ಎಕರೆಗಟ್ಟಲೆ ಆಸ್ತಿ, ಕೃಷಿ ಜಮೀನು ಇದ್ದವರಿಗೆ ಬಂತು ಹೊಸ ರೂಲ್ಸ್! ಎಲ್ಲಾ ರೈತರಿಗೆ ಬಿಗ್ ಅಪ್ಡೇಟ್

ಇದೀಗ ಕೃಷಿ ಭೂಮಿಯ (Agriculture Land) ಪಹಣಿ ಪತ್ರಕ್ಕೂ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಎಂದು ಸರ್ಕಾರ ಹೊಸ ರೂಲ್ಸ್ ಜಾರಿಗೆ ತಂದಿದೆ.

Bengaluru, Karnataka, India
Edited By: Satish Raj Goravigere

ಈಗ ಆಧಾರ್ ಕಾರ್ಡ್ ಎನ್ನುವುದು ಭಾರತದ ಜನರ ಬಳಿ ಇರಬೇಕಾದ ಮೂಲಭೂತ ದಾಖಲೆ ಎಂದರೆ ತಪ್ಪಲ್ಲ. ಹುಟ್ಟುವ ಮಗುವಿನ ಹೆಸರಿನಿಂದ ಹಿಡಿದು, ಎಲ್ಲರ ಬಳಿ ಆಧಾರ್ ಕಾರ್ಡ್ ಇರಲೇಬೇಕು.

ಹಾಗಾಗಿ ಎಲ್ಲಾ ಪ್ರಜೆಗಳು ಕೂಡ ಆಧಾರ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ. ಆಧಾರ್ ಕಾರ್ಡ್ (Aadhaar Card) ಅನ್ನು ಆಗಾಗ ಅಪ್ಡೇಟ್ ಮಾಡಿಸಬೇಕು. ಹಾಗೆಯೇ kyc ಕೂಡ ಮಾಡಿಸಿರಬೇಕು. ಸರ್ಕಾರದ ಸಾಕಷ್ಟು ಸೌಲಭ್ಯಗಳು ಆಧಾರ್ ಕಾರ್ಡ್ ಇದ್ದವರಿಗೆ ಸಿಗುತ್ತದೆ.

New Rules for Those who had acres of agricultural land

ಇವುಗಳನ ಸಹಾಯ ಪಡೆಯಲು ಪ್ರಮುಖ ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಇದೀಗ ಕೃಷಿ ಭೂಮಿಯ (Agriculture Land) ಪಹಣಿ ಪತ್ರಕ್ಕೂ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಎಂದು ಸರ್ಕಾರ ಹೊಸ ರೂಲ್ಸ್ ಜಾರಿಗೆ ತಂದಿದೆ.

ಈ 12 ಜಿಲ್ಲೆಗಳಲ್ಲಿ ಇವತ್ತೇ ಬಿಡುಗಡೆ ಆಗಲಿದೆ ಗೃಹಲಕ್ಷ್ಮಿ ಯೋಜನೆ ಹಣ! ಮಹಿಳೆಯರಿಗೆ ಗುಡ್ ನ್ಯೂಸ್

ಕಂದಾಯ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ:

ರೈತರ ಜಮೀನಿಗೆ ಸಂಬಂಧಿಸಿದ ಹಾಗೆ, ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಹಾಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸೌಲಭ್ಯ ಪಡೆಯಬೇಕು ಎಂದರೆ, ಪಹಣಿ ಪತ್ರದ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು ಎಂದು ಕೃಷ್ಣ ಭೈರೇಗೌಡ ಅವರು ಹೊಸದಾಗಿ ಆದೇಶ ನೀಡಿದ್ದಾರೆ.

ಎಲ್ಲಾ ರೈತರು ಕೂಡ ತಮ್ಮ ಜಮೀನಿನ ಪಹಣಿ ಪತ್ರಕ್ಕೆ (Property Documents), ಆಧಾರ್ ಲಿಂಕ್ ಮಾಡಿಲ್ಲ ಎಂದರೆ, ರೈತರು ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯ ಆಗುವುದಿಲ್ಲ.

Agriculture Landಸರ್ಕಾರಿ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ:

ರಾಜ್ಯ ಸರ್ಕಾರವು ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಈ ಒಂದು ನಿಯಮವನ್ನು ಜಾರಿಗೆ ತರಲಾಗಿದ್ದು, ಸ್ವಂತ ಭೂಮಿ ಹೊಂದಿರುವ ಎಲ್ಲಾ ರೈತರು ಕೂಡ ತಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು.

ಇಲ್ಲದೇ ಹೋದರೆ ಸರ್ಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಕೃಷಿ ಹೊಂಡ, ನೀರಾವರಿ ವ್ಯವಸ್ಥೆಗಾಗಿ ಪಂಪ್ ಸೆಟ್ ಅಳವಡಿಕೆ ಯೋಜನೆ, ಸೋಲಾರ್ ವಿದ್ಯುತ್ (Solar Electricity) ಬಳಕೆಗೆ ಸರ್ಕಾರದಿಂದ ಸಿಗುವ ಸಹಾಯ ಈ ಎಲ್ಲಾ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು.

ಇನ್ಮುಂದೆ ಆಧಾರ್ ಕಾರ್ಡ್ ಬಳಸಿ ಇಂತಹ ಕೆಲಸ ಮಾಡಿದ್ರೆ 10,000 ದಂಡ! ಸರ್ಕಾರ ಖಡಕ್ ನಿರ್ಧಾರ

ಈ ರೀತಿ ಮಾಡಿ:

ನಮ್ಮ ರಾಜ್ಯದಲ್ಲಿ ಹೆಚ್ಚಿನ ರೈತರಿಗೆ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಈಗ ಮಾಡಿರುವ ಸರ್ವೇ ಇಂದ ಸಿಕ್ಕಿರುವ ಮಾಹಿತಿ ಏನು ಎಂದರೆ, ರಾಜ್ಯದಲ್ಲಿ 70% ರೈತರು ಇದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಆದರೆ ನಿಜವಾಗಿಯು 44% ಮಾತ್ರ ರೈತರು ಇದ್ದು, ನಿಜವಾಗಿಯೂ ಅವಶ್ಯಕತೆ ಇರುವವರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ.

ಇದರಿಂದ ಅರ್ಹತೆ ಇರುವ ರೈತರಿಗೆ ಮೋಸ ಆಗಬಾರದು ಎಂದು ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗಿದೆ. ಈ ಕೆಲಸ ಮಾಡಿದಾಗ, ರೈತರ ಅಂಕಿ ಅಂಶ ಎಷ್ಟಿದೆ ಎನ್ನುವುದು ಗೊತ್ತಾಗುತ್ತಿದೆ.

ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಬಂಪರ್ ಅವಕಾಶ ಮಿಸ್ ಮಾಡ್ಕೋಬೇಡಿ! ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ಈಗಾಗಲೇ ಬೆಳೆ ಸಮೀಕ್ಷೆಯನ್ನು ಕೂಡ ಮುಗಿಸಲಾಗಿದೆ. ಇದರಲ್ಲಿ ಗೊತ್ತಾಗಿರುವ ವಿಷಯ, 33% ಅಷ್ಟು ರೈತರು ಇನ್ನು ಕೂಡ ತ್ಮ ಜಮೀನಿನ ಒಟ್ಟು ವಿಸ್ತೀರ್ಣ ಎಷ್ಟಿದೆ ಎನ್ನುವುದನ್ನು ತಿಳಿಸಿಲ್ಲ, ಈ ಬಗ್ಗೆ ಅಧಿಕಾರಿಗಳು ಕೂಡ ಬೇಜವಾಬ್ದಾರಿ ಇಂದ ಕೆಲಸ ಮಾಡಿದ್ದು, ಇದರ ದುಷ್ಪರಿಣಾಮ ರೈತರ ಮೇಲೆ ಬೀರುತ್ತಿದೆ.

ಹಾಗಾಗಿ ರೈತರ ಬಳಿ ಪಹಣಿ ಇದ್ದರೆ, ಅದರ ಮೂಲಕ ಯಾವ ರೈತನ ಬಳಿ ಎಷ್ಟು ಜಮೀನು ಇದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಈ ಕೆಲಸಕ್ಕಾಗಿ ಸರ್ಕಾರ ಹೊಸ ಆಪ್ ಅನ್ನು ಬಿಡುಗಡೆ ಮಾಡಲಿದೆ, ಈ ಆಪ್ ನ ಮೂಲಕ ಸುಲಭವಾಗಿ ಆಧಾರ್ ಕಾರ್ಡ್ ಅನ್ನು ಪಹಣಿಗೆ ಲಿಂಕ್ ಮಾಡಬಹುದು.

New Rules for Those who had acres of agricultural land