ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪೈಕಿ ಕೆಲವು ಹಣ ಕೊಡುವಂಥ ಯೋಜನೆಗಳು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದರಲ್ಲೂ ರಾಜ್ಯದ ಮಹಿಳಾ ಮಣಿಯರನ್ನು ಸಪೋರ್ಟ್ ಮಾಡುವುದಕ್ಕೇ ಅವರಿಗೆ ಆರ್ಥಿಕ ಸಹಾಯ ಮಾಡುವಂಥ ಯೋಜನೆ ಇದಾಗಿದ್ದು, ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ಪ್ರತಿ ತಿಂಗಳು ₹2000 ರೂಪಾಯಿಗಳು ಅವರ ಬ್ಯಾಂಕ್ ಖಾತೆಗೆ (Bank Account) ವರ್ಗಾವಣೆ ಆಗುತ್ತಿದ್ದು, ಇದರಿಂದ ಎಲ್ಲಾ ಮಹಿಳೆಯರಿಗೆ ಅನುಕೂಲ ಆಗಿದೆ..

ಹೌದು, ಅದೆಷ್ಟೋ ಮಹಿಳೆಯರು ಬಡತನದ ರೇಖೆಯಲ್ಲಿದ್ದು, ಅಂಥವರಿಗೆ ಮನೆ ನಿಭಾಯಿಸುವುದು, ಮಕ್ಕಳನ್ನು ನೋಡಿಕೊಳ್ಳುವುದು ಆರ್ಥಿಕವಾಗಿ ಕಷ್ಟ ಆಗುತ್ತಿತ್ತು. ಅಂಥ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದು ಈ ಯೋಜನೆಯನ್ನು ಜಾರಿಗೆ ತರಲಾಯಿತು.

Gruha Lakshmi Scheme pending money released in 16 districts

ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿ ಮಾಡಲು ಇವತ್ತೇ ಕೊನೆಯ ದಿನ! ಈಗಲೇ ಅರ್ಜಿ ಸಲ್ಲಿಸಿ

1 ಕೋಟಿಗಿಂತ ಹೆಚ್ಚಿನ ಮಹಿಳೆಯರು ಈ ಯೋಜನೆಗೆ (Gruha Lakshmi Yojana) ಅರ್ಜಿ ಸಲ್ಲಿಸಿ, ಪ್ರತಿ ತಿಂಗಳು ಕೂಡ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಈ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಲೋಕ ಸಭಾ ಎಲೆಕ್ಷನ್ ಫಲಿತಾಂಶ ಬಂದ ವೇಳೆ ಹಲವು ಜನರು ಈ ಎಲ್ಲಾ ಗ್ಯಾರೆಂಟಿ ಯೋಜನೆಗಳು ನಿಂತು ಹೋಗುತ್ತದೆ ಎಂದೇ ಅಂದುಕೊಂಡಿದ್ದರು. ಆದರೆ ಖುದ್ದು ಸಿಎಂ ಸಿದ್ದರಾಮಯ್ಯ ಅವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾತನಾಡಿ, ಸರ್ಕಾರ ಅಧಿಕಾರಲ್ಲಿ ಇರುವಷ್ಟು ಸಮಯ, ಅಂದರೆ 5 ವರ್ಷಗಳ ಕಾಲ ಈ ಯೋಜನೆಯ ಸೌಲಭ್ಯಗಳು ಜನರಿಗೆ ಖಂಡಿತವಾಗಿಯು ಸಿಕ್ಕೇ ಸಿಗುತ್ತದೆ ಎಂದು ಖಚಿತಪಡಿಸಿದರು.

Gruha Lakshmi Scheme Moneyಗೃಹಲಕ್ಷ್ಮೀ ಯೋಜನೆಯ ಹಣ 10ನೇ ಕಂತಿನವರೆಗೂ ಎಲ್ಲರಿಗೂ ಸರಿಯಾಗಿಯೇ ತಲುಪಿತು. ಆದರೆ ಈಗ 11 ಮತ್ತು 12ನೇ ಕಂತಿನ ಹಣ ತಲುಪುವುದರಲ್ಲೇ ಎಲೆಕ್ಷನ್ ಇದ್ದ ಕಾರಣ ತಡವಾಯಿತು.

ಇದೀಗ ಈ ಎರಡು ಕಂತುಗಳ ಹಣ ಒಂದೇ ಸಾರಿ ಬಿಡುಗಡೆ ಆಗಿದೆ ಎಂದು ಮಾಹಿತಿ ಸಿಕ್ಕಿದ್ದು, ಮೊದಲ ಹಂತದಲ್ಲಿ 16 ಜಿಲ್ಲೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯ 11 ಮತ್ತು 12ನೇ ಕಂತಿನ ಬಿಡುಗಡೆ ಆಗಿದೆ, ನಂತರ ಇನ್ನೆಲ್ಲಾ ಜಿಲ್ಲೆಗಳಲ್ಲೂ ಬಿಡುಗಡೆ ಆಗಲಿದೆ. ಹಾಗಿದ್ದಲ್ಲಿ ಆ 16 ಜಿಲ್ಲೆಗಳು ಯಾವುವು ಎಂದು ತಿಳಿಯೋಣ..

ರೈತರಿಗೆ ಗುಡ್ ನ್ಯೂಸ್, ವಿವಿಧ ಯೋಜನೆ ಅಡಿಯಲ್ಲಿ ಸಿಗುತ್ತಿದೆ ರೈತರಿಗೆ ಸಬ್ಸಿಡಿ ಸಾಲ! ಅರ್ಜಿ ಸಲ್ಲಿಸಿ

ಈ 16 ಜಿಲ್ಲೆಗಳಲ್ಲಿ ಬಿಡುಗಡೆ ಆಗಿದೆ 11 ಮತ್ತು 11ನೇ ಕಂತಿನ ಹಣ:

ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಮೈಸೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ವಿಜಯಪುರ, ಗುಲ್ಬರ್ಗ, ತುಮಕೂರು.. ಈ 16 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ 11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗಲಿದ್ದು, ನೀವು ಡಿಬಿಟಿ ಸ್ಟೇಟಸ್ ಚೆಕ್ (Check DBT Status) ಮಾಡಿಕೊಳ್ಳಬಹುದು.

Gruha Lakshmi Scheme pending money released in 16 districts