ರಾಜ್ಯ ಸರ್ಕಾರ ಜನರ ಹಸಿವನ್ನು ನೀಗಿಸುವ ಸಲುವಾಗಿ ಜಾರಿಗೆ ತಂದ ಯೋಜನೆ ಅನ್ನಭಾಗ್ಯ ಯೋಜನೆ (Annabhagya Scheme) ಆಗಿದೆ. ಗ್ಯಾರೆಂಟಿ ಯೋಜನೆಗಳ ಪೈಕಿ ಇದು ಪ್ರಮುಖ ಯೋಜನೆ ಆಗಿದ್ದು, ಈ ಒಂದು ಯೋಜನೆಯ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು, ಆದರೆ ಇದನ್ನು ಉಳಿಸಿಕೊಳ್ಳಲು ಸಾಧ್ಯ ಆಗಲಿಲ್ಲ..

ಪ್ರತಿಯೊಬ್ಬರಿಗು 10 ಕೆಜಿ ಅಕ್ಕಿ ವಿತರಿಸಲು ಸಾಧ್ಯವಾಗಲಿಲ್ಲ, ಅಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿ ತಿಂಗಳು ಅಕ್ಕಿ ಒದಗಿಸಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿ ವಿತರಣೆ ಮಾಡಿ, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ ತಿಂಗಳಿಗೆ ಒಬ್ಬ ವ್ಯಕ್ತಿಗೆ 170 ರೂಪಾಯಿಗಳನ್ನು ನೀಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿತು.

If Annabhagya Yojana money is not Came from 3 months then do this

ಉಚಿತ ಮನೆ ಯೋಜನೆ, ಪ್ರತಿಯೊಬ್ಬರಿಗೂ ಸ್ವಂತ ಸೂರು! ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂಪಾಯಿ

ಈ ಹಣವನ್ನು ಮನೆಯ ಮುಖ್ಯ ಸದಸ್ಯರ ಬ್ಯಾಂಕ್ ಖಾತೆಗೆ (Bank Account) ತಲುಪಿಸುವ ಹೊಣೆಯನ್ನು ಹೊತ್ತ ಸರ್ಕಾರ, ಪ್ರತಿ ತಿಂಗಳು ಹಣ ನೀಡುತ್ತಾ ಬಂದಿದೆ..

ಈವರೆಗೂ ಅನ್ನಭಾಗ್ಯ ಯೋಜನೆಯ 10 ಕಂತುಗಳ ಹಣ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ. ಆದರೆ ಕೆಲವರಿಗೆ ಇನ್ನು ಕೂಡ ಮೂರು ಕಂತುಗಳ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಿಲ್ಲ. ಅಂಥವರಿಗೆ ಈ ಕೆಲವು ಕೆಲಸಗಳನ್ನು ಮಾಡಿಸಬೇಕು. ಆಗ ಪೆಂಡಿಂಗ್ ಇರುವ ಅನ್ನಭಾಗ್ಯ ಯೋಜನೆಯ ಹಣ ಅವರ ಬ್ಯಾಂಕ್ ಖಾತೆಗೆ ಬರಲಿದ್ದು, ಆ ಕೆಲಸಗಳು ಏನೇನು ಎಂದು ತಿಳಿಯೋಣ..

Annabhagya Schemeಈ ಕಾರಣಕ್ಕೆ ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ:

*ಒಂದು ವೇಳೆ ನೀವು ಆಧಾರ್ ಕಾರ್ಡ್ ಗೆ NCPI ಮ್ಯಾಪಿಂಗ್ ಮಾಡಿಸಿಲ್ಲ ಎಂದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.

*ನಿಮ್ಮ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ ಗೆ ನಿಮ್ಮ ಆಕ್ಟಿವ್ ಆಗಿರುವ ಬ್ಯಾಂಕ್ ಅಕೌಂಟ್ ಮತ್ತು ಆಕ್ಟಿವ್ ಆಗಿರುವ ಫೋನ್ ನಂಬರ್ ಲಿಂಕ್ ಮಾಡದೇ ಇದ್ದರೆ, ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ.

*ರೇಷನ್ ಕಾರ್ಡ್ ನಲ್ಲಿ ಯಾರೆಲ್ಲಾ ಸದಸ್ಯರ ಹೆಸರು ಇದೆಯೋ , ಅವರೆಲ್ಲರ ekyc ಆಗಿರಬೇಕು.

ರೇಷನ್ ಕಾರ್ಡ್‌ನಲ್ಲಿ ಮಕ್ಕಳ ಹೆಸರನ್ನು ಸೇರಿಸಿಕೊಳ್ಳಿ! ಸುಲಭ ವಿಧಾನಕ್ಕೆ ಡೈರೆಕ್ಟ್ ಲಿಂಕ್ ಇಲ್ಲಿದೆ

ಮೇಲೆ ತಿಳಿಸಿರುವ ಮೂರು ಪ್ರಮುಖ ಕೆಲಸಗಳು ಆಗಿಲ್ಲ ಎಂದರೆ, ಅಂಥವರಿಗೆ ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ. ಈ ಮೂರೂ ಕೆಲಸಗಳನ್ನು ಮಾಡಿಸಿಕೊಂಡರೆ, ಬಹಳ ಬೇಗ ಪೆಂಡಿಂಗ್ ಇರುವ 3 ಕಂತುಗಳ ಹಣ ನಿಮ್ಮ ಖಾತೆಗೆ ಬರುತ್ತದೆ.

ಹಾಗಾಗಿ ಈ ಕೆಲಸಗಳನ್ನು ಮಾಡಿಸಿಕೊಳ್ಳಿ. ನಿಮ್ಮ ಪಡಿತರ ಕೇಂದ್ರಕ್ಕೆ ಭೇಟಿ ನೀಡಿ, ekyc ಮಾಡಿಸಿಕೊಳ್ಳಿ. ಇದಿಷ್ಟು ಕೆಲಸ ಆದರೆ ಹಣ ಬರಲು ಯಾವುದೇ ಸಮಸ್ಯೆ ಇರುವುದಿಲ್ಲ.

If Annabhagya Yojana money is not Came from 3 months then do this