ಮನೆಯಲ್ಲಿಯೇ ಇದ್ದುಕೊಂಡು ಮಾಡಬಹುದಾದ 10 ಆನ್‌ಲೈನ್ ಜಾಬ್‌ಗಳಿವು, ಲಕ್ಷಕ್ಕಿಂತ ಹೆಚ್ಚು ಆದಾಯ!
ಈಗ ಹಣ ಗಳಿಸುವುದಕ್ಕೆ ಹಲವು ಮಾರ್ಗಗಳಿವೆ. ಸುಲಭವಾಗಿ ಮನೆಯಿಂದಲೇ ಆನ್ಲೈನ್ ಮೂಲಕ ಯಾವೆಲ್ಲಾ ಕೆಲಸ ಮಾಡಬಹುದು ಎಂದು ಇಂದು ತಿಳಿದುಕೊಳ್ಳೋಣ
Earn Money in Online : ಹಲವು ಜನರಿಗೆ ಪಿಯುಸಿ ನಂತರ ಅಥವಾ ಡಿಗ್ರಿ ನಂತರ ಉನ್ನತ ಶಿಕ್ಷಣ ಪಡೆಯಲು ಸಾಧ್ಯ ಆಗಿರುವುದಿಲ್ಲ. ಹಾಗೆಯೇ ಹೊರಗಡೆ ಕೆಲಸಕ್ಕೆ ಹೋಗುವುದಕ್ಕೂ ಆಗುತ್ತಿರುವುದಿಲ್ಲ. ಅಂಥವರಿಗೆ ಮನೆಯಿಂದಲೇ (Work From Home) ಮಾಡಬಹುದಾದಂಥ ಕೆಲಸಗಳ ಬಗ್ಗೆ ತಿಳಿಸಲಿದ್ದೇವೆ.
ಈಗ ಹಣ ಗಳಿಸುವುದಕ್ಕೆ (Money Earning Tips) ಹಲವು ಮಾರ್ಗಗಳಿವೆ. ಸುಲಭವಾಗಿ ಮನೆಯಿಂದಲೇ ಆನ್ಲೈನ್ ಮೂಲಕ ಯಾವೆಲ್ಲಾ ಕೆಲಸ ಮಾಡಬಹುದು ಎಂದು ಇಂದು ತಿಳಿದುಕೊಳ್ಳೋಣ..
ಫ್ರೀಲ್ಯಾನ್ಸ್ ರೈಟಿಂಗ್ : ಬರವಣಿಗೆಯಲ್ಲಿ ಆಸಕ್ತಿ ಇರುವವರು ಈ ಕೆಲಸ ಶುರು ಮಾಡಬಹುದು. ಈಗ ಯಾವುದೇ ಬ್ರ್ಯಾಂಡ್ ಅಥವಾ ಬ್ಯುಸಿನೆಸ್ ಪ್ರೊಮೋಟ್ ಮಾಡಲು ಬರಹಗಳು, ಬರಹಗಾರರು ಖಂಡಿತವಾಗಿ ಬೇಕಾಗುತ್ತಾರೆ.
ಉತ್ತಮವಾಗಿ ಬರೆಯಲು ಬರುವಂಥ, ಬರವಣಿಗೆಯಲ್ಲಿ ಆಸಕ್ತಿ ಇರುವಂಥವರು ಈ ಕೆಲಸವನ್ನು ಮನೆಯಿಂದಲೇ ಶುರು ಮಾಡಬಹುದು. ಹಣ ಗಳಿಕೆಗೆ ಇದು ಒಳ್ಳೆಯ ಮಾರ್ಗ ಆಗಿದೆ. freelancewritersden.com ಈ ವೆಬ್ಸೈಟ್ ಮೂಲಕ ಫ್ರೀಲ್ಯಾನ್ಸ್ ರೈಟರ್ ಕೆಲಸ ಹುಡುಕಬಹುದು.
Translator: ಈಗ ಭಾಷಾಕಾರರಿಗೆ ಕೂಡ ಭಾರಿ ಬೇಡಿಕೆ ಇದೆ. ನಿಮ್ಮ ಮಾತೃಭಾಷೆಯ ಜೊತೆಗೆ ಬೇರೆ ಭಾಷೆಯು ಗೊತ್ತಿದ್ದರೆ, ಈ ಕೆಲಸವನ್ನು ಶುರು ಮಾಡಬಹುದು. ಇಂಗ್ಲಿಷ್ ಇಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡುವವರಿಗೆ ಇದು ಉತ್ತಮವಾದ ಕೆಲಸ ಆಗಿದೆ. ಆನ್ಲೈನ್ ನಲ್ಲಿ ಬಹಳಷ್ಟು Translator ಕೆಲಸಗಳು ಸಿಗುತ್ತದೆ.
ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಕೆಗೆ ಡೈರೆಕ್ಟ್ ಲಿಂಕ್ ಇಲ್ಲಿದೆ
ಡೇಟಾ ಎಂಟ್ರಿ ಆಪರೇಟರ್ : ಇದು ಕೂಡ ಬಹುತೇಕ ಎಲ್ಲಾ ಕಂಪನಿಗಳಲ್ಲಿ ಬೇಕಾಗುವ ಉದ್ಯೋಗ. ಕಂಟೆಂಟ್ ಕಾಪಿ, ಪೇಸ್ಟ್ ಮಾಡುವುದು., ಅದನ್ನು ಹ್ಯಾಂಡಲ್ ಮಾಡುವುದು. ಕ್ಲೈಂಟ್ ಗಳಿಗೆ ಕೊಡುವ ಫೋಟೋ ಅಥವಾ ಡಿಜಿಟಲ್ ವಿಚಾರಗಳನ್ನು ಡಾಕ್ಯುಮೆಂಟ್ ಮಾಡುವುದು. ಅಗತ್ಯವಿರುವ ಮಾಹಿತಿಗಳನ್ನು ಆನ್ಲೈನ್ ನಲ್ಲಿ ಹುಡುಕಿ ಕೊಡುವುದೇ ಈ ಕೆಲಸ ಆಗಿದೆ.
ಆನ್ಲೈನ್ ಸರ್ವೇ : ಎಲ್ಲಾ ಬ್ರ್ಯಾಂಡ್ ಕಂಪನಿಗಳು ಕೂಡ ತಮ್ಮ ಪ್ರಾಡಕ್ಟ್ ಹೇಗಿದೆ, ಜನರು ಅದನ್ನು ಖರೀದಿ ಮಾಡುತ್ತಿದ್ದಾರಾ? ಬಳಕೆ ಮಾಡುತ್ತಿದ್ದಾರಾ? ಜನರಿಗೆ ಇಷ್ಟ ಆಗಿದ್ಯಾ? ಇದೆಲ್ಲವನ್ನು ಕೂಡ ತಿಳಿಯಲು ಸರ್ವೇ ನಡೆಸುತ್ತದೆ. ಈ ಸರ್ವೇ ನಡೆಸುವ ಕೆಲಸವನ್ನು ಮನೆಯಿಂದ ಆನ್ಲೈನ್ ಮೂಲಕ ಮಾಡಬಹುದು. ಈ ಕೆಲಸಕ್ಕೆ ಕೂಡ ಟ್ರೈ ಮಾಡಬಹುದು.
ಡಿಜಿಟಲ್ ಮಾರ್ಕೆಟಿಂಗ್ (Digital Marketing): ಈ ಹಿಂದೆ ಒಂದು ಪ್ರಾಡಕ್ಟ್ ಬಗ್ಗೆ ಜಾಹೀರಾತನ್ನ ನ್ಯೂಸ ಪೇಪರ್ ಗಳಲ್ಲಿ ಕೊಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಒಂದು ಪ್ರಾಡಕ್ಟ್ ಅನ್ನು ಹಲವು ಆನ್ಲೈನ್ ಪ್ಲಾಟ್ ಫಾರ್ಮ್ ಗಳ ಮೂಲಕ ಮಾರ್ಕೆಟಿಂಗ್ ಮಾಡಲಾಗುತ್ತದೆ.
ನಿಮ್ಮ ಪ್ರಾಡಕ್ಟ್ ಬಗ್ಗೆ ವಿಡಿಯೋ ಮಾರ್ಕೆಟಿಂಗ್, ಇಮೇಲ್ ಮಾರ್ಕೆಟಿಂಗ್, ಎಸ್.ಇ.ಒ, ಎಸ್.ಇ.ಎಂ, ಕಂಟೆಂಟ್, ಇಕಾಮರ್ಸ್ ಮಾರ್ಕೆಟಿಂಗ್, ವೆಬ್ ಅನಾಲಿಸ್ಟ್, ಮೊಬೈಲ್ ಜಾಹಿರಾತು ಈ ರೀತಿ ಮಾರ್ಕೆಟಿಂಗ್ ಮಾಡುವುದಕ್ಕೆ ಹುದ್ದೆ ಇದೆ. ಈ ಕೆಲಸ ಟ್ರೈ ಮಾಡಬಹುದು.
ಪ್ರತಿ ತಿಂಗಳು ಸಿಗಲಿದೆ ₹5000 ರೂಪಾಯಿ ಪೆನ್ಶನ್! ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ವೆಬ್ ಡಿಸೈನರ್ (Web Designer): ಈಗ ಸಾಕಷ್ಟು ರೀತಿಯ ವೆಬ್ಸೈಟ್ ಗಳು ಬಂದಿವೆ, ಶಾಪಿಂಗ್ ಗೆ, ಓದುವುದಕ್ಕೆ, ಪರ್ಸನಲ್ ಬ್ಲಾಗ್ಸ್ ಹೀಗೆ ಇರುವ ವೆಬ್ಸೈಟ್ ಗಳು ಜನರ ಕಣ್ಣಿಗೆ ಹೇಗೆ ಕಾಣಿಸಬೇಕು ಎನ್ನುವುದನ್ನು ಡಿಸೈನ್ ಮಾಡುವವರೇ ವೆಬ್ ಡಿಸೈನರ್ ಗಳು.
ವೆಬ್ ಡಿಸೈನಿಂಗ್ ಸ್ಕಿಲ್ ನಿಮ್ಮಲ್ಲಿದ್ದರೆ, ಒಳ್ಳೆಯ ಕಾಂಟ್ಯಾಕ್ಟ್ ಬೆಳೆಸಿಕೊಂಡು ಹಲವು ಕಂಪನಿಗಳ ವೆಬ್ಸೈಟ್ ಡಿಸೈನ್ ಮಾಡಿಕೊಡಬಹುದು. ಮನೆಯಲ್ಲೇ ಈ ಕೆಲಸವನ್ನು ಫ್ರೀಲ್ಯಾನ್ಸಿಂಗ್ ಆಗಿ ಮಾಡಿ, ಹಣ ಗಳಿಸಬಹುದು.
ದಿನಕ್ಕೆ 20 ಲೀಟರ್ ಹಾಲು ಕೊಡುವ ಈ ತಳಿಯ ಹಸು ಖರೀದಿಗೆ ಮುಗಿಬಿದ್ದ ಜನ! ಲಕ್ಷ ಲಕ್ಷ ಆದಾಯ
ಆನ್ಲೈನ್ ಟ್ಯೂಟರ್: ಶಿಕ್ಷಣದಲ್ಲಿ ಆಸಕ್ತಿ ಇರುವವರಿಗೆ ಇದು ಉತ್ತಮವಾದ ಕೆಲಸ ಆಗಿದೆ. ನಿಮಗೆ ಯಾವುದಾದರೂ ವಿಷಯದಲ್ಲಿ ಆಸಕ್ತಿ ಇದ್ದು, ಚೆನ್ನಾಗಿ ಹೇಳಿಕೊಡಲು ಬರುತ್ತದೆ ಎಂದರೆ, ಆನ್ಲೈನ್ ಟ್ಯೂಟರ್ ಆಗಿ ಕೆಲಸ ಶುರು ಮಾಡಬಹುದು.
Tutor.com, wzant.com ಈ ವೆಬ್ಸೈಟ್ ಗಳಲ್ಲಿ ಆನ್ಲೈನ್ ಟ್ಯೂಟರ್ ಕೆಲಸ ಸಿಗುತ್ತದೆ. ಶಾಲೆಯ ಮಕ್ಕಳಿಗೆ ಅಥವಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಬಹುದು.
ಬ್ಲಾಗ್, ಪಾಡ್ ಕಾಸ್ಟ್ : ಈಗ ಹೆಚ್ಚು ಟ್ರೆಂಡಿಂಗ್ ನಲ್ಲಿರುವ ಕೆಲಸ ಇದು ಎಂದು ಹೇಳಿದರು ತಪ್ಪಲ್ಲ. ಸಾಮಾನ್ಯ ಜನರ ಸಮಸ್ಯೆಗೆ ನಿಮ್ಮ ಬ್ಲಾಗ್ ನ ವಿಡಿಯೋ ಮೂಲಕ ಪರಿಹಾರ ಕೊಡಬಹುದು. ನಿಮ್ಮ ವೆಬ್ಸೈಟ್ ಗೆ ಎಷ್ಟು ವೀಕ್ಷಣೆ ಬರುತ್ತದೆಯೋ ಅದರ ಮೇಲೆ ಗೂಗಲ್ ಇಂದ ನಿಮಗೆ ಹಣ ಸಿಗುತ್ತದೆ.
ಹಾಗೆಯೇ ನಿಮಗೆ ಫಾಲೋವರ್ಸ್ ಹೆಚ್ಚಾದಂತೆ ಕಂಪನಿಗಳು, ಹೋಟೆಲ್ ಗಳು, ಬ್ಯುಸಿನೆಸ್ ಗಳು ಇವುಗಳ ಜಾಹೀರಾತು ಪಡೆದು, ನಿಮ್ಮ ಚಾನೆಲ್ ನಲ್ಲಿ ಅವುಗಳ ಬಗ್ಗೆ ಮಾಹಿತಿ ನೀಡಿ, ಅವರಿಂದ ಹಣ ಪಡೆಯಬಹುದು.
ಸೋಶಿಯಲ್ ಮೀಡಿಯಾ ಹ್ಯಾಂಡಲಿಂಗ್ : ಸಾಕಷ್ಟು ರಾಜಕಾರಣಿಗಳು, ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಪೇಜ್ ಹೊಂದಿರುತ್ತಾರೆ. ಅವುಗಳನ್ನು ಹ್ಯಾಂಡಲ್ ಮಾಡಲು ಇನ್ಯಾರಿಗಾದರು ಕೊಡುತ್ತಾರೆ. ಕ್ರಿಯೇಟಿವ್ ಆಗಿ ಪೋಸ್ಟ್ ಮಾಡಲು ಬಂದರೆ ನೀವು ಸಹ ಈ ಕೆಲಸ ಮಾಡಬಹುದು. ಅಥವಾ ಫೇಸ್ ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೇಜ್ ಓಪನ್ ಮಾಡಿ, ಪೋಸ್ಟ್ ಮಾಡಿ ಅದರ ಮೂಲಕ ಹಣ ಗಳಿಸಬಹುದು.
ಸರ್ಚ್ ಇಂಜಿನ್ ವ್ಯಾಲ್ಯೂವೇಷನ್ : ಗೂಗಲ್ ಮತ್ತು ಬಿಂಗ್ ಈ ಥರದ ಸರ್ಚ್ ಇಂಜಿನ್ ಗಳು ತಮ್ಮ ಗ್ರಾಹಕರ ರಿವ್ಯೂ ಪಡೆಯಲು ಫೀಡ್ ಫಾರ್ಮ್ ಗಳನ್ನು ನೀಡುತ್ತದೆ, ಹಾಗೆಯೇ ಗ್ರಾಹಕರ ಅಭಿಪ್ರಾಯವನ್ನು ತಿಳಿಯುವ ಪ್ರಯತ್ನ ಕೂಡ ಮಾಡುತ್ತದೆ. ಈ ಕೆಲಸವನ್ನು ನೀವು ಮಾಡಬಹುದು. Leapforce, Lionbridge ಈ ಎರಡು ವೆಬ್ಸೈಟ್ ಗಳಲ್ಲಿ ಈ ಕೆಲಸ ಸಿಗುತ್ತದೆ.
ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ ₹60,000 ಸಂಪಾದನೆ ಮಾಡಿ, ಸ್ವಲ್ಪ ಜಾಗ ಇದ್ರೂ ಸಾಕು!
ಫೋಟೋ ಸೇಲ್ ಮಾಡಿ: ಉತ್ತಮವಾದ ಹೈ ಎಂಡ್ ಕ್ಯಾಮೆರಾಗಳು ಇದ್ದರೆ ಮಾತ್ರ ಫೋಟೋ ತೆಗೆಯುವ ಕಾಲ ಹೊರಟು ಹೋಗಿದೆ. ನಿಮ್ಮ ಹತ್ತಿರ ಒಳ್ಳೆಯ ಫೋನ್ ಇದ್ದರೆ ಸಾಕು, ಅದ್ಭುತವಾದ ಫೋಟೋ ತೆಗೆಯಬಹುದು. ಅವುಗಳನ್ನು ಆನ್ಲೈನ್ ನಲ್ಲಿ Shutterstock, Fotolia, iStock ಈ ವೆಬ್ಸೈಟ್ ಗಳಿಗೆ ಮಾರಾಟ ಮಾಡಿ ಹಣ ಗಳಿಸಬಹುದು.
ಸಿವಿ ರೈಟರ್: ಯಾವುದೇ ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ ನಿಮ್ಮ ಬಳಿ ಸಿವಿ ಇರಬೇಕು. ಹಲವರಿಗೆ ತಮ್ಮ ಸಿವಿಯನ್ನು ಆಕರ್ಷಣೀಯವಾಗಿ ಮಾಡಿಕೊಳ್ಳಲು ಬರುವುದಿಲ್ಲ. ಅಂಥವರಿಗೆ ಸಹಾಯ ಮಾಡಿ, ಸಿವಿ ತಯಾರಿಸಿಕೊಡುವ ಕೆಲಸ ಇದು. ResumeEdge.com ಈ ವೆಬ್ಸೈಟ್ ನಲ್ಲಿ ನಿಮಗೆ ಸಿವಿ ರೈಟರ್ ಕೆಲಸ ಸಿಗುತ್ತದೆ. ಈ ಕೆಲಸ ಮಾಡುವ ಮೂಲಕ ಉತ್ತಮವಾಗಿ ಹಣ ಗಳಿಸಬಹುದು.
Online Earning Jobs, Make Money Online by work From Home