ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು? ಈ ಮಿತಿ ಗೊತ್ತಿರಲಿ, ಇಲ್ಲದೆ ಹೋದ್ರೆ ಕಟ್ಟಬೇಕು ದಂಡ!

Cash Limit in House : ಜಾಸ್ತಿ ಮೊತ್ತ ಇಟ್ಟುಕೊಂಡರೆ, ನಿಮ್ಮ ಮೇಲೆ ಐಟಿಆರ್ ಸಲ್ಲಿಕೆ ಆಗಬಹುದು. ಹಾಗಾಗಿ ಈ ಪ್ರಮುಖವಾದ ವಿಷಯವನ್ನು ತಿಳಿದುಕೊಳ್ಳುವುದು ಒಳ್ಳೆಯದು

Bengaluru, Karnataka, India
Edited By: Satish Raj Goravigere

Cash Limit in House : ಭಾರತ ಈಗ ಡಿಜಿಟಲ್ ಇಂಡಿಯಾ ಆಗಿದ್ದರೂ ಕೂಡ ಇನ್ನು ಕೂಡ ಸಾಕಷ್ಟು ಜನರು ಹಣದ ವ್ಯವಹಾರಕ್ಕೆ, ಮುಖ್ಯ ಕೆಲಸಗಳಿಗೆ ಕ್ಯಾಶ್ ಅನ್ನೇ ಬಳಕೆ ಮಾಡುತ್ತಾರೆ. ಅಂಥವರು ತಮ್ಮ ಖರ್ಚಿಗಾಗಿ ಮನೆಯಲ್ಲಿ ಒಂದಷ್ಟು ಕ್ಯಾಶ್ ಇಟ್ಟುಕೊಂಡಿರುತ್ತಾರೆ.

ಸಾಮಾನ್ಯವಾಗಿ ATM ಇಂದ ಹಣವನ್ನು ವಿತ್ ಡ್ರಾ (Cash Withdraw) ಮಾಡಿ ಮನೆಯಲ್ಲಿ ತಂದು ಇಡುತ್ತಾರೆ. ಆದರೆ ಮನೆಯಲ್ಲಿ ಎಷ್ಟು ಮೊತ್ತ ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಕೂಡ ಒಂದು ಲಿಮಿಟ್ ಇದೆ.

How much cash can you keep at home, Know the limit

ಅದಕ್ಕಿಂತ ಜಾಸ್ತಿ ಮೊತ್ತ ಇಟ್ಟುಕೊಂಡರೆ, ನಿಮ್ಮ ಮೇಲೆ ಐಟಿಆರ್ ಸಲ್ಲಿಕೆ ಆಗಬಹುದು. ಹಾಗಾಗಿ ಈ ಪ್ರಮುಖವಾದ ವಿಷಯವನ್ನು ತಿಳಿದುಕೊಳ್ಳುವುದು ಒಳ್ಳೆಯದು..

ನಿಮ್ಮತ್ರ ಯಾವುದೇ ಬ್ಯಾಂಕ್ ಡೆಬಿಟ್ ಕಾರ್ಡ್ ಇದ್ರೂ ಸಹ ಸಿಗಲಿದೆ 10 ಲಕ್ಷ ರೂಪಾಯಿ ಬೆನಿಫಿಟ್!

ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು?

ಇನ್ಕಮ್ ಟ್ಯಾಕ್ಸ್ ಇಲಾಖೆ ಇಂದ ಜಾರಿಗೆ ಬಂದಿರುವ ನಿಯಮಗಳ ಅನುಸಾರ ನೀವು ನಿಮ್ಮ ಮನೆಯಲ್ಲಿ ಎಷ್ಟು ಕ್ಯಾಶ್ ಬೇಕಾದರೂ ಇಟ್ಟುಕೊಳ್ಳಬಹುದು. ಇಷ್ಟೇ ಕ್ಯಾಶ್ ಇಡಬೇಕು ಎಂದು ನಿಯಮ ಇಲ್ಲ.

ಆದರೆ ಒಂದು ವೇಳೆ ನಿಮ್ಮ ಮನೆಗೆ ಐಟಿ ಅಧಿಕಾರಿಗಳು ಬಂದು, ಪರಿಶೀಲನೆ ನಡೆಸಿದಾಗ ಹೆಚ್ಚಿನ ನಗದು ಸಿಕ್ಕಿದರೆ, ಆಗ ನೀವು ಆ ಹಣದ ಆದಾಯದ ಮೂಲ ಏನು ಎನ್ನುವುದನ್ನು ತಿಳಿಸಬೇಕು. ಸರಿಯಾದ ದಾಖಲೆಗಳು, ಸಾಕ್ಷಿಗಳು ಇದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆ ಹಣಕ್ಕೆ ಸರಿಯಾಗಿ ಟ್ಯಾಕ್ಸ್ ಪಾವತಿ ಮಾಡಿದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ.

ದಂಡ ಎಷ್ಟು ಕಟ್ಟಬೇಕು?

ನಿಮ್ಮ ಮನೆಯಲ್ಲಿ ಹೆಚ್ಚು ಕ್ಯಾಶ್ ಇದ್ದು, ಐಟಿ ಅಧಿಕಾರಿಗಳು ಬಂದು ಅದನ್ನೆಲ್ಲ ಚೆಕ್ ಮಾಡಿ, ಸಾಕ್ಷಿ ಕೇಳಿದಾಗ.. ಅದರ ಆದಾಯದ ಮೂಲ ಎಷ್ಟು ಎಂದು ಇಲಾಖೆಗೆ ತಿಳಿಸಲು ಸಾಧ್ಯವಾಗದೇ ಹೋದರೆ, ನಿಮ್ಮ ಹಣವನ್ನು ಸೀಜ್ ಮಾಡುವುದರ ಜೊತೆಗೆ ನಿಮ್ಮ ಮೇಲೆ ಭಾರಿ ದಂಡ ವಿಧಿಸಲಾಗುತ್ತದೆ.

ಸೀಜ್ ಆಗಿರುವ ಮೊತ್ತದ ಆಧಾರದ ಮೇಲೆ 137% ದಂಡ ವಿಧಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಬೇರೆ ರೀತಿಯ ಸಮಸ್ಯೆಗಳಲ್ಲಿ ಕೂಡ ನೀವು ಸಿಲುಕಿಕೊಳ್ಳಬಹುದು.

ನಷ್ಟದ ಮಾತೇ ಇಲ್ಲ, ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ ₹5,550! ಅರ್ಜಿ ಸಲ್ಲಿಸಿ

Cash Limit in Houseವರ್ಷಕ್ಕೆ ಒಬ್ಬ ವ್ಯಕ್ತಿ ಹಿಂಪಡೆಯಬಹುದಾದ ಮೊತ್ತ ಎಷ್ಟು?

ಐಟಿ ಡಿಪಾರ್ಮೆಂಟ್ ನಿಯಮದ ಅನುಸಾರ, ಒಬ್ಬ ವ್ಯಕ್ತಿ ಒಂದೇ ಸಾರಿಗೆ ₹50,000 ಕ್ಕಿಂತ ಹೆಚ್ಚು ಹಣ ಪಡೆದರೆ, ಅದಕ್ಕಾಗಿ ಪ್ಯಾನ್ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ.

ಹಾಗೆಯೇ 1 ವರ್ಷದ ಅವಧಿಯಲ್ಲಿ ಒಬ್ಬ ವ್ಯಕ್ತಿ 20 ಲಕ್ಷದವರೆಗು ಹಣವನ್ನು ಠೇವಣಿ (Fixed Deposit) ಮಾಡಬಹುದು ಅಥವಾ ಅಷ್ಟೇ ಮೊತ್ತವನ್ನು ಹಿಂಪಡೆಯಬಹುದು. 2 ಲಕ್ಷಕ್ಕಿಂತ ಹೆಚ್ಚಿನ ಹಣಕಾಸಿನ ವಹಿವಾಟು ನಡೆದರೆ, ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಬೇಕಾಗುತ್ತದೆ.

ಯಾವುದೇ ಬ್ಯಾಂಕ್‌ನ ಚೆಕ್ ಬುಕ್ ಇದ್ದೋರಿಗೆ ಹೊಸ ರೂಲ್ಸ್! ಚೆಕ್ ಬೌನ್ಸ್ ಕುರಿತು ಬಿಗ್ ಅಪ್ಡೇಟ್

ಇನ್ನಿತರ ಐಟಿ ನಿಯಮಗಳು:

*ಒಬ್ಬ ವ್ಯಕ್ತಿ ಒಂದು ವರ್ಷಕ್ಕೆ 20 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರ ನಡೆಸಿದರೆ, ಆತ TDS ಪಾವತಿ ಮಾಡಬೇಕು. ಇದು ಸೆಕ್ಷನ್ 194N ಕಾಯ್ದೆ ಆಗಿದೆ. ಈ ನಿಯಮ ಎಲ್ಲರಿಗೂ ಅಲ್ಲ, 3 ವರ್ಷಗಳಿಂದ ITR ಸಲ್ಲಿಕೆ ಮಾಡಿರುವವರಿಗೆ ಮಾತ್ರ ಆಗಿರುತ್ತದೆ.

*ಒಂದೇ ಸಾರಿ 50 ಸಾವಿರಕ್ಕಿಂತ ಹೆಚ್ಚು ಮೊತ್ತ ಪಡೆದುಕೊಂಡರೆ, ಅದಕ್ಕಾಗಿ ನೀವು ಪ್ಯಾನ್ ಕಾರ್ಡ್ ದಾಖಲೆ ತೋರಿಸಬೇಕು.

*ಒಂದು ವೇಳೆ 3 ವರ್ಷಗಳಿಂದ ಐಟಿಆರ್ ಸಲ್ಲಿಕೆ ಮಾಡದೇ ಇರುವಂಥ ವ್ಯಕ್ತಿ ಬ್ಯಾಂಕ್ ಇಂದ 1 ವರ್ಷದಲ್ಲಿ 20 ಲಕ್ಷದ ವಹಿವಾಟು ನಡೆಸಿದರೆ, 2% TDS ಪಾವತಿ ಮಾಡಬೇಕಾಗುತ್ತದೆ. 1 ಕೋಟಿ ವರೆಗಿನ ವ್ಯವಹಾರ ನಡೆಸಿದರೆ, 5% TDS ಪಾವತಿ ಮಾಡಬೇಕಾಗುತ್ತದೆ. ITR ಸಲ್ಲಿಕೆ ಮಾಡಿರುವವರಿಗೆ ವಿನಾಯಿತಿ ಇರುತ್ತದೆ.

*ಡೆಬಿಟ್ (Debit Card) ಅಥವಾ ಕ್ರೆಡಿಟ್ ಕಾರ್ಡ್ (Credit Card) ಮೂಲಕ 1 ಲಕ್ಷಕ್ಕಿಂತ ಹೆಚ್ಚು ಮೊತ್ತದ ಹಣಕಾಸಿನ ವ್ಯವಹಾರ ನಡೆಸಿದರೆ, ಆಗ ನಿಮ್ಮ ಮೊತ್ತ ಪರಿಶೀಲನೆಗೆ ಒಳಪಡುತ್ತದೆ. ಯಾವುದೇ ಖರೀದಿಗೆ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಬಳಕೆ ಮಾಡುವುದಾದರೆ, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ತೋರಿಸಬೇಕು.

ಸ್ಟೇಟ್ ಬ್ಯಾಂಕ್‌ನಲ್ಲಿ 2 ವರ್ಷಕ್ಕೆ 5 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

How much cash can you keep at home, Know the limit