ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸೋಕೆ ಹಾಗೂ ತಿದ್ದುಪಡಿ ಕುರಿತಂತೆ ಸರ್ಕಾರದಿಂದ ಬಿಗ್ ಅಪ್ಡೇಟ್!

ಹೆಚ್ಚಿನ ಜನರು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಕಾಯುತ್ತಿರುವಾಗ, ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡಿಸಲು ಅವಕಾಶ ನೀಡಿದೆ ಎನ್ನುವ ಸುಳ್ಳು ಸುದ್ದಿ ವೈರಲ್ ಆಗಿದೆ..

Bengaluru, Karnataka, India
Edited By: Satish Raj Goravigere

ಪ್ರಸ್ತುತ ನಮ್ಮ ರಾಜ್ಯದ ಜನತೆಗೆ ಪ್ರಮುಖವಾಗಿ ಬೇಕಾಗಿರುವ ಬಿಪಿಎಲ್ ರೇಷನ್ ಕಾರ್ಡ್ (BPL Ration Card). ಈ ಒಂದು ಕಾರ್ಡ್ ಇಲ್ಲದೇ ಹೋದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರೆಂಟಿ ಯೋಜನೆಗಳು, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಮತ್ತು ಶಕ್ತಿ ಯೋಜನೆ ಈ ಯಾವ ಯೋಜನೆಗಳ ಸೌಲಭ್ಯ ಕೂಡ ಜನರಿಗೆ ಸಿಗುವುದಿಲ್ಲ.

ಹಾಗಾಗಿ ರೇಷನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ. ಹೆಚ್ಚಿನ ಜನರು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಕಾಯುತ್ತಿರುವಾಗ, ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡಿಸಲು ಅವಕಾಶ ನೀಡಿದೆ ಎನ್ನುವ ಸುಳ್ಳು ಸುದ್ದಿ ವೈರಲ್ ಆಗಿದೆ..

Big update from the government regarding new ration card application and Correction

ಹೌದು, ಬಿಪಿಎಲ್ ಕಾರ್ಡ್ ಇರುವವರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡರ ಕಡೆಯಿಂದಲೂ ಕೂಡ ಬಹಳಷ್ಟು ಪ್ರಯೋಜನಗಳು ಸಿಗುತ್ತದೆ. ಅನೇಕ ಯೋಜನೆಗಳು, ಆರೋಗ್ಯ ಸೌಲಭ್ಯ, ಆಯುಷ್ಮನ್ ಕಾರ್ಡ್ ಮಾಡಿಸಲು ಹೀಗೆ ಸಾಕಷ್ಟು ಕೆಲಸಗಳಿಗೆ, ಸೌಕರ್ಯಗಳನ್ನು ಪಡೆಯಲು ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.

ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಬಂಪರ್ ಅವಕಾಶ ಮಿಸ್ ಮಾಡ್ಕೋಬೇಡಿ! ಅರ್ಜಿ ಸಲ್ಲಿಸಿ

ಆದರೆ ಹಲವರು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕಿದೆ ಇನ್ನು ಕೆಲವರು ಈ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಿದೆ.

ಆದರೆ ನಮ್ಮ ರಾಜ್ಯದಲ್ಲಿ ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರ ಸಂಖ್ಯೆಜಾಸ್ತಿ ಇದೆ, ಕೇಂದ್ರ ಸರ್ಕಾರ ನೀಡಿರುವ ಲಿಮಿಟ್ ಗಿಂತ ಹೆಚ್ಚಿನ ಜನರ ಬಳಿ ರೇಷನ್ ಕಾರ್ಡ್ ಇರುವ ಕಾರಣ, ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಮತ್ತು ತಿದ್ದುಪಡಿ ಮಾಡಿಸುವ ಅವಕಾಶವನ್ನು ಸರ್ಕಾರ ನೀಡಿರಲಿಲ್ಲ.

ಕಳೆದ ವರ್ಷ ಚುನಾವಣೆ ನಡೆಯುವುದಕ್ಕಿಂತ ಮೊದಲೇ ಸುಮಾರು 3 ಲಕ್ಷಕ್ಕಿಂತ ಹೆಚ್ಚಿನ ಜನರು ಹೊಸ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗಳೇ ಇನ್ನು ಪೂರ್ತಿಯಾಗಿ ಪರಿಶೀಲನೆ ಆಗಿಲ್ಲ.

Ration Cardಹೌದು, ಸುಮಾರು ಜನರು ರೇಶನ್ ಕಾರ್ಡ್ ಇಲ್ಲದೇ ಕಷ್ಟಪಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಕಾರಣ ಪೆಂಡಿಂಗ್ ಇರುವ ಅರ್ಜಿಗಳನ್ನು ಮೊದಲು ಪರಿಶೀಲಿಸಿ, ಅರ್ಹತೆ ಹೊಂದಿರುವವರಿಗೆ ರೇಷನ್ ಕಾರ್ಡ್ ವಿತರಣೆ ಮಾಡುವ ಪ್ಲಾನ್ ಹೊಂದಿದೆ.

ಇದರ ನಡುವೆ ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಸರ್ಕಾರಕ್ಕೆ ಪೀಕಲಾಟ ತಂದೊಡ್ಡಿದೆ..

ಕಡಿಮೆ ಕೃಷಿ ಭೂಮಿ ಇರೋ ರೈತರಿಗೆ ಸಿಗುತ್ತೆ ₹10,000 ರೂಪಾಯಿ! 90% ಜನರಿಗೆ ಈ ಯೋಜನೆ ಬಗ್ಗೆ ಗೊತ್ತಿಲ್ಲ

ಹೌದು, ಜುಲೈ 2 ಮತ್ತು 3ರಂದು ಗ್ರಾಮ ಒನ್ ಸೇವಾ ಕಚೇರಿಯಲ್ಲಿ ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿ, ಜನರು ಗ್ರಾಮ ಒನ್ ಕಚೇರಿಗೆ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಭೇಟಿ ನೀಡಿ, ಆ ಕೇಂದ್ರಗಳಿಗೆ ಕರೆಮಾಡಿ, ಇದೆಲ್ಲವನ್ನು ಸರಿಪಡಿಸಲು ಅಲ್ಲಿನ ಕೆಲಸಗಾರರಿಗೆ ತೊಂದರೆ ಆಗಿದೆ.

ಗ್ರಾಮ ಒನ್ ಕಚೇರಿಗೆ ಲಗ್ಗೆ ಇಟ್ಟ ಜನರನ್ನು ನಿಯಂತ್ರಿಸಲು ಕಷ್ಟಪಡಬೇಕಿತ್ತು. ಇಂಥ ಸುಳ್ಳು ಸುದ್ದಿಗಳು ಹರಡಿದ್ದಕ್ಕೆ ಜನರು ಮತ್ತು ಕೆಲಸ ಮಾಡುವವರು ಎಲ್ಲರೂ ಕೂಡ ಕಷ್ಟ ಪಡಬೇಕಾದ ಕಾರಣ ಸುಳ್ಳು ಸುದ್ದಿಗಳನ್ನು ಹಬ್ಬಿಸಿರುವವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸಲಾಗಿದೆ.

Big update from the government regarding new ration card application and Correction