ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಬಂಪರ್ ಅವಕಾಶ ಮಿಸ್ ಮಾಡ್ಕೋಬೇಡಿ! ಅರ್ಜಿ ಸಲ್ಲಿಸಿ

ಸರಿಯಾದ ಸಮಯಕ್ಕೆ ಮಾಹಿತಿ ಪಡೆಯುವುದು, ಬ್ಯಾಂಕಿಂಗ್ (Banking) ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು, ಇದೆಲ್ಲದಕ್ಕೂ ಕೂಡ ಕರ್ನಾಟಕ ಒನ್ ಪೋರ್ಟಲ್ (Karnataka One Portal) ಸಹಾಯ ಮಾಡುತ್ತದೆ.

Bengaluru, Karnataka, India
Edited By: Satish Raj Goravigere

ಜನರಿಗಾಗಿ ಸರ್ಕಾರ ಹಲವು ರೀತಿಯ ವಿಶೇಷ ಯೋಜನೆಗಳನ್ನು, ಸೌಲಭ್ಯಗಳನ್ನು ಜಾರಿಗೆ ತರುತ್ತಲಿದೆ. ಅದೆಲ್ಲದರ ಬಗ್ಗೆ ಜನರಿಗೆ ಪೂರ್ತಿಯಾಗಿ ಗೊತ್ತಿರುವುದಿಲ್ಲ. ಹಾಗಾಗಿ ಹಳ್ಳಿಗಳ ವ್ಯಾಪ್ತಿಗೆ, ಪುರಸಭೆ, ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಒನ್ ಕೇಂದ್ರಗಳನ್ನು (Karnataka One Kendra) ತೆರೆಯಲಾಗುತ್ತದೆ.

ಈ ಕೇಂದ್ರಗಳಲ್ಲಿ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಅರ್ಜಿ ಸಲ್ಲಿಸಲು ಸಹಾಯ ಮಾಡಲಾಗುತ್ತದೆ. ಈ ಕೇಂದ್ರವನ್ನು ತೆರೆಯಲು ಈಗ ಸರ್ಕಾರ ಅರ್ಜಿ ಆಹ್ವಾನಿಸಿದ್ದು, ನೀವು ತೆರೆಯುವುದು ಹೇಗೆ ಎಂದು ತಿಳಿಯೋಣ.

Apply to open Karnataka One Center, don't miss the opportunity

16 ಜಿಲ್ಲೆಗಳಲ್ಲಿ ಬಿಡುಗಡೆ ಆಗಿದೆ ಗೃಹಲಕ್ಷ್ಮಿ ಪೆಂಡಿಂಗ್ ಹಣ! ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಇದ್ಯಾ ಚೆಕ್ ಮಾಡಿ

ಕರ್ನಾಟಕ ಒನ್ ಪೋರ್ಟಲ್ ಅಂದರೇನು?

ಕರ್ನಾಟಕ ಜನರು ಸರ್ಕಾರದಿಂದ ಸಿಗುವಂಥ ಯಾವುದೇ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರೆ, ಮೊದಲಿಗೆ ನೀವು ಈ ಪೋರ್ಟಲ್ ಗೆ ಭೇಟಿ ನೀಡಬೇಕು. ಈ ಪೋರ್ಟಲ್ ನ ಮೂಲಕ ಜನರು ಸರ್ಕಾರದ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು.

ಸರಿಯಾದ ಸಮಯಕ್ಕೆ ಮಾಹಿತಿ ಪಡೆಯುವುದು, ಬ್ಯಾಂಕಿಂಗ್ (Banking) ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು, ಇದೆಲ್ಲದಕ್ಕೂ ಕೂಡ ಕರ್ನಾಟಕ ಒನ್ ಪೋರ್ಟಲ್ (Karnataka One Portal) ಸಹಾಯ ಮಾಡುತ್ತದೆ. ಈ ಪೋರ್ಟಲ್ ಮೂಲಕ ಜನರಿಗೆ ಸಹಾಯ ಮಾಡಿ, ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಅವರ ಕೈಗೆ ಸಿಗುವ ಹಾಗೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

ಕರ್ನಾಟಕ ಒನ್ ಕಚೇರಿ ತೆರೆಯಲು ನಿಮ್ಮ ಬಳಿ ಈ ಕೆಲವು ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು.
*ಆಧಾರ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಶೈಕ್ಷಣಿಕ ಪ್ರಮಾನಪತ್ರಗಳು
*ಕಂಪ್ಯೂಟರ್ ಕಲಿತಿರುವ ಸರ್ಟಿಫಿಕೇಟ್

ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿ ಮಾಡಲು ಇವತ್ತೇ ಕೊನೆಯ ದಿನ! ಈಗಲೇ ಅರ್ಜಿ ಸಲ್ಲಿಸಿ

Karnataka One Seva Kendra franchiseಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಒಂದು ವೇಳೆ ನೀವು ಕೂಡ ಕರ್ನಾಟಕ ಒನ್ ಪೋರ್ಟಲ್ ಶುರು ಮಾಡಿ, ಅದರ ಮೂಲಕ ನಿಮ್ಮ ಸುತ್ತ ಮುತ್ತಲಿನ ಜನರಿಗೆ ಸಹಾಯ ಮಾಡಲು ಬಯಸಿದರೆ, ಅದಕ್ಕಾಗಿ https://www.karnatakaone.gov.in/Public ಈ ಲಿಂಕ್ ಗೆ ಭೇಟಿ ನೀಡಿ. ಇದರ ಮೂಲಕ ನೀವು ಅರ್ಜಿ ಸಲ್ಲಿಕೆ ಮಾಡಬಹುದು.

ಯಾವೆಲ್ಲಾ ಸೇವೆಗಳು ಸಿಗುತ್ತದೆ:

*ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಸೇವೆಗಳು
*ಎಲೆಕ್ಷನ್ ಗೆ ಸಂಬಂಧಿಸಿದ ಸೇವಗಳು
*ಇ ಸ್ಟ್ಯಾಂಪಿಂಗ್
*ಪಾಸ್ಪೋರ್ಟ್ ರಿಜಿಸ್ಟ್ರೇಷನ್
*ಆಹಾರಕ್ಕೆ ಸಂಬಂಧಿಸಿದ ಸೇವೆಗಳು
*ನಾಗರೀಕ ಸರಬರಾಜು ಹಾಗು ಇನ್ನಿತರ ಸೇವೆಗಳು

ಬೇಕಿರುವ ಅರ್ಹತೆಗಳು:

ಕರ್ನಾಟಕ ಒನ್ ಕೇಂದ್ರ ತೆರೆಯುವುದಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕ ರಾಜ್ಯಕ್ಕೆ ಸೇರಿದ ನಾಗರೀಕರೇ ಆಗಿರಬೇಕು. 18 ವರ್ಷ ತುಂಬಿದ ಹುಡುಗ, ಹುಡುಗಿ ಯಾರೇ ಇದ್ದರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಪದವಿ ಪೂರ್ತಿಗೊಳಿಸಿ, ಕಂಪ್ಯೂಟರ್ ಕೋರ್ಸ್ (Computer Course) ಮಾಡಿರಬೇಕು.

Apply to open Karnataka One Center, don’t miss the opportunity