ದಿನಕ್ಕೆ 20 ಲೀಟರ್ ಹಾಲು ಕೊಡುವ ಈ ತಳಿಯ ಹಸು ಖರೀದಿಗೆ ಮುಗಿಬಿದ್ದ ಜನ! ಲಕ್ಷ ಲಕ್ಷ ಆದಾಯ

Story Highlights

ದೇಸಿ ಹಸು ದಿನಕ್ಕೆ 3-4 ಲೀಟರ್ ಹಾಲು ಕೊಡುತ್ತದೆ, ಆದರೆ ಜರ್ಸಿ ಹಸು ದಿನಕ್ಕೆ 15-20 ಲೀಟರ್ ಹಾಲು ಕೊಡುತ್ತದೆ.

Jersey Cow Farming : ಹಳ್ಳಿಯಲ್ಲೇ ಇದ್ದುಕೊಂಡು ಯಾರಾದರೂ ಹೊಸ ಉದ್ಯಮ ಶುರು ಮಾಡಬೇಕು, ಅದರಿಂದ ಒಳ್ಳೆಯ ಲಾಭ ಪಡೆಯಬೇಕು ಎಂದುಕೊಂಡರೆ ಅದಕ್ಕೆ ಉತ್ತಮವಾದ ಆಯ್ಕೆ ಪಶುಸಂಗೋಪನೆ.

ಇದರಲ್ಲಿ ಲಾಭ ಹೇಗೆ ಮಾಡಬೇಕು ಎನ್ನುವುದನ್ನು ನೀವು ಚೆನ್ನಾಗಿ ತಿಳಿದುಕೊಂಡಿರಬೇಕು. ಹಾಗೆಯೇ ಪಶು ಸಂಗೋಪನೆಯಲ್ಲಿ ನೀವು ಯಾವ ತಳಿಯ ಹಸು ಬಳಕೆ ಮಾಡುತ್ತೀರಿ ಎನ್ನುವುದರ ಮೇಲೆ ನಿಮ್ಮ ಲಾಭ (Income) ನಿಗದಿ ಆಗುತ್ತದೆ. ಹಾಗಿದ್ದಲ್ಲಿ ಯಾವ ತಳಿಯ ಹಸು ಸೂಕ್ತ? ಇಂದು ತಿಳಿಯೋಣ..

ಹಸುಗಳು ನಿಮಗೆ ಹೆಚ್ಚಿನ ಮಟ್ಟದಲ್ಲಿ ಹಾಲು (Milk) ಕೊಡಬೇಕು, ಅಂಥ ಹಸುಗಳು ಮಾತ್ರ ನಿಮಗೆ ಲಾಭ ತಂದುಕೊಡಲು ಸಾಧ್ಯ. ಹೀಗೆ ಉತ್ತಮವಾದ ತಳಿಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಸಾಕುವುದಕ್ಕೆ ಶುರು ಮಾಡುವುದರ ಜೊತೆಗೆ ಆ ಹಸುಗಳಿಗೆ ಉತ್ತಮವಾದ, ಪೌಷ್ಟಿಕ ಆಹಾರವನ್ನು ನೀಡಿ, ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು.

ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ ₹60,000 ಸಂಪಾದನೆ ಮಾಡಿ, ಸ್ವಲ್ಪ ಜಾಗ ಇದ್ರೂ ಸಾಕು!

ಹಸುಗಳನ್ನು ಉತ್ತಮವಾಗಿ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಚೆನ್ನಾಗಿ ನೋಡಿಕೊಂಡರೆ ಮಾತ್ರ ನಿಮಗೆ ಹೆಚ್ಚಿನ ಹಾಲು ಸಿಗುತ್ತದೆ. ಜೊತೆಗೆ ಈ ತಳಿ ಇತರ ಹಸುಗಿಂತ ಯಾವ ರೀತಿ ಬೇರೆಯಾಗಿದೆ ಎಂದು ಗೊತ್ತಿರಬೇಕು.

ಎರಡು ಬೇರೆ ತಳಿಯ ಹಸುಗಳು:

ಪಶು ಸಂಗೋಪನೆಯನ್ನು ಹಳ್ಳಿಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲಿ ಕೂಡ ಮಾಡುತ್ತಾರೆ. ಇಲ್ಲಿ ನಾವು ಎರಡು ಬಗೆಯ ಹಸುವಿನ ತಳಿಗಳನ್ನು ನೋಡಬಹುದು. ಒಂದು ದೇಸಿ ಹಸು ಮತ್ತು ಜರ್ಸಿ ಹಸು.

ಇವೆರಡು ಬೇರೆ ಬೇರೆ ತಳಿಗಳು, ನಮ್ಮ ದೇಶದ ಹಸುಗಳನ್ನು ದೇಸಿ ಹಸು ಎನ್ನುತ್ತಾರೆ, ಈ ಹಸುಗಳು ಬಾಶ್ ಇಂಡಿಕಾಸ್ ವರ್ಗಕ್ಕೆ ಸೇರುತ್ತದೆ. ಈ ಹಸುಗಳ ಬಣ್ಣ ಒಂದು ಬಣ್ಣ ಅಥವಾ ಎರಡು ಬಣ್ಣ ಇರುತ್ತದೆ. ದೇಸಿ ಹಸುಗಳಿಗೆ ಉದ್ದ ಕೊಂಬು ಮತ್ತು ಉದ್ದ ಗೋಣು ಇರುತ್ತದೆ. ಇವುಗಳ ದೇಹ ಜರ್ಸಿ ಹಸುಗಿಂತ ಚಿಕ್ಕದು.

ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯೋದು ಹೇಗೆ? ಅದಕ್ಕೂ ಇದೆ ನಿಯಮ ಗೊತ್ತಾ?

Jersey Cow Farmingಜರ್ಸಿ ಹಸು:

ವಿದೇಶದಿಂದ ತರುವಂಥ ಹಸುಗಳನ್ನು ಜರ್ಸಿ ಹಸು (Jersey Cow) ಎಂದು ಕರೆಯುತ್ತಾರೆ. ಇವುಗಳು ಸೇರುವುದು ಬಾಶ್ ಟಾರಸ್ ಎನ್ನುವ ವರ್ಗಕ್ಕೆ. ಇವುಗಳು ಬ್ರಿಟನ್ ನ ಜರ್ಸಿ ದ್ವೀಪಕ್ಕೆ ಸೇರಿದ ಹಸುಗಳಾದ ಕಾರಣ ಜರ್ಸಿ ಹಸು ಎನ್ನುತ್ತಾರೆ.

ಈ ಹಸುಗಳು ಬಿಳಿ ಬಣ್ಣ ಅಥವಾ ತಿಳಿ ಹಳದಿ ಬಣ್ಣದ ಹಸುಗಳಾಗಿದ್ದು, ಅವುಗಳ ಮೇಲೆ ಕಪ್ಪು ಬಣ್ಣದ ಚುಕ್ಕಿಗಳು ಇರುತ್ತದೆ. ಕಂದು ಬಣ್ಣದಲ್ಲಿ ಕೂಡ ಈ ಹಸುಗಳನ್ನು ನೋಡಬಹುದು. ಈ ಹಸುಗಳಿಗೆ ತಲೆ, ಭುಜ, ಕೊಂಬು ಎಲ್ಲವೂ ಒಂದೇ ಸಾಲಿನ ಹಾಗೆ ಇರುವುದನ್ನು ಕಾಣಬಹುದು. ಈ ಹಸುವಿನ ಗಾತ್ರ ದಪ್ಪ ಮತ್ತು ಇವು ಎತ್ತರ ಕೂಡ ಇರುತ್ತದೆ.

ಚಿನ್ನದ ಬೆಲೆ ಕೊಂಚ ಏರಿಕೆ, ಈ ವಾರ ಇನ್ನಷ್ಟು ಏರುಪೇರಾಗಲಿದೆಯಂತೆ ಚಿನ್ನ ಮತ್ತು ಬೆಳ್ಳಿ ಬೆಲೆ! ಇಲ್ಲಿದೆ ಡೀಟೇಲ್ಸ್

ಯಾವ ಹಸು ಒಳ್ಳೆಯದು:

ಹೆಚ್ಚಿನ ಹಾಲು ಕೊಡುವ ಹಸು ಎಂದು ನೋಡುವುದಾದರೆ ಜರ್ಸಿ ಹಸು ಒಳ್ಳೆಯ ಆಯ್ಕೆ. ಜರ್ಸಿ ಹಸುಗಳು 18 ರಿಂದ 24 ತಿಂಗಳ ಅವಧಿಯಲ್ಲಿ ಕರುವಿಗೆ ಜನ್ಮ ನೀಡುತ್ತದೆ. ಆದರೆ ಜಾಸ್ತಿ ಕರುಗಳಿಗೆ ಇವು ಜನ್ಮ ಕೊಡಲು ಆಗುವುದಿಲ್ಲ. ದೇಸಿ ಹಸು 30 ರಿಂದ 36 ಕರುಗಳಿಗೆ ಜನ್ಮ ಕೊಡುತ್ತದೆ, ಆದರೆ ಜರ್ಸಿ ಹಸುಗಳು 10 ರಿಂದ 15 ಕರುಗಳಿಗೆ ಜನ್ಮ ಕೊಡುತ್ತದೆ. ದೇಸಿ ಹಸು ದಿನಕ್ಕೆ 3-4 ಲೀಟರ್ ಹಾಲು ಕೊಡುತ್ತದೆ, ಆದರೆ ಜರ್ಸಿ ಹಸು ದಿನಕ್ಕೆ 15-20 ಲೀಟರ್ ಹಾಲು ಕೊಡುತ್ತದೆ.

ಈ ಕಾರಣಕ್ಕೆ ಜರ್ಸಿ ಹಸುವನ್ನು ಖರೀದಿಸಿದರೆ, ತಿಂಗಳಿಗೆ 1 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಬಹುದು. ಇಲ್ಲಿ ನೀವು ಗಮನಿಸಬೇಕಾದ ವಿಚಾರ ಏನು ಎಂದರೆ, ದೇಸಿ ಹಸುಗಳನ್ನು ಹೆಚ್ಚು ಮುತುವರ್ಜಿ ವಹಿಸಿ ನೋಡಿಕೊಳ್ಳುವ ಅಗತ್ಯವಿಲ್ಲ. ಆದರೆ ಜರ್ಸಿ ಹಸುಗಳನ್ನು ತುಂಬಾ ಹುಷಾರಾಗಿ ನೋಡಿಕೊಳ್ಳಬೇಕು.

This breed of cow gives 20 liters of milk per day and earns lakhs of lakhs of income

Related Stories