ಪ್ರತಿ ತಿಂಗಳು ಸಿಗಲಿದೆ ₹5000 ರೂಪಾಯಿ ಪೆನ್ಶನ್! ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
Pension Scheme : ಪೆನ್ಶನ್ ಯೋಜನೆಯಲ್ಲಿ ₹5000 ರೂಪಾಯಿ ಪೆನ್ಶನ್ ಹಿರಿಯರಿಗೆ ಪ್ರತಿ ತಿಂಗಳು ಸಿಗಲಿದ್ದು, ಈ ಒಂದು ಯೋಜನೆ ಯಾವುದು? ಎಲ್ಲಾ ಹಿರಿಯರು ಈ ಸೌಲಭ್ಯ ಪಡೆಯುವುದು ಹೇಗೆ?
Pension Scheme : ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿ ಎಲ್ಲಾ ವಯೋಮಾನದವರಿಗೂ ಸರಿಹೊಂದುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಿರಿಯರಿಗಾಗಿ ಜಾರಿಗೆ ಬಂದಿರುವ ಪೆನ್ಶನ್ ಯೋಜನೆಗಳು ಸಹ ಸಾಕಷ್ಟಿದೆ.
ಅವುಗಳ ಪೈಕಿ ಒಂದು ಪೆನ್ಶನ್ ಯೋಜನೆಯಲ್ಲಿ ₹5000 ರೂಪಾಯಿ ಪೆನ್ಶನ್ ಹಿರಿಯರಿಗೆ ಪ್ರತಿ ತಿಂಗಳು ಸಿಗಲಿದ್ದು, ಈ ಒಂದು ಯೋಜನೆ ಯಾವುದು? ಎಲ್ಲಾ ಹಿರಿಯರು ಈ ಸೌಲಭ್ಯ ಪಡೆಯುವುದು ಹೇಗೆ? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..
ದಿನಕ್ಕೆ 20 ಲೀಟರ್ ಹಾಲು ಕೊಡುವ ಈ ತಳಿಯ ಹಸು ಖರೀದಿಗೆ ಮುಗಿಬಿದ್ದ ಜನ! ಲಕ್ಷ ಲಕ್ಷ ಆದಾಯ
ಅಟಲ್ ಪೆನ್ಶನ್ ಯೋಜನೆ:
ಇದು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಬದುಕಿಗೆ ವೃದ್ಧಾಪ್ಯದಲ್ಲಿ ಸಹಾಯ ಮಾಡುವುದಕ್ಕೆ ಜಾರಿಗೆ ಬಂದಿರುವ ಯೋಜನೆ ಆಗಿದೆ. 18 ರಿಂದ 40 ವರ್ಷಗಳ ಒಳಗೆ ಇರುವವರು ಅರ್ಜಿ ಸಲ್ಲಿಸಬಹುದು.
ಕಾರ್ಮಿಕರ ಬದುಕಿಗೆ ವಿಮೆಯ (Insurance) ರೀತಿಯಲ್ಲಿ ಸಹ ಈ ಯೋಜನೆ ಕೆಲಸ ಮಾಡುತ್ತದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಸಣ್ಣ ಕಾರ್ಮಿಕರು, ಮತ್ತು ಸಣ್ಣ ವ್ಯಾಪಾರಿಗಳು ಈ ಪೆನ್ಶನ್ ಯೋಜನೆಯ (Pension) ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ ₹60,000 ಸಂಪಾದನೆ ಮಾಡಿ, ಸ್ವಲ್ಪ ಜಾಗ ಇದ್ರೂ ಸಾಕು!
ಅಟಲ್ ಪೆನ್ಶನ್ ಯೋಜನೆಯ ರೂಲ್ಸ್:
*ಅಟಲ್ ಪೆನ್ಶನ್ ಯೋಜನೆಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಬಹುದಾದ ಕನಿಷ್ಠ ಪ್ರೀಮಿಯಂ ಮೊತ್ತ ₹210 ರೂಪಾಯಿ ಆಗಿರುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ತಿಂಗಳಿಗೆ ₹5000 ಬರಲಿದ್ದು, ಕಾರ್ಮಿಕರು ವರ್ಷಕ್ಕೆ ₹60,000 ಪೆನ್ಶನ್ ಪಡೆಯಬಹುದು.
*18 ವಯಸ್ಸಿನ ವ್ಯಕ್ತಿ ತನಗೆ 60 ವರ್ಷವಾದ ಬಳಿಕ ಪ್ರತಿ ತಿಂಗಳು ₹5000 ಬರಬೇಕು ಎಂದರೆ, ಅಂಥವರು ಪ್ರತಿ ತಿಂಗಳು ₹210 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಬರಬೇಕು.
*ಈ ಯೋಜನೆಯಲ್ಲಿ ತ್ರೈಮಾಸಿವಾಗಿ ಸಹ ಹೂಡಿಕೆ ಮಾಡಬಹುದು, ಅದಕ್ಕಾಗಿ ₹626 ರೂಪಾಯಿಗಳನ್ನು ಪಾವತಿ ಮಾಡಬೇಕು.
*ಅರ್ಧ ವಾರ್ಷಿಕಕ್ಕೆ ಪಾವತಿ ಮಾಡುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ, ₹1,239 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.
*60 ವರ್ಷಗಳ ನಂತರ ನಿಮಗೆ ತಿಂಗಳಿಗೆ ₹1000 ಪೆನ್ಶನ್ ಸಾಕು ಎಂದರೆ, 18ನೇ ವಯಸ್ಸಿನಲ್ಲಿ ತಿಂಗಳಿಗೆ ₹42 ರೂಪಾಯಿ ಹೂಡಿಕೆ ಮಾಡಲು ಶುರು ಮಾಡಿದರೆ ಸಾಕು.
*ಈ ಯೋಜನೆಯಲ್ಲಿ ನಿಮ್ಮ ಅನುಕೂಲಕ್ಕೆ ಅನುಸಾರ 60 ವರ್ಷಗಳ ನಂತರ ಪ್ರತಿ ತಿಂಗಳು 1000, 2000, 3000, 4000 ಮತ್ತು 5000 ಪೆನ್ಶನ್ ಬರುವ ಹಾಗೆ ಪ್ಲಾನ್ ಗಳಿದ್ದು, ನೀವು ಪಾವತಿ ಮಾಡಬಹುದಾದ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯೋದು ಹೇಗೆ? ಅದಕ್ಕೂ ಇದೆ ನಿಯಮ ಗೊತ್ತಾ?
ಅರ್ಹತೆಗಳು:
*ಅಟಲ್ ಪೆನ್ಶನ್ ಸ್ಕೀಮ್ ಗೆ ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 40 ವರ್ಷಗಳ ಒಳಗಿರಬೇಕು
*60ನೇ ವಯಸ್ಸಿನಿಂದ ಪೆನ್ಶನ್ ಬರುವುದಕ್ಕೆ ಶುರುವಾಗುತ್ತದೆ.
*ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಇಂದ ಪ್ರತಿ ತಿಂಗಳು ಈ ಪೆನ್ಶನ್ ಮೊತ್ತ ಆಟೋ ಡೆಬಿಟ್ ಆಗುವ ಹಾಗೆ ನೋಡಿಕೊಳ್ಳಬೇಕು. ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ರೀತಿಯಲ್ಲಿ ಹೂಡಿಕೆ ಮಾಡಬಹುದು.
*ಈ ಯೋಜನೆಯ ಸೌಲಭ್ಯ ಪಡೆಯುವವರು 60 ವರ್ಷ ಆಗುವವರೆಗೂ ನಿರ್ದಿಷ್ಟ ಮೊತ್ತ ಪಾವತಿ ಮಾಡಬೇಕು.
In this scheme of the central government, you will get a pension of 5000 every month