Bangalore NewsKarnataka News

ರೇಷನ್ ಕಾರ್ಡ್ ಇರೋರಿಗೆ ಸಿಹಿ ಸುದ್ದಿ, ಸೆಪ್ಟೆಂಬರ್ 30ರ ತನಕ ಗಡುವು ವಿಸ್ತರಣೆ! ಬಂತು ಹೊಸ ಆದೇಶ

ಜನರಿಗೆ ಅನುಕೂಲ ಆಗಲಿ, ಆರ್ಥಿಕವಾಗಿ ಸಹಾಯ ಆಗಲಿ, ಆಹಾರದ ವಿಚಾರದಲ್ಲಿ ಸಹಾಯ ಆಗಲಿ ಎನ್ನುವ ಕಾರಣಕ್ಕೆ ಪಡಿತರ ಚೀಟಿಯನ್ನು (Ration Card) ನೀಡುತ್ತದೆ. ರೇಷನ್ ಕಾರ್ಡ್ ಇದ್ದವರಿಗೆ ಬಹಳಷ್ಟು ಸೌಲಭ್ಯಗಳು ಮತ್ತು ಸೌಕರ್ಯಗಳು ಸಿಗುತ್ತದೆ.

ಬಡತನದ ರೇಖೆಯ ಆಧಾರದ ಮೇಲೆ ಜನರಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಇದೀಗ ಕೇಂದ್ರ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವವರಿಗೆ ನಿರಾಳ ಅಗುವಂಥ ಒಂದು ಸುದ್ದಿ ನೀಡಿದೆ.

Good news for ration card Holders, deadline extension till September

ಹೌದು, ನಮಗೆಲ್ಲಾ ಗೊತ್ತಿರುವ ಹಾಗೆ ರೇಶನ್ ಕಾರ್ಡ್ ಇರುವವರಿಗೆ ಸರ್ಕಾರದ ಕಡೆಯಿಂದ ಬಹಳಷ್ಟು ಸೇವೆಗಳು ಉಚಿತವಾಗಿ ಸಿಗಲಿದೆ. ಯೋಜನೆಗಳ ಮೂಲಕ ಆರ್ಥಿಕ ಸಹಾಯ, ಉಚಿತ ಆಹಾರ ಧಾನ್ಯಗಳು, ಉಚಿತ ಆರೋಗ್ಯ ಸೇವೆ ಇದೆಲ್ಲವೂ ಇರುವುದರಿಂದ ಕೋಟ್ಯಾಂತರ ಜನರು ರೇಶನ್ ಕಾರ್ಡ್ ಮಾಡಿಸಿಕೊಂಡು, ಸರ್ಕಾರದಿಂದ ಸಿಗುವಂಥ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಕೆಲವರು ಸರ್ಕಾರಕ್ಕೆ ಮೋಸ ಕೂಡ ಮಾಡುತ್ತಿದ್ದಾರೆ.

3 ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಬರದೇ ಇದ್ರೆ ಈ ಕೆಲಸ ಮಾಡಿ! ತಕ್ಷಣವೇ ಹಣ ಬರುತ್ತೆ

ಹೌದು, ಒಂದೇ ಮನೆಯಲ್ಲಿ ಇದ್ದರೂ ಕೂಡ ಕೆಲವು ಕುಟುಂಬಗಳು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡು, ಸರ್ಕಾರಕ್ಕೆ ಮೋಸ ಮಾಡುತ್ತಿವೆ. ಈ ಥರದ ಸಮಸ್ಯೆಗಳನ್ನು ಕಡಿಮೆ ಮಾಡುವ ಸಲುವಾಗಿ, ಸರ್ಕಾರಕ್ಕೆ ಮೋಸ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸಲುವಾಗಿ, ಕೇಂದ್ರ ಸರ್ಕಾರವು ಎಲ್ಲರೂ ಕೂಡ ತಮ್ಮ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡಬೇಕು ಎನ್ನುವ ಕಡ್ಡಾಯ ನಿಯಮವನ್ನು ಜಾರಿಗೆ ತಂದಿತು. 2017ರಲ್ಲಿ ಪಿಡಿಎಸ್ ಕಡೆಯಿಂದ ಈ ನಿಯಮ ಜಾರಿಯಾಯಿತು.

Ration Cardಆದರೆ ಇಂದಿಗೂ ಕೂಡ ರೇಶನ್ ಕಾರ್ಡ್ ಹೊಂದಿರುವ ಎಲ್ಲರೂ ಸಹ ಈ ಒಂದು ಕೆಲಸವನ್ನು ಮಾಡಿಲ್ಲ. ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದಕ್ಕೆ 2024ರ ಜೂನ್ 30 ಕೊನೆಯ ದಿನಾಂಕ ಆಗಿತ್ತು.

ಜೂನ್ 30ರ ಒಳಗೆ ಈ ಒಂದು ಕೆಲಸ ಮಾಡಿಲ್ಲ ಅಂದರೆ ಜುಲೈ 1ರಿಂದ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ ಎನ್ನುವ ಹಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಈ ಗಡುವನ್ನು ಹೆಚ್ಚಳ ಮಾಡಿದ್ದು, ಸೆಪ್ಟೆಂಬರ್ 30ರ ವರೆಗು ಆಧಾರ್ ಲಿಂಕ್ ಮಾಡುವುದಕ್ಕೆ ಸಮಯ ನೀಡಲಾಗಿದೆ. ಇನ್ನು 3 ತಿಂಗಳ ಒಳಗೆ ಆಧಾರ್ ಲಿಂಕ್ ಮಾಡಿಲ್ಲ ಎಂದರೆ, ರೇಷನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ..

ಉಚಿತ ಮನೆ ಯೋಜನೆ, ಪ್ರತಿಯೊಬ್ಬರಿಗೂ ಸ್ವಂತ ಸೂರು! ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂಪಾಯಿ

ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಅನ್ನು ಆನ್ಲೈನ್ ನಲ್ಲಿ ಮಾಡೋದು ಹೇಗೆ?

*ಮೊದಲಿಗೆ ನಿಮ್ಮ ಬ್ಯಾಂಕ್ ನ (Bank) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

*ಹೋಮ್ ಪೇಜ್ ನಲ್ಲಿ ಲಾಗಿನ್ ಆಗಿ, Kyc ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.

*ಇಲ್ಲಿ ನಿಮ್ಮ ಪರ್ಸನಲ್ ಡೀಟೇಲ್ಸ್, ಅಂದರೆ ಹೆಸರು ಅಡ್ರೆಸ್, ಡೇಟ್ ಆಫ್ ಬರ್ತ್, ಇದೆಲ್ಲವನ್ನು ಕೇಳಲಾಗುತ್ತದೆ. ಅದನ್ನೆಲ್ಲ ಭರ್ತಿ ಮಾಡಿ.

*ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಇನ್ನು ಕೆಲವು ಡಾಕ್ಯುಮೆಂಟ್ಸ್ ಗಳನ್ನು ಕೇಳಲಿದ್ದು, ಅವೆಲ್ಲವನ್ನೂ ಅಪ್ಲೋಡ್ ಮಾಡಿ.

*ಬಳಿಕ Submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.

*ಇದಿಷ್ಟು ಕೆಲಸ ಮಾಡಿದ ನಂತರ ನಿಮ್ಮ ಫೋನ್ ಗೆ ಮೆಸೇಜ್ ಅಥವಾ ಮೇಲ್ ಬರುತ್ತದೆ..

ರೇಷನ್ ಕಾರ್ಡ್‌ನಲ್ಲಿ ಮಕ್ಕಳ ಹೆಸರನ್ನು ಸೇರಿಸಿಕೊಳ್ಳಿ! ಸುಲಭ ವಿಧಾನಕ್ಕೆ ಡೈರೆಕ್ಟ್ ಲಿಂಕ್ ಇಲ್ಲಿದೆ

Good news for ration card Holders, deadline extension till September

Our Whatsapp Channel is Live Now 👇

Whatsapp Channel

Related Stories