ಮಹಿಳೆಯರಿಗಾಗಿ ಹೊಸ ಯೋಜನೆ, ಎಸ್‌ಬಿಐ ಬ್ಯಾಂಕ್ ಅಕೌಂಟ್ ಇದ್ರೆ ಜಮಾ ಆಗಲಿದೆ 50 ಸಾವಿರ!
ಈ ಯೋಜನೆಯ ಮೂಲಕ ಪಡೆಯುವ ಸಾಲವನ್ನು (Loan) 3 ವರ್ಷಗಳಲ್ಲಿ ತೀರಿಸಬೇಕು. ಅನ್ನಪೂರ್ಣ ಯೋಜನೆಯ Loan ನಿಮಗೆ SBI ಇಂದ ಸಿಗುತ್ತದೆ.
Loan : ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ ಎಂದು ಹೇಳಿದರೆ ತಪ್ಪಲ್ಲ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಸವಲತ್ತುಗಳು ಸಿಗುವುದು ಕಡಿಮೆ. ಹೆಣ್ಣುಮಗುವಿಗೆ ಬೇಗ ಮದುವೆ ಮಾಡಿ ಗಂಡನ ಮನೆಗೆ ಕಳಿಸಬೇಕು ಎಂದು ಯೋಚಿಸುವ ತಂದೆ ತಾಯಿಯರೇ ಹೆಚ್ಚು.
ಆದರೆ ಹೆಣ್ಣು ಮಗುವನ್ನು ಓದಿಸಿ, ಅವಳ ಕಾಲ ಮೇಲೆ ಅವಳು ನಿಂತುಕೊಳ್ಳಬೇಕು ಎಂದು ಬಯಸುವವರ ಸಂಖ್ಯೆ ಕಡಿಮೆ ಎಂದು ಹೇಳಿದರೆ ತಪ್ಪಲ್ಲ. ಕೇಂದ್ರ ಸರ್ಕಾರ ಕೂಡ ಇದೇ ನಿಟ್ಟಿನಲ್ಲಿ ಸಾಗುತ್ತಿದೆ.
ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿ, ಮಹಿಳೆಯರು ತಮ್ಮದೇ ಆದ ಸ್ವಂತ ಉದ್ಯೋಗ ಅಥವಾ ಸ್ವಂತ ಉದ್ಯಮ ಶುರು ಮಾಡಲಿ ಎಂದು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಿದೆ.
ಈಗಾಗಲೇ ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ, ಮುದ್ರಾ ಲೋನ್ (Mudra Loan), ಮಹಿಳಾ ಉದ್ಯಮ ನಿಧಿ, ಮಹಿಳಾ ವಿಕಾಸ ಯೋಜನೆ ಇಂಥ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇದೀಗ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತರುತ್ತಿದೆ. ಇದರಿಂದ ಮಹಿಳೆಯರಿಗೆ ₹50,000 ಸಿಗಲಿದೆ. ಹಾಗಿದ್ದಲ್ಲಿ ಈ ಯೋಜನೆ ಯಾವುದು? ಪೂರ್ತಿಯಾಗಿ ತಿಳಿಯೋಣ..
ಸ್ಟೇಟ್ ಬ್ಯಾಂಕ್‌ನಲ್ಲಿ 2 ವರ್ಷಕ್ಕೆ 5 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಅನ್ನಪೂರ್ಣ ಯೋಜನೆ:
ಕೇಂದ್ರ ಸರ್ಕಾರವು ನಮ್ಮ ದೇಶದ ಮಹಿಳೆಯರಿಗಾಗಿ ಹೊಸದಾಗಿ ಜಾರಿಗೆ ತಂದಿರುವ ಈ ಯೋಜನೆಯ ಹೆಸರು ಅನ್ನಪೂರ್ಣ ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ ₹50,000 ಹಣಕಾಸಿನ ಸಹಾಯ ಸರ್ಕಾರದಿಂದ ಸಿಗಲಿದೆ.
ಹಾಗಿದ್ದಲ್ಲಿ ಮಹಿಳೆಯರು ಯಾವ ಉದ್ಯಮ ಶುರು ಮಾಡುವುದಕ್ಕೆ ಸರ್ಕಾರದಿಂದ ಈ ಸಹಾಯ ಸಿಗುತ್ತದೆ? ಮಹಿಳೆಯರು ಈ ಯೋಜನೆಯ ಉಪಯೋಗ ಪಡೆದುಕೊಳ್ಳುವುದು ಹೇಗೆ? ಎಲ್ಲವನ್ನು ಪೂರ್ತಿಯಾಗಿ ತಿಳಿದುಕೊಳ್ಳೋಣ..
ಸಾಮಾನ್ಯವಾಗಿ ಮಹಿಳೆಯರು ಅಡುಗೆ ಚೆನ್ನಾಗಿ ಮಾಡುತ್ತಾರೆ. ಹಾಗಾಗಿ ಅಡುಗೆ ಮಾಡುವುದನ್ನೇ ಅವರ ಉದ್ಯೋಗವನ್ನಾಗಿ (Own Business) ಮಾಡಿ, ಒಳ್ಳೆಯ ಆದಾಯ ಗಳಿಸಲಿ ಎನ್ನುವುದು ಸರ್ಕಾರದ ಉದ್ದೇಶ.
ಹಾಗಾಗಿ ಕೇಟರಿಂಗ್ ಬ್ಯುಸಿನೆಸ್ ನಲ್ಲಿ (Catering business) ಆಸಕ್ತಿ ಇರುವವರಿಗೆ ಅನ್ನಪೂರ್ಣ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದರಿಂದ ಸಿಗುವ ₹50,000 ರೂಪಾಯಿಗಳನ್ನು ಬಳಸಿ ಕೇಟರಿಂಗ್ ಗೆ ಅವಶ್ಯಕತೆ ಇರುವ ಉಪಕರಣಗಳು, ಪದಾರ್ಥಗಳು, ಫ್ರಿಜ್, LPG ಸಿಲಿಂಡರ್, ಹಾಗು ಇನ್ನಿತರ ವಸ್ತುಗಳನ್ನು ಖರೀದಿ ಮಾಡಬಹುದು.
ಮನೆಯಲ್ಲಿಯೇ ಇದ್ದುಕೊಂಡು ಮಾಡಬಹುದಾದ 10 ಆನ್‌ಲೈನ್ ಜಾಬ್‌ಗಳಿವು, ಲಕ್ಷಕ್ಕಿಂತ ಹೆಚ್ಚು ಆದಾಯ!
ಅನ್ನಪೂರ್ಣ ಸಾಲ ಪಡೆಯಲು ಬೇಕಾಗುವ ಅರ್ಹತೆ:
*18 ರಿಂದ 60 ವರ್ಷಗಳ ಒಳಗಿರುವ ಯಾವುದೇ ಮಹಿಳೆ ಅನ್ನಪೂರ್ಣ ಯೋಜನೆಗೆ ಅರ್ಜಿ ಸಲ್ಲಿಸಬಹುದು.
*ಈ ಯೋಜನೆಯ ಮೂಲಕ ಪಡೆಯುವ ಸಾಲವನ್ನು (Loan) 3 ವರ್ಷಗಳಲ್ಲಿ ತೀರಿಸಬೇಕು.
*ಅನ್ನಪೂರ್ಣ ಯೋಜನೆಯ Loan ನಿಮಗೆ SBI ಇಂದ ಸಿಗುತ್ತದೆ.
ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯೋದು ಹೇಗೆ? ಅದಕ್ಕೂ ಇದೆ ನಿಯಮ ಗೊತ್ತಾ?
ಆಸಕ್ತಿ ಇರುವ ಮಹಿಳೆಯರು SBI ಬ್ರಾಂಚ್ ಗೆ ಭೇಟಿ ನೀಡಿ, ಈ ಯೋಜನೆಯ ಬಗ್ಗೆ ಮಾಹಿತಿ ಪಡೆದು, ಅರ್ಜಿ ಸಲ್ಲಿಸಿ, ಅನ್ನಪೂರ್ಣ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.
New scheme for women, 50 thousand will be deposited in SBI bank account