Apply Ration Card : ರೇಷನ್ ಕಾರ್ಡ್ ಈಗ ನಮ್ಮ ಬಳಿ ಇರಲೇಬೇಕಾದ ಪ್ರಮುಖವಾದ ದಾಖಲೆ. ಸರ್ಕಾರವು ಬಡತನದ ರೇಖೆಯ ಆಧಾರದ ಮೇಲೆ ರೇಷನ್ ಕಾರ್ಡ್ ವಿತರಣೆ ಮಾಡುತ್ತದೆ. ಬಡತನದ ರೇಖೆಗಿಂತ ಕೆಳಗೆ ಬರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Card), ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆದರೆ ಹಲವರ ಬಳಿ ಈಗಲೂ ಕೂಡ ರೇಷನ್ ಕಾರ್ಡ್ ಇಲ್ಲ..
ಕೆಲವರು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕಿದೆ. ಅಂಥವರಿಗೆ ಸರ್ಕಾರದಿಂದ ಸಿಗುವ ಯಾವುದೇ ಪ್ರಯೋಜನಗಳು ಕೂಡ ಸಿಗುತ್ತಿಲ್ಲ. ರಾಜ್ಯ ಸರ್ಕಾರದಲ್ಲಿ ಜಾರಿಗೆ ಬಂದಿರುವ 5 ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ನಮ್ಮ ಬಳಿ ರೇಷನ್ ಕಾರ್ಡ್ ಇರಲೇಬೇಕು.
ಇನ್ನೊಂದು ಕಡೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಬಹಳಷ್ಟು ಜನರು ಸುಳ್ಳು ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ.
ಅಂಥವರನ್ನು ಗುರುತಿಸಿ ಅವರುಗಳ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ (Cancel Ration Card) ಮಾಡಲು ಸರ್ಕಾರ ಕೂಡ ನಿರ್ಧರಿಸಿದೆ. ಅದರ ಜೊತೆಗೆ ಸರ್ಕಾರದ ಕಡೆಯಿಂದ ಈಗ ಒಂದು ಗುಡ್ ನ್ಯೂಸ್ ಕೇಳಿಬಂದಿದೆ.
ಹಲವು ಜನರು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಿತ್ತು, ಇನ್ನಷ್ಟು ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಿತ್ತು. ಅದೆಲ್ಲದಕ್ಕೂ ಈಗ ಸರ್ಕಾರ ಅವಕಾಶ ನೀಡಿದ್ದು, ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಇಂದು ಒಂದೇ ದಿನ ಮಾತ್ರ ಸಮಯ ನೀಡಲಾಗಿದೆ.
ಹೌದು, ಹೆಸರು ತಿದ್ದುಪಡಿ, ಸದಸ್ಯರನ್ನು ಸೇರಿಸುವುದು, ಫೋನ್ ನಂಬರ್ ಬದಲಾವಣೆ ಸೇರಿದಂತೆ ಎಲ್ಲಾ ಥರದ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು. ಹಾಗೆಯೇ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಕೂಡ ಸಲ್ಲಿಸಬಹುದು. ನಿಮಗೆ ಹತ್ತಿರ ಇರುವ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹೊಸದಾಗಿ ರೇಷನ್ ಕಾರ್ಡ್ ಮಾಡಿಸಲು ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ತಿಳಿಯೋಣ..
ನಿಮ್ಮ ಜಮೀನಿನ ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ! ಇಲ್ಲಿದೆ ಬದಲಾದ ಹೊಸ ನಿಯಮ
ಅಗತ್ಯವಿರುವ ದಾಖಲೆಗಳು:
*ಮನೆಯಲ್ಲಿರುವ ಎಲ್ಲರ ಆಧಾರ್ ಕಾರ್ಡ್
*ಇನ್ಕಮ್ ಸರ್ಟಿಫಿಕೇಟ್
*ಅಡ್ರೆಸ್ ಪ್ರೂಫ್
*ಕ್ಯಾಸ್ಟ್ ಸರ್ಟಿಫಿಕೇಟ್
*ಡೇಟ್ ಆಫ್ ಬರ್ತ್
*ಆಕ್ಟಿವ್ ಇರುವ ಫೋನ್ ನಂಬರ್
ಇದಿಷ್ಟು ದಾಖಲೆಗಳನ್ನು ತೆಗೆದುಕೊಂಡು, ನಿಮ್ಮ ಹತ್ತಿರದ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.
ಅನ್ನಭಾಗ್ಯ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ! ಡಿಬಿಟಿ ಸ್ಟೇಟಸ್ ಚೆಕ್ ಮಾಡಿ
Today is the last day to apply for new ration card and Correction
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.