯಾರೆಂಟಿ ಯೋಜನೆಗಳು ರಾಜ್ಯದಲ್ಲಿ ನಿಂತು ಹೋಗಬಹುದು ಎನ್ನುವ ಅನುಮಾನ ಮತ್ತು ಊಹಾಪೋಹಗಳು ಕೂಡ ಶುರುವಾಗಿದ್ದವು.
ಆದರೆ ಖುದ್ದು ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತನಾಡಿ, 5 ವರ್ಷಗಳ ಕಾಲ ಯಾವುದೇ ಯೋಜನೆಗಳು ನಿಲ್ಲುವುದಿಲ್ಲ ಎಂದು ಭರವಸೆ ನೀಡಿದ್ದಾರೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡ ಇದೇ ಮಾತನ್ನಾಡಿದ್ದಾರೆ.
ಗೃಹಲಕ್ಷ್ಮಿ ಹಣ ಪಡೆಯೋಕೆ ಇನ್ಮೇಲೆ ಈ 4 ರೂಲ್ಸ್ ಕಡ್ಡಾಯ! ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್
ಹಾಗೆಯೇ ರಾಜ್ಯದ ಮಹಿಳೆಯರು ತಮಗೆ ಹಣ ಬರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮನೆ ನಿರ್ವಹಣೆಗೆ ಸಹಾಯ ಆಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ನಿಂತಿಲ್ಲ, ಯಾರೆಲ್ಲಾ ಇನ್ನು ಅರ್ಜಿ ಸಲ್ಲಿಸಿಲ್ಲವೋ ಅಂಥವರು ಕೂಡಲೇ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಎಲ್ಲಾ ದಾಖಲೆಗಳು ಸರಿ ಇದ್ದರೆ, ನಿಮಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗುತ್ತದೆ.
ರೇಷನ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ, ಸೆಪ್ಟೆಂಬರ್ 30ರ ತನಕ ಗಡುವು ವಿಸ್ತರಣೆ! ಬಂತು ಹೊಸ ಆದೇಶ
ಸರ್ಕಾರದಿಂದ ಈಗ ಮಹಿಳೆಯರಿಗೆ ಒಂದು ಖಡಕ್ ಎಚ್ಚರಿಕೆ ಕೂಡ ಬಂದಿದ್ದು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ನಕಲಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದಾರೋ, ಅಂಥವರ ಅರ್ಜಿಗಳನ್ನು ಪರಿಶೀಲಿಸಿ, ಅವರುಗಳಿಗೆ ಯೋಜನೆಯ ಹಣ ತಲುಪುತ್ತಿದ್ದರೆ, ಅದನ್ನು ಶೀಘ್ರದಲ್ಲೇ ಕ್ಯಾನ್ಸಲ್ ಮಾಡಲಾಗುತ್ತದೆ. ಸುಳ್ಳು ದಾಖಲೆಗಳನ್ನು ನೀಡಿರುವವರಿಗೆ ಇನ್ನುಮುಂದೆ ಯೋಜನೆಯ ಸೌಲಭ್ಯ ಸಿಗುವುದಿಲ್ಲ.
Delete the names of such women from the list of Gruha Lakshmi Yojana