ಕೆನರಾ ಬ್ಯಾಂಕ್ ನಲ್ಲಿ 3 ವರ್ಷಗಳ ಫಿಕ್ಸೆಡ್ ಹಣಕ್ಕೆ ಬಡ್ಡಿ ಎಷ್ಟು ಸಿಗುತ್ತೆ? 1 ಲಕ್ಷಕ್ಕೆ ಸಿಗುವ ಬಡ್ಡಿ ಲೆಕ್ಕಾಚಾರ
Fixed Deposit : ನಮ್ಮ ದೇಶದ ಹಿರಿಯ ನಾಗರೀಕರು ವಯಸ್ಸಾದ ನಂತರ ಯಾರಿಗೂ ತೊಂದರೆ ಕೊಡಬಾರದು ಎಂದು ಬಯಸುತ್ತಾರೆ. ಅದಕ್ಕಾಗಿ ತಮ್ಮ ಭವಿಷ್ಯವನ್ನು ಸೆಕ್ಯೂರ್ ಮಾಡಿಕೊಳ್ಳಲು FD ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ.
ಪ್ರಮುಖ ಬ್ಯಾಂಕ್ ಗಳು ಹಿರಿಯ ನಾಗರೀಕರಿಗೆ 7.75% ಅಥವಾ ಅದಕ್ಕಿಂತ ಹೆಚ್ಚು ಬಡ್ಡಿ ಕೊಡುವಂಥ ಕೆಲಸ ಮಾಡುತ್ತಿದೆ. ಇದರಿಂದ ಹಿರಿಯ ನಾಗರೀಕರಿಗೆ ಕೂಡ ಅನುಕೂಲ ಆಗುತ್ತಿದೆ. ಹಾಗಿದ್ದಲ್ಲಿ ಈ ಬ್ಯಾಂಕ್ ಗಳು ಯಾವುವು? ತಿಳಿಯೋಣ…
ಹಿರಿಯರಿಗೆ ಬಡ್ಡಿದರ ಎಷ್ಟು?
ಬ್ಯಾಂಕ್ ಗಳಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಅನುಕೂಲ ಅಗುವಂಥ ಅನೇಕ ಯೋಜನೆಗಳಿವೆ. 3 ವರ್ಷಗಳ ಕಾಲ ಠೇವಣಿ ಇರಬಹುದಾದ FD ಯೋಜನೆಗಳಿದ್ದು, ಅವುಗಳಲ್ಲಿ 1 ಕೋಟಿಗಿಂತ ಕಡಿಮೆ ಮೊತ್ತವನ್ನು ಹೂಡಿಕೆ ಮಾಡಬಹುದು.
ಈ ಬಡ್ಡಿ ಮೊತ್ತವನ್ನು 3 ತಿಂಗಳಿಗೆ ಒಂದು ಸಾರಿ ನಿರ್ಧಾರ ಮಾಡಲಾಗುತ್ತದೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಬ್ಯಾಂಕ್ ಗಳಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ. ಹಾಗಿದ್ದಲ್ಲಿ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರ ಕೊಡಲಾಗುತ್ತಿದೆ ಎಂದು ನೋಡೋಣ..
ಕೆನರಾ ಬ್ಯಾಂಕ್‌ನಲ್ಲಿ 25 ಲಕ್ಷ ಹೋಮ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಡೀಟೇಲ್ಸ್
Axis Bank
ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ Axis Bank ಹಿರಿಯ ನಾಗರೀಕರಿಗಾಗಿ ಇರುವ 3 ವರ್ಷಗಳ ಅವಧಿಯ FD ಯೋಜನೆಗೆ, 7.60% ಬಡ್ಡಿ ನೀಡುತ್ತಿದ್ದು, ಇದರಲ್ಲಿ ಹಿರಿಯ ನಾಗರೀಕರು 1 ಲಕ್ಷ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ವೇಳೆಗೆ 1.25 ಲಕ್ಷ ಪಡೆಯುತ್ತಾರೆ.
Bank of Baroda
ಈ ಬ್ಯಾಂಕ್ ಕೂಡ ದೇಶದ ಜನರ ನಂಬಿಕೆ ಗಳಿಸಿರುವ ಪ್ರಮುಖ ಬ್ಯಾಂಕ್, ಇಲ್ಲಿ ಹಿರಿಯ ನಾಗರೀಕರ 3 ವರ್ಷಗಳ FD ಯೋಜನೆಗೆ 7.5% ಬಡ್ಡಿದರ ನೀಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದ್ದು, ಹಿರಿಯರಿಗೆ ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಇದರಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ, 1.26 ಲಕ್ಷ ರಿಟರ್ನ್ಸ್ ಸಿಗುತ್ತದೆ.
ತಪ್ಪಾಗಿ ಬೇರೆಯವರ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗೋಯ್ತಾ? ಈ ರೀತಿ ಮಾಡಿ ಸಾಕು
HDFC Bank
ಬಹಳಷ್ಟು ಜನರು ನಂಬಿಕೆ ಇಟ್ಟು, ಅಕೌಂಟ್ (Bank Account) ಓಪನ್ ಮಾಡುವ ಬ್ಯಾಂಕ್ ಇದು. HDFC ಬ್ಯಾಂಕ್ ನಲ್ಲಿ ಹಿರಿಯ ನಾಗರೀಕರ 3 ವರ್ಷಗಳ ಅವಧಿಯ ಉಳಿತಾಯ ಯೋಜನೆಗೆ 7.5% ಬಡ್ಡಿ ನೀಡಲಾಗುತ್ತದೆ. ಈ ಬ್ಯಾಂಕ್ ನಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ, 1.25 ಲಕ್ಷ ರಿಟರ್ನ್ಸ್ ಬರುತ್ತದೆ.
State Bank of India
ಹೆಚ್ಚಿನ ಜನರು ಅಕೌಂಟ್ ಹೊಂದಿರುವ, ವಿಶ್ವಾಸ ಹೊಂದಿರುವ ಬ್ಯಾಂಕ್ ಇದು. SBI ನಲ್ಲಿ ಹಿರಿಯ ನಾಗರೀಕರ 3 ವರ್ಷಗಳ FD ಯೋಜನೆಗೆ 7.25% ಬಡ್ಡಿ ಸಿಗುತ್ತದೆ. ಇದರಲ್ಲಿ 7.25% ಬಡ್ಡಿ ಸಿಗಲಿದ್ದು, 1 ಲಕ್ಷ ಹೂಡಿಕೆ ಮಾಡಿದರೆ 1.24ಲಕ್ಷ ರಿಟರ್ನ್ಸ್ ಬರುತ್ತದೆ.
ಸ್ಟೇಟ್ ಬ್ಯಾಂಕ್‌ನಲ್ಲಿ 12 ಲಕ್ಷ ಕಾರ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಡೀಟೇಲ್ಸ್
Bank of India
ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಎರಡು ಕೂಡ ಹಿರಿಯ ನಾಗರೀಕರ 3 ವರ್ಷಗಳ FD ಯೋಜನೆಗೆ 7% ಬಡ್ಡಿದರ ಸಿಗುತ್ತದೆ, ಇಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ 1.23 ಲಕ್ಷ ರಿಟರ್ನ್ಸ್ ಬರುತ್ತದೆ..
Canara Bank
ಕೆನರಾ ಬ್ಯಾಂಕ್ ನಲ್ಲಿ ಕೂಡ ಒಳ್ಳೆಯ ಯೋಜನೆಗಳಿದ್ದು, ಇಲ್ಲಿ 3 ವರ್ಷಗಳ FD ಯೋಜನೆಗೆ ಹಿರಿಯ ನಾಗರೀಕರಿಗೆ 7.30% ಬಡ್ಡಿ ನೀಡಲಾಗುತ್ತದೆ. ಇದರಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ, 1.24 ಲಕ್ಷ ಸಿಗುತ್ತದೆ.
ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು? ಈ ಮಿತಿ ಗೊತ್ತಿರಲಿ, ಇಲ್ಲದೆ ಹೋದ್ರೆ ಕಟ್ಟಬೇಕು ದಂಡ!
Banks that offer the highest interest rates for Senior Citizens Fixed Deposit Scheme
Our Whatsapp Channel is Live Now 👇