ರಾಜ್ಯ ಸರ್ಕಾರ ಜನರಿಗಾಗಿ ತಂದಿರುವ ಪ್ರಮುಖ ಯೋಜನೆಗಳಲ್ಲಿ ಒಂದು ಅನ್ನಭಾಗ್ಯ ಯೋಜನೆ (Annabhagya Yonana). ಈ ಯೋಜನೆಯನ್ನು, ಜನರು ಹಸಿದುಕೊಂಡು ಇರಬಾರದು, ಎಲ್ಲರೂ ಸಮೃದ್ಧಿಯಾಗಿ ಊಟ ಮಾಡಬೇಕು ಎನ್ನುವ ಕಾರಣಕ್ಕೆ ಜಾರಿಗೆ ತಂದ ಯೋಜನೆ ಆಗಿದೆ.

ಅನ್ನಭಾಗ್ಯ ಯೋಜನೆಯ 11 ಮತ್ತು 12ನೇ ಕಂತಿನ ಹಣ ಇದೀಗ ಬಿಡುಗಡೆ ಆಗಿದೆ ಎನ್ನುವ ಮಾಹಿತಿ ಸಿಕ್ಕಿದ್ದು, ಡಿಬಿಟಿ ಸ್ಟೇಟಸ್ ಅನ್ನು ಸುಲಭವಾಗಿ ಮನೆಯಿಂದಲೇ ಚೆಕ್ ಮಾಡುವುದು ಹೇಗೆ ಎಂದು ತಿಳಿಯೋಣ…

If Annabhagya Yojana money is not Came from 3 months then do this

ಅನ್ನಭಾಗ್ಯ ಯೋಜನೆಯನ್ನು ಕಳೆದ ವರ್ಷವೇ ಜಾರಿಗೆ ತರಲಾಯಿತು. ಈ ಯೋಜನೆಯ ಮೂಲಕ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿತ್ತು, ಆದರೆ ಪ್ರತಿ ವ್ಯಕ್ತಿಗೆ 10 ಕೆಜಿ ಒದಗಿಸಲು ಸಾಧ್ಯವಾಗದ ಕಾರಣ, 5ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿಯ ಬದಲಾಗಿ, ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ ಒಬ್ಬ ವ್ಯಕ್ತಿಗೆ 170 ರೂಪಾಯಿಗಳನ್ನು, ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ (Bank Account) ಮಾಡುವುದಾಗಿ ತಿಳಿಸಲಾಯಿತು.

ರೈತರಿಗೆ ಗುಡ್ ನ್ಯೂಸ್, ವಿವಿಧ ಯೋಜನೆ ಅಡಿಯಲ್ಲಿ ಸಿಗುತ್ತಿದೆ ರೈತರಿಗೆ ಸಬ್ಸಿಡಿ ಸಾಲ! ಅರ್ಜಿ ಸಲ್ಲಿಸಿ

ಈ ಹಣ ಕಳೆದ 10 ತಿಂಗಳಿನಿಂದ ಕೂಡ ಜನರ ಬ್ಯಾಂಕ್ ಖಾತೆಗೆ ಜಮೆ ಆಗುತ್ತಲೇ ಬಂದಿದೆ. ಆದರೆ ಕಳೆದ ಎರಡು ಮೂರು ತಿಂಗಳುಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಜನರ ಖಾತೆಗೆ ಜಮೆ ಆಗಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಎಲೆಕ್ಷನ್, ಜೂನ್ ನಲ್ಲಿ ಫಲಿತಾಂಶ ಇದೆಲ್ಲವೂ ಇದ್ದ ಕಾರಣ ಎಲ್ಲರ ಬ್ಯಾಂಕ್ ಖಾತೆಗೆ ಹಣ ಇನ್ನು ಜಮೆ ಆಗಿರಲಿಲ್ಲ.

ಆದರೆ ಇದೀಗ 11 ಮತ್ತು 12ನೇ ಕಂತಿನ ಹಣ ಜಮೆ ಆಗಿದೆ ಎಂದು ಮಾಹಿತಿ ಸಿಕ್ಕಿದ್ದು, ಇದರ ಡಿಬಿಟಿ ಸ್ಟೇಟಸ್ ಚೆಕ್ (Check DBT Status) ಮಾಡುವುದು ಹೇಗೆ ಎಂದು ತಿಳಿಯೋಣ..

Annabhagya Schemeಅನ್ನಭಾಗ್ಯ ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ವಿಧಾನ:

*ಅನ್ನಭಾಗ್ಯ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗಿದ್ದು, ಇದನ್ನು ತಿಳಿದುಕೊಳ್ಳಲು ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ahara.kar.nic.in/lpg/ ಈ ಲಿಂಕ್ ಗೆ ಭೇಟಿ ನೀಡಿ.

*ವೆಬ್ಸೈಟ್ ಓಪನ್ ಆದ ನಂತರ ಇದರಲ್ಲಿ ನಿಮ್ಮ ಜಿಲ್ಲೆಯ ಹೆಸರು ಏನು ಎನ್ನುವುದನ್ನ ಸೆಲೆಕ್ಟ್ ಮಾಡಿ, ಬಳಿಕ ಅಲ್ಲಿಯೇ ಕೆಳಗಡೆ ನೇರ ನಗದು ವರ್ಗಾವಣೆ ಅಂದರೆ ಡಿಬಿಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ, ಅದನ್ನು ಕ್ಲಿಕ್ ಮಾಡಿ.

ಅನರ್ಹ ಮಹಿಳೆಯರ ಪಟ್ಟಿ ಪರಿಶೀಲನೆ! ಇನ್ಮುಂದೆ ಇಂತಹ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಯೋಜನೆ ಹಣ

*ಈಗ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ, ಇದರಲ್ಲಿ ವರ್ಷ 2024 ಎಂದು ಆಯ್ಕೆ ಮಾಡಿ, ಮತ್ತು ತಿಂಗಳನ್ನು ಮೇ ತಿಂಗಳು ಎಂದು ಆಯ್ಕೆ ಮಾಡಿ. ನಂತರ ಕ್ಯಾಪ್ಚ ಕೋಡ್ ಅನ್ನು ನಮೂದಿಸಿ, Go ಎನ್ನುವ ಆಪ್ಶನ್ ಮೇಲೆ ಕ್ಲಿಕ್ ಮಾಡಿ.

*ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಕರೆಕ್ಟ್ ಆಗಿ ಎಂಟರ್ ಮಾಡಿ.
*ಇಲ್ಲಿ ನಿಮ್ಮ ರೇಶನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಹೆಸರು ಬರಲಿದ್ದು, ಅಲ್ಲಿ ಯಾರಿಗೆ ಎಷ್ಟು ಹಣ ಬಂದಿದೆ ಎನ್ನುವುದು ಕೂಡ ಗೊತ್ತಾಗುತ್ತದೆ.

11th and 12th installment of Annabhagya Yojana released, Check DBT status