ನಷ್ಟದ ಮಾತೇ ಇಲ್ಲ, ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ ₹5,550! ಅರ್ಜಿ ಸಲ್ಲಿಸಿ

ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಒಳ್ಳೆಯ ಬಡ್ಡಿ ಕೊಡುವ ಯೋಜನೆಗಳಲ್ಲಿ ಒಂದು ಪೋಸ್ಟ್ ಆಫೀಸ್ MSI ಯೋಜನೆ ಆಗಿದೆ.

Bengaluru, Karnataka, India
Edited By: Satish Raj Goravigere

post office scheme : ನಾವು ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮೊತ್ತವನ್ನು, ಅಥವಾ ನಮಗೆ ಹೆಚ್ಚಿನ ಹಣ ಸಿಕ್ಕಾಗ ಆ ಹಣವನ್ನು ಪೂರ್ತಿಯಾಗಿ ಹೂಡಿಕೆ ಮಾಡುತ್ತಾ ಬಂದರೆ, ಅದರಿಂದ ನಮ್ಮ ಭವಿಷ್ಯಕ್ಕೆ ಒಳ್ಳೆಯದು. ಮುಂದೆ ನಿವೃತ್ತಿ ಆದಾಗ ಬದುಕು ಸಾಗಿಸುವುದು ಹೇಗೆ ಎನ್ನುವ ಗೊಂದಲ, ಆತಂಕ ಇರುವುದಿಲ್ಲ.

ಹಾಗಾಗಿ ಈಗಿನಿಂದಲೇ ಹಣವನ್ನು ಹೂಡಿಕೆ (Investment) ಮಾಡುತ್ತಾ ಬರುವುದು ಉತ್ತಮ. ಈ ಕಾರಣಕ್ಕೆ ಈಗಿನಿಂದಲೇ ನಿಮ್ಮಿಂದ ಸಾಧ್ಯ ಆದಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತಾ ಬರುವುದು ಒಳ್ಳೆಯದು.

you will get 16 lakhs In this post office Savings scheme

ಹೂಡಿಕೆ ಮಾಡುವುದಕ್ಕೆ ಉತ್ತಮವಾದ ಆಯ್ಕೆ ಯಾವುದು ಎಂದು ನೋಡಿದರೆ, ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಉತ್ತಮ ಅನ್ನಿಸುತ್ತದೆ. ಏಕೆಂದರೆ, ಪೋಸ್ಟ್ ಆಫೀಸ್ ಕೇಂದ್ರ ಸರ್ಕಾರಕ್ಕೆ ಸೇರಿದ ಇಲಾಖೆ, ಹಾಗೆಯೇ ಇಲ್ಲಿ ನೀವು ಹೂಡಿಕೆ ಮಾಡುವ ಹಣ ಸುರಕ್ಷಿತವಾಗಿ ಇರುತ್ತದೆ.

ಸ್ಟೇಟ್ ಬ್ಯಾಂಕ್‌ನಲ್ಲಿ 2 ವರ್ಷಕ್ಕೆ 5 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಹಾಗೆಯೇ ಒಳ್ಳೆಯ ರಿಟರ್ನ್ಸ್ ಬರುವಂಥ ಅನೇಕ ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿವೆ. ಈ ಕಾರಣಗಳಿಗೆ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.

ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಒಳ್ಳೆಯ ಬಡ್ಡಿ ಕೊಡುವ ಯೋಜನೆಗಳಲ್ಲಿ ಒಂದು ಪೋಸ್ಟ್ ಆಫೀಸ್ MSI ಯೋಜನೆ ಆಗಿದೆ. ಇದು ಪ್ರತಿ ತಿಂಗಳು ನಿಮಗೆ ಆದಾಯ ಬರುವಂಥ ಯೋಜನೆ ಆಗಿದ್ದು, ಈ ಒಂದು ಯೋಜನೆಯ ಅಡಿಯಲ್ಲಿ ಉತ್ತಮವಾದ ಲಾಭ ಗಳಿಸಬಹುದು.

ಪೋಸ್ಟ್ ಆಫೀಸ್ ನಲ್ಲಿ ಮಾಡುವ ಹೂಡಿಕೆ ಆಗಿರುವುದರಿಂದ ನಿಮ್ಮ ಹಣ ಕೂಡ ಸುರಕ್ಷಿತವಾಗಿ ಇರುತ್ತದೆ.. ಪ್ರತಿ ತಿಂಗಳು ಆದಾಯ (Monthly Income) ತರುವಂಥ ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ತಿಳಿಯೋಣ..

ಮಹಿಳೆಯರಿಗಾಗಿ ಹೊಸ ಯೋಜನೆ, ಎಸ್‌ಬಿಐ ಬ್ಯಾಂಕ್ ಅಕೌಂಟ್ ಇದ್ರೆ ಜಮಾ ಆಗಲಿದೆ 50 ಸಾವಿರ!

post office schemeಎಷ್ಟು ಮೊತ್ತ ಹೂಡಿಕೆ ಮಾಡಬಹುದು?

ಪೋಸ್ಟ್ ಆಫೀಸ್ ನ ಈ MIS ಯೋಜನೆಯಲ್ಲಿ ನೀವು ಒಂಟಿ ಖಾತೆ ಶುರು ಮಾಡಿದರೆ ಗರಿಷ್ಠ 9 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಜಂಟಿ ಖಾತೆಯಾದರೆ 15 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಈ ಮೊತ್ತಗಳಿಗೆ ನಿಮಗೆ 7.4% ಬಡ್ಡಿದರ ಸಿಗಲಿದ್ದು, ಇದು ಉತ್ತಮವಾದ ರಿಟರ್ನ್ಸ್ ಆಗಿದೆ. ತ್ರೈಮಾಸಿಕ ಸಮಯಕ್ಕೆ ಈ ಬಡ್ಡಿದರ ಬದಲಾದರೂ ಆಗಬಹುದು.

ಮೆಚ್ಯುರಿಟಿ ಸಮಯ:

ಪೋಸ್ಟ್ ಆಫೀಸ್ MIS ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಈ ಯೋಜನೆಯ ಮೆಚ್ಯುರಿಟಿ ಸಮಯ 5 ವರ್ಷಗಳು. ಇಲ್ಲಿ ನೀವು 9 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹5,550 ರೂಪಾಯಿ ಆದಾಯ ಬರುತ್ತದೆ.. 15 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದವರಿಗೆ ಪ್ರತಿ ತಿಂಗಳು ₹9,250 ರೂಪಾಯಿಗಳು ಆದಾಯ ಬರುತ್ತದೆ.

ಯಾವುದೇ ಬ್ಯಾಂಕ್‌ನ ಚೆಕ್ ಬುಕ್ ಇದ್ದೋರಿಗೆ ಹೊಸ ರೂಲ್ಸ್! ಚೆಕ್ ಬೌನ್ಸ್ ಕುರಿತು ಬಿಗ್ ಅಪ್ಡೇಟ್

ಯೋಜನೆ ವಿಸ್ತರಿಸಬಹುದು:

ಒಂದು ವೇಳೆ MIS ಯೋಜನೆಯ 5 ವರ್ಷಗಳ ಅವಧಿ ಮುಗಿದ ನಂತರ, ಈ ಯೋಜನೆಯನ್ನು ಮುಂದುವರಿಸಬೇಕು ಎಂದರೆ, ಅದಕ್ಕೂ ಕೂಡ ಆಯ್ಕೆ ಇದೆ. ಇನ್ನು 5 ವರ್ಷಗಳ ಕಾಲ ಮುಂದುವರೆಸಿಕೊಂಡು ಹೋಗಬಹುದು. ಪ್ರತಿ 5 ವರ್ಷಗಳ ಅವಧಿ ಮುಗಿಯುವ ವೇಳೆಗೆ, ಈ ರೀತಿ ಮುಂದುವರೆಸುವ ಆಯ್ಕೆ ನಿಮಗೆ ಸಿಗುತ್ತದೆ.

ಹಾಗೆಯೇ ಸಮಯ ಮುಗಿಯುವುದಕ್ಕಿಂತ ಮೊದಲು ಹಣದ ಅವಶ್ಯಕತೆ ಬಂದು, ಅದನ್ನು ವಾಪಸ್ ಪಡೆದುಕೊಳ್ಳಬೇಕು ಎಂದರೆ, ಯೋಜನೆ ಶುರು ಮಾಡಿ 1 ವರ್ಷದ ನಂತರ ಪಡೆಯಬಹುದು. ಯೋಜನೆ ಶುರು ಮಾಡಿ 1 ರಿಂದ 3 ವರ್ಷಗಳ ಅವಧಿಯಲ್ಲಿ ವಾಪಸ್ ಪಡೆದರೆ, ಯೋಜನೆಯ ಮೊತ್ತದಲ್ಲಿ 2% ಕಡಿತಗೊಳಿಸಿ, ಕೊಡಲಾಗುತ್ತದೆ. MIS ನಲ್ಲಿ ಹೂಡಿಕೆ ಮಾಡಲು ಮೊದಲಿಗೆ ನಿಮ್ಮ ಬಳಿ ಪೋಸ್ಟ್ ಆಫೀಸ್ ನಲ್ಲಿ ಸೇವಿಂಗ್ಸ್ ಅಕೌಂಟ್ ಇರಬೇಕು.

Get 5,550 Rupees per month in this post office scheme