ಗೃಹಲಕ್ಷ್ಮಿ ಮೇ ಮತ್ತು ಜೂನ್ ತಿಂಗಳ ಪೆಂಡಿಂಗ್ ಹಣ ನಾಳೆ 10:30ಕ್ಕೆ ಬಿಡುಗಡೆ! ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಸ್ಪಷ್ಟನೆ
ಮಹಿಳೆಯರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಬಿಪಿಎಲ್ ರೇಶನ್ ಕಾರ್ಡ್ ನಲ್ಲಿರುವ ಎಲ್ಲಾ ಮಾಹಿತಿ ಸರಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಬೇಕು
ನಮ್ಮ ರಾಜ್ಯದ ಮಹಿಳೆಯರಿಗಾಗಿ ವಿಶೇಷವಾಗಿ ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಆಗಿದೆ. ಈ ಒಂದು ಯೋಜನೆಯ ಮೂಲಕ ಮನೆಯ ಮುಖ್ಯಸ್ಥೆ ಆಗಿರುವ ಮಹಿಳೆಯ ಬ್ಯಾಂಕ್ ಖಾತೆಗೆ (Bank Account) ಪ್ರತಿ ತಿಂಗಳು ₹2000 ರೂಪಾಯಿಗಳನ್ನು ವರ್ಗಾವಣೆ ಮಾಡುತ್ತಾ ಬರಲಾಗಿದೆ.
ಈವರೆಗೂ 10 ಕಂತುಗಳ ಹಣ ಮಹಿಳೆಯರ ಬ್ಯಾಂಕ್ ಖಾತೆ (Bank Transfer) ತಲುಪಿದ್ದು, 11ನೇ ಕಂತಿನ ಹಣ ವರ್ಗಾವಣೆಗೆ ಇದೀಗ ದಿನಾಂಕ ಫಿಕ್ಸ್ ಆಗಿದೆ..
ಗೃಹಲಕ್ಷ್ಮಿ ಯೋಜನೆಯ ಮೂಲಕ ಮನೆಯನ್ನು ನಡೆಸಿಕೊಂಡು ಹೋಗುತ್ತಿರುವ, ಮನೆಯ ಮುಖ್ಯಸ್ಥೆಗೆ ಆರ್ಥಿಕವಾಗಿ ಸಹಾಯ ಆಗುತ್ತಿದೆ. ಈ ಯೋಜನೆಯಿಂದ ಬರುತ್ತಿರುವ ಹಣದಿಂದ ಮಹಿಳೆಯರಿಗೆ ಮನೆಯನ್ನು ನಡೆಸಿಕೊಂಡು ಹೋಗಲು ಸಹಾಯ ಆಗುತ್ತಿದೆ ಎಂದು ಹಲವು ಜನ ಮಹಿಳೆಯರು ತಾವೇ ತಿಳಿಸಿದ್ದಾರೆ. ಇನ್ನು ಹೆಚ್ಚು ಮಹಿಳೆಯರು ಈ ಹಣವನ್ನು ಕೂಡಿಟ್ಟು, ಮನೆಗೆ ಬೇಕಾದ ವಸ್ತುಗಳನ್ನು ಕೂಡ ಖರೀದಿ ಮಾಡುತ್ತಿದ್ದಾರೆ.
ನಿಮ್ಮ ಜಮೀನಿನ ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ! ಇಲ್ಲಿದೆ ಬದಲಾದ ಹೊಸ ನಿಯಮ
ಹೀಗೆ ಹಲವು ರೀತಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರಿಗೆ ಸಹಾಯ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಒಂದು ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಅಪ್ಲೈ ಮಾಡಿದ್ದರು ಸಹ, ಎಲ್ಲರಿಗು ಈ ಯೋಜನೆಯ ಸೌಲಭ್ಯ ಸಿಗುತ್ತಿಲ್ಲ, ಇದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು ಕಾರಣವಾಗಿದೆ.
ಮಹಿಳೆಯರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಬಿಪಿಎಲ್ ರೇಶನ್ ಕಾರ್ಡ್ ನಲ್ಲಿರುವ ಎಲ್ಲಾ ಮಾಹಿತಿ ಸರಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಬಹುದು.
ಹಾಗೆಯೇ ಅರ್ಹತೆ ಹೊಂದಿರುವ ಎಲ್ಲಾ ಮಹಿಳೆಯರಿಗೂ ಈ ಯೋಜನೆಯ ಸೌಲಭ್ಯ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶ ಕೂಡ ಆಗಿದೆ. ಹಾಗಾಗಿ ಇನ್ನು ಕೂಡ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿಲ್ಲವೋ ಅವರೆಲ್ಲರೂ ಅಪ್ಲೈ ಮಾಡಬಹುದು.
ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಲು ಕೊನೆಯ ದಿನಾಂಕವನ್ನು ನಿಗದಿ ಮಾಡಿಲ್ಲ ಎನ್ನುವುದು ಸರ್ಕಾರದ ಕಡೆಯಿಂದ ಬಂದಿರುವ ಒಂದು ಒಳ್ಳೆಯ ಸುದ್ದಿ ಎಂದು ಹೇಳಿದರೆ ತಪ್ಪಲ್ಲ.
ಕಡಿಮೆ ಕೃಷಿ ಭೂಮಿ ಇರೋ ರೈತರಿಗೆ ಸಿಗುತ್ತೆ ₹10,000 ರೂಪಾಯಿ! 90% ಜನರಿಗೆ ಈ ಯೋಜನೆ ಬಗ್ಗೆ ಗೊತ್ತಿಲ್ಲ
ಮತ್ತೊಂದು ಪ್ರಮುಖ ವಿಚಾರ ಏನು ಎಂದರೆ, ಎಲೆಕ್ಷನ್ ಹಾಗೂ ಇನ್ನಿತರ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ 11 ನೇ ಕಂತಿನ ಹಣ ಬಿಡುಗಡೆ ಆಗುವುದಕ್ಕೆ ತಡವಾಗಿತ್ತು, ಆದರೆ ಈಗ 11ನೇ ಕಂತಿನ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿರುವ ಮಾಹಿತಿಯ ಅನುಸಾರ ನಾಳೆಯೇ ಗೃಹಲಕ್ಷ್ಮೀ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ.
ಎಲ್ಲರೂ ಸಹ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು, ಜೊತೆಗೆ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ, 5 ವರ್ಷಗಳ ಕಾಲ ಮುಂದುವರೆಯುತ್ತದೆ ಎಂದು ಕೂಡ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಿಡುಗಡೆ! ಡಿಬಿಟಿ ಸ್ಟೇಟಸ್ ಚೆಕ್ ಮಾಡಿ
Gruha Lakshmi Yojana May and June pending money released tomorrow