ಕಡಿಮೆ ಕೃಷಿ ಭೂಮಿ ಇರೋ ರೈತರಿಗೆ ಸಿಗುತ್ತೆ ₹10,000 ರೂಪಾಯಿ! 90% ಜನರಿಗೆ ಈ ಯೋಜನೆ ಬಗ್ಗೆ ಗೊತ್ತಿಲ್ಲ
ಈ ಒಂದು ಯೋಜನೆಯ ಮೂಲಕ ರೈತರಿಗೆ 10,000 ಸಿಗಲಿದ್ದು, ಇದನ್ನು ಅತೀ ಕಡಿಮೆ ಸ್ವಂತ ಭೂಮಿ (Own Agriculture Land) ಹೊಂದಿರುವ ರೈತರಿಗಾಗಿ ಜಾರಿಗೆ ತರಲಾಗಿದೆ.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಕೂಡ ರೈತರಿಗೆ ಅನುಕೂಲ ಆಗಲಿ ಎಂದು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ರೈತರಿಗೆ ಆರ್ಥಿಕವಾಗಿ ಸಹಾಯ ಆಗಲಿ, ಅವರ ಕಷ್ಟಗಳು ಕಳೆಯಲಿ ಎನ್ನುವುದು ಸರ್ಕಾರದ ಉದ್ದೇಶ ಆಗಿದ್ದು, ಇದೀಗ ಸರ್ಕಾರ ರೈತರಿಗೆ ಜಾರಿಗೆ ತಂದಿರುವ ಯೋಜನೆ ಇಂದ, ಅವರಿಗೆ 10,000 ರೂಪಾಯಿ ಸಿಗಲಿದೆ. ಹಾಗಿದ್ದಲ್ಲಿ ಆ ಯೋಜನೆ ಯಾವುದು? ರೈತರು ಅದರ ಲಾಭ ಪಡೆಯುವುದು ಹೇಗೆ? ತಿಳಿಯೋಣ…
ಸರ್ಕಾರವು ರೈತರಿಗಾಗಿ ಜಾರಿಗೆ ತಂದಿರುವ ಈ ಯೋಜನೆಯ ಹೆಸರು ರೈತ ಸಿರಿ ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ರೈತರಿಗೆ 10,000 ಸಿಗಲಿದ್ದು, ಇದನ್ನು ಅತೀ ಕಡಿಮೆ ಸ್ವಂತ ಭೂಮಿ (Own Agriculture Land) ಹೊಂದಿರುವ ರೈತರಿಗಾಗಿ ಜಾರಿಗೆ ತರಲಾಗಿದೆ.
ಅವರೆಲ್ಲರು ಸಹ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದ ಈ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂದು ಪಡೆದುಕೊಳ್ಳೋಣ..
ಅನ್ನಭಾಗ್ಯ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ! ಡಿಬಿಟಿ ಸ್ಟೇಟಸ್ ಚೆಕ್ ಮಾಡಿ
ರೈತ ಸಿರಿ ಯೋಜನೆಯ ಉದ್ದೇಶ
ಸರ್ಕಾರ ರೈತ ಸಿರಿ ಯೋಜನೆಯನ್ನು ಶುರು ಮಾಡಲು ಮುಖ್ಯ ಉದ್ದೇಶಗಳಿವೆ. ರೈತರು ಕೃಷಿ ಕೆಲಸಗಳಿಗೆ ಕಷ್ಟಪಡುತ್ತಾರೆ ಜೊತೆಗೆ ಮನೆಯನ್ನು ನಡೆಸಿಕೊಂಡು ಹೋಗುವುದಕ್ಕೆ, ಮನೆಯವರನ್ನು ನೋಡಿಕೊಳ್ಳುವುದಕ್ಕೆ ಸಹ ಕಷ್ಟಪಡುತ್ತಾರೆ.
ಆ ಥರದ ಪರಿಸ್ಥಿತಿಯಲ್ಲಿ ಇರುವವರಿಗೆ ಸಹಾಯ ಆಗಲಿ, ಕಡಿಮೆ ಭೂಮಿ (Agriculture Land) ಹೊಂದಿದ್ದು ಉತ್ತಮ ಆದಾಯ ಗಳಿಸಲು ಸಾಧ್ಯ ಆಗದೇ ಇರುವ ರೈತರಿಗೆ ಅನುಕೂಲ ಆಗಲಿ ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಾಗಿದ್ದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ..
ರೈತರಿಗೆ ಗುಡ್ ನ್ಯೂಸ್, ವಿವಿಧ ಯೋಜನೆ ಅಡಿಯಲ್ಲಿ ಸಿಗುತ್ತಿದೆ ರೈತರಿಗೆ ಸಬ್ಸಿಡಿ ಸಾಲ! ಅರ್ಜಿ ಸಲ್ಲಿಸಿ
ಬೇಕಾಗಿರುವ ದಾಖಲೆಗಳು:
*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಅಡ್ರೆಸ್ ಪ್ರೂಫ್
*ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಫೋನ್ ನಂಬರ್
ಈ ಎಲ್ಲಾ ದಾಖಲೆಗಳು ಇದ್ದರೆ ರೈತ ಸಿರಿ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು.
ಅನರ್ಹ ಮಹಿಳೆಯರ ಪಟ್ಟಿ ಪರಿಶೀಲನೆ! ಇನ್ಮುಂದೆ ಇಂತಹ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ರೈತ ಸಿರಿ ಯೋಜನೆಗೆ ನೀವು ಆನ್ಲೈನ್ ಮತ್ತು ಆಫ್ಲೈನ್ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳ ಜೊತೆಗೆ ನಿಮಗೆ ಹತ್ತಿರ ಇರುವ CSC ಕಚೇರಿಗೆ ಹೋಗಿ, ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ, ಸರ್ಕಾರದ https://raitamitra.karnataka.gov.in/info-2/Raita+Siri/kn ಈ ಅಧಿಕೃತ ಲಿಂಕ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Farmers with less agricultural land will get 10,000 Rupees, know about this scheme