ರೇಷನ್ ಕಾರ್ಡ್‌ನಲ್ಲಿ ಮಕ್ಕಳ ಹೆಸರನ್ನು ಸೇರಿಸಿಕೊಳ್ಳಿ! ಸುಲಭ ವಿಧಾನಕ್ಕೆ ಡೈರೆಕ್ಟ್ ಲಿಂಕ್ ಇಲ್ಲಿದೆ

ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲಿ ಪಡಿತರ ಚೀಟಿಗೆ ಹೊಸದಾಗಿ ಹೆಸರನ್ನು ಸೇರಿಸು ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ.

Bengaluru, Karnataka, India
Edited By: Satish Raj Goravigere

ದೇಶದಲ್ಲಿ ಬಡ ವರ್ಗದ ಕುಟುಂಬದಲ್ಲಿ ಜನಿಸಿ, ಆರ್ಥಿಕವಾಗಿ ಕಷ್ಟಪಡುತ್ತಿರುವವರಿಗೆ ಸರ್ಕಾರದಿಂದ ಸಹಾಯ ಆಗಲಿ ಎನ್ನುವ ಕಾರಣಕ್ಕೆ ಸರ್ಕಾರ ರೇಷನ್ ಕಾರ್ಡ್ (Ration Card) ನೀಡುವ ಪ್ರಕ್ರಿಯೆಯನ್ನು ನಡೆಸಿಕೊಂಡು ಬಂದಿದೆ.

ಜನರು ರೇಷನ್ ಕಾರ್ಡ್ ಪಡೆದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಒಂದು ಕುಟುಂಬದ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆದರೆ ಸಾಕಷ್ಟು ಜನರು ಸುಳ್ಳು ಮಾಹಿತಿಗಳನ್ನು ನೀಡಿ, ರೇಷನ್ ಕಾರ್ಡ್ ಪಡೆಯುವಂಥ ಘಟನೆಗಳು ಕೂಡ ನಡೆದಿದೆ..

Include children's names in the ration card, Here is the direct link for easy method

ಬಡತನದ ಆಧಾರದ ಮೇಲೆ ರೇಷನ್ ಕಾರ್ಡ್

ನಮಗೆಲ್ಲ ಗೊತ್ತಿರುವ ಹಾಗೆ ರೇಷನ್ ಕಾರ್ಡ್ ಹಂಚಿಕೆ ಮಾಡುವುದು ಒಂದು ಕುಟುಂಬ ಯಾವ ಸ್ಥಿತಿಯಲ್ಲಿದೆ? ಅವರ ಆದಾಯ ಎಷ್ಟಿದೆ ಎನ್ನುವುದರ ಮೇಲೆ. ತೀರಾ ಬಡತನದಲ್ಲಿದ್ದು, ಬಡತನದ ರೇಖೆಗಿಂತ ಕಡಿಮೆ ಇರುವ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಸರ್ಕಾರವು ಅಂತ್ಯೋದಯ ಕಾರ್ಡ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ (BPL Card) ನೀಡುತ್ತದೆ. ಆರ್ಥಿಕವಾಗಿ ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ಕಾರ್ಡ್ ನೀಡುತ್ತದೆ. ಈ ರೀತಿಯಾಗಿ ರೇಷನ್ ಕಾರ್ಡ್ ಹಂಚಿಕೆ ಮಾಡಲಾಗುತ್ತದೆ.

ಎಕರೆಗಟ್ಟಲೆ ಆಸ್ತಿ, ಕೃಷಿ ಜಮೀನು ಇದ್ದವರಿಗೆ ಬಂತು ಹೊಸ ರೂಲ್ಸ್! ಎಲ್ಲಾ ರೈತರಿಗೆ ಬಿಗ್ ಅಪ್ಡೇಟ್

ರೇಷನ್ ಕಾರ್ಡ್ ಗೆ ಮಕ್ಕಳ ಹೆಸರು ಸೇರ್ಪಡೆ:

ಒಂದು ಕುಟುಂಬದಲ್ಲಿ ರೇಷನ್ ಕಾರ್ಡ್ ಇದ್ದರೆ ಸರ್ಕಾರದಿಂದ ಸಿಗುವ ಎಲ್ಲಾ ಉಚಿತ ಸೌಲಭ್ಯಗಳನ್ನು ಅವರು ಪಡೆದುಕೊಳ್ಳಬಹುದು. ಈ ಒಂದು ರೇಷನ್ ಕಾರ್ಡ್ ನಲ್ಲಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರು ಮತ್ತು ಅವರ ಬಗ್ಗೆ ಮಾಹಿತಿ ಇರಬೇಕು.

ಮನೆಯಲ್ಲಿ ಮಗು ಜನಿಸಿದರೆ, ಮಗುವಿನ ಹೆಸರನ್ನು ಕೂಡ ರೇಷನ್ ಕಾರ್ಡ್ ಗೆ ಸೇರಿಸಬೇಕು. ಈ ಕೆಲಸಕ್ಕಾಗಿ ನೀವು ಕಛೇರಿಗಳಿಗೆ ಅಲೆಯುವ ಅವಶ್ಯಕತೆ ಇಲ್ಲ, ಸುಲಭವಾಗಿ ಮನೆಯಿಂದಲೇ ನಿಮ್ಮ ಮಗುವಿನ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬಹುದು.

Ration Cardಈ ಪ್ರಕ್ರಿಯೆ ಅನುಸರಿಸಿ:

ನೀವು ನಿಮ್ಮ ಮಕ್ಕಳ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬೇಕು ಎಂದು ಬಯಸುತ್ತಿದ್ದರೆ, ಅದನ್ನು ಸುಲಭವಾಗಿ ಮನೆಯಲ್ಲಿ ಮಾಡುವ ವಿಧಾನ ಹೇಗೆ ಎಂದು ತಿಳಿಯೋಣ..

ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲಿ ಪಡಿತರ ಚೀಟಿಗೆ ಹೊಸದಾಗಿ ಹೆಸರನ್ನು ಸೇರಿಸು ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ.

ಇಲ್ಲಿ ಹೊಸ ಸದಸ್ಯರ ವಿವರಗಳನ್ನು ಕೇಳುತ್ತದೆ. ಅವೆಲ್ಲವನ್ನೂ ಸರಿಯಾಗಿ ಭರ್ತಿ ಮಾಡಿ. ಬಳಿಕ ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಇದಿಷ್ಟು ಕೆಲಸ ಮಾಡುವ ಮೂಲಕ ಮನೆಯಿಂದಲೇ ಹೊಸ ಸದಸ್ಯರ ಹೆಸರನ್ನು ಸೇರಿಸಬಹುದು.

ಈ 12 ಜಿಲ್ಲೆಗಳಲ್ಲಿ ಇವತ್ತೇ ಬಿಡುಗಡೆ ಆಗಲಿದೆ ಗೃಹಲಕ್ಷ್ಮಿ ಯೋಜನೆ ಹಣ! ಮಹಿಳೆಯರಿಗೆ ಗುಡ್ ನ್ಯೂಸ್

ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ:

ಹಲವು ಜನರು ರೇಷನ್ ಕಾರ್ಡ್ ಇಲ್ಲದೇ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಆಗುತ್ತಿಲ್ಲ. ಅಂಥವರು ಹೊಸದಾಗಿ ರೇಷನ್ ಕಾರ್ಡ್ ಪಡೆಯುವುದಕ್ಕೆ ಕಾಯುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಹೊಸ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗುತ್ತದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಸಿಕ್ಕಿದೆ. ಹಾಗೆಯೇ ಸುಳ್ಳು ಮಾಹಿತಿ ನೀಡಿ, ಮೋಸ ಮಾಡಿ ರೇಷನ್ ಕಾರ್ಡ್ ಪಡೆದಿದ್ದರೆ, ಅಂಥವರ ಕಾರ್ಡ್ ಅನ್ನು ಪತ್ತೆ ಹಚ್ಚಿ, ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ : https://ahara.kar.nic.in/Home/EServices

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸೋಕೆ ಹಾಗೂ ತಿದ್ದುಪಡಿ ಕುರಿತಂತೆ ಸರ್ಕಾರದಿಂದ ಬಿಗ್ ಅಪ್ಡೇಟ್!

Include children’s names in the ration card, Here is the direct link for easy method