ಇನ್ಮುಂದೆ ಆಧಾರ್ ಕಾರ್ಡ್ ಬಳಸಿ ಇಂತಹ ಕೆಲಸ ಮಾಡಿದ್ರೆ 10,000 ದಂಡ! ಸರ್ಕಾರ ಖಡಕ್ ನಿರ್ಧಾರ
UIDAI ನ ಅಧಿಕೃತ YouTube Channel ಗೆ ಭೇಟಿ ನೀಡಿ, ಅಲ್ಲಿ ನಕಲಿ ಆಧಾರ್ ಕಾರ್ಡ್ ಪತ್ತೆ ಹಚ್ಚುವ ಬಗ್ಗೆ ಇರುವ ವಿಡಿಯೋ ನೋಡಿ
ನಮ್ಮ ದೇಶದ ಜನರ ಬಳಿ ಇರಲೇಬೇಕಾದ ಪ್ರಮುಖ್ಯವಾದ ದಾಖಲೆ ಆಧಾರ್ ಕಾರ್ಡ್ (Aadhaar Card) ಆಗಿದೆ. ಈ ಒಂದು ಕಾರ್ಡ್ ಇದ್ದರೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಹಲವು ಸೌಲಭ್ಯ ಸಿಗುತ್ತದೆ, ಭಾರತ ದೇಶದ ಗುರುತಿಗಾಗಿ ಕೂಡ ಆಧಾರ್ ಕಾರ್ಡ್ ಬಳಕೆ ಮಾಡುತ್ತೇವೆ.
ಬ್ಯಾಂಕ್ ಕೆಲಸ ಅಥವಾ ಇನ್ಯಾವುದೇ ಕೆಲಸಕ್ಕಾಗಿ ಹೋದಾಗ, ನಮ್ಮ ಬಳಿ ಆಧಾರ್ ಕಾರ್ಡ್ ಇರಲೇಬೇಕು. ಇದು ಸರ್ಕಾರದ ನಿಯಮ, ಆದರೆ ಇದೀಗ ಆಧಾರ್ ಕಾರ್ಡ್ ವಿಚಾರಕ್ಕೆ ಸರ್ಕಾರಕ್ಕೆ ಒಂದು ಸಮಸ್ಯೆ ಎದುರಾಗಿದೆ.
ಫೇಕ್ ಆಧಾರ್ ಕಾರ್ಡ್ ಸಮಸ್ಯೆ:
ಹೌದು, ಸರ್ಕಾರದಿಂದ ಸಿಗುವ ರೀತಿಯ ಹಾಗೆ ನಕಲಿ ಆಧಾರ್ ಕಾರ್ಡ್ ಗಳು ಕೂಡ ದೇಶದಲ್ಲಿ ಓಡಾಡುತ್ತಿದೆ. ಹಲವು ಜನರು ನಕಲಿ ಆಧಾರ್ ಕಾರ್ಡ್ ಬಳಸುತ್ತಿದ್ದು, ಇದು ಸರ್ಕಾರದ ಗಮನಕ್ಕೂ ಬಂದಿದೆ. ಹಾಗಾಗಿ ಸರ್ಕಾರವು ನಕಲಿ ಆಧಾರ್ ಕಾರ್ಡ್ ಬಳಕೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದು, ಇನ್ಮುಂದೆ ಇಂಥವರಿಗೆ ಕಾಲ ಇಲ್ಲ.
ವ್ಯಕ್ತಿ ಮೃತಪಟ್ಟ ನಂತರ ಆತನ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಏನು ಮಾಡಬೇಕು ಗೊತ್ತಾ?
ನಕಲಿ ಆಧಾರ್ ಕಾರ್ಡ್ ಅನ್ನು ಈ ರೀತಿ ಗುರುತಿಸಿ:
ಯಾರಾದರೂ ಸಹ ನಕಲಿ ಆಧಾರ್ ಕಾರ್ಡ್ ಬಳಕೆ ಮಾಡುತ್ತಿದ್ದರೆ ಅಥವಾ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಅನ್ನು ಇನ್ಯಾರೋ ಡ್ಯುಪ್ಲಿಕೇಟ್ ಮಾಡಿಸಿಕೊಂಡು ಬಳಸುತ್ತಿದ್ದರೆ, ಅದನ್ನು ನೀವೆ ಕಂಡುಹಿಡಿಯಬಹುದು.
ಈ ಕೆಲಸ ಮಾಡುವುದು ಹೇಗೆ ಎಂದು ಖುದ್ದು UIDAI ತಿಳಿಸಿದೆ. UIDAI ನ ಅಧಿಕೃತ YouTube Channel ಗೆ ಭೇಟಿ ನೀಡಿ, ಅಲ್ಲಿ ನಕಲಿ ಆಧಾರ್ ಕಾರ್ಡ್ ಪತ್ತೆ ಹಚ್ಚುವ ಬಗ್ಗೆ ಇರುವ ವಿಡಿಯೋ ನೋಡಿ, ವಿಡಿಯೋದಲ್ಲಿ ತಿಳಿಸುವ ಸ್ಟೆಪ್ಸ್ ಗಳನ್ನು ಫಾಲೋ ಮಾಡಿ..
ಬ್ಯಾಂಕ್ ಎಟಿಎಂಗೆ ಜಾಗ ಕೊಟ್ಟು ಪ್ರತಿ ತಿಂಗಳಿಗೆ ₹60 ಸಾವಿರ ಆದಾಯ ಬರುವ ಹಾಗೆ ಮಾಡ್ಕೊಳ್ಳಿ!
ಈ ಕೆಲಸ ಮಾಡಲು ಮೊದಲಿಗೆ ನೀವು UIDAI ಪೋರ್ಟಲ್ ಗೆ ಭೇಟಿ ನೀಡಬೇಕು. https://www.uidai.gov.in/ ಈ ಲಿಂಕ್ ಓಪನ್ ಮಾಡಿ, ಇದರಲ್ಲಿ ಆಧಾರ್ ಸೇವೆಗಳು ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿಕೊಳ್ಳಿ.
ಈಗ ಆಧಾರ್ ನಂಬರ್ ಹಾಕಿ, ಕ್ಯಾಪ್ಚ ಕೋಡ್ ಹಾಕಿ, ಈಗ ಪ್ರೊಸೆಸ್ ಟು ವೆರಿಫೈ ಎನ್ನುವ ಆಪ್ಶನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ನಕಲಿ ಆಗಿದ್ಯಾ ಎಂದು ಗೊತ್ತಾಗುತ್ತದೆ.
ಕೆನರಾ ಬ್ಯಾಂಕ್ ನಲ್ಲಿ 3 ವರ್ಷಗಳ ಫಿಕ್ಸೆಡ್ ಹಣಕ್ಕೆ ಬಡ್ಡಿ ಎಷ್ಟು ಸಿಗುತ್ತೆ? 1 ಲಕ್ಷಕ್ಕೆ ಸಿಗುವ ಬಡ್ಡಿ ಲೆಕ್ಕಾಚಾರ
ನಕಲಿ ಆಧಾರ್ ಕಾರ್ಡ್ ಗೆ 10,000 ದಂಡ, 3 ವರ್ಷ ಜೈಲು!
ಯಾವುದೇ ವ್ಯಕ್ತಿ ನಕಲಿ ಆಧಾರ್ ಕಾರ್ಡ್ ಬಳಕೆ ಮಾಡುತ್ತಿರುವ ವಿಷಯ ಗೊತ್ತಾದರೆ, ಅಂಥವರಿಗೆ ಸರ್ಕಾರ ದಂಡ ವಿಧಿಸುತ್ತದೆ. ನಕಲಿ ಆಧಾರ್ ಬಳಕೆ ಮಾಡುವವನ ಮೇಲೆ ₹10,000 ರೂಪಾಯಿಗಳು ದಂಡ ಹಾಕಿ, ಜೊತೆಗೆ 3 ವರ್ಷಗಳ ಜೈಲು ಶಿಕ್ಷೆಯನ್ನು ಕೂಡ ವಿಧಿಸಲಾಗುತ್ತದೆ. ಹಾಗಾಗಿ ನಕಲಿ ಆಧಾರ್ ಕಾರ್ಡ್ ಬಳಕೆ ಮಾಡುತ್ತಿರುವವರು ಎಚ್ಚೆತ್ತುಕೊಳ್ಳಬೇಕು.
10,000 fine for doing such thing using Aadhaar card