ಬ್ಯಾಂಕ್ ಅಕೌಂಟ್ ಈಗ ಭಾರತ ನಾಗರೀಕರ ಬಳಿ ಇರಲೇಬೇಕಾದ ಮುಖ್ಯವಾದ ದಾಖಲೆ ಎಂದರೆ ತಪ್ಪಲ್ಲ. ಹಣಕಾಸಿನ ವ್ಯವಹಾರಗಳು ನಂಬಿಕೆಯಿಂದ, ಉತ್ತಮವಾಗಿ ನಡೆಯಬೇಕು ಎಂದರೆ ಅದಕ್ಕೆ ಬ್ಯಾಂಕ್ ಅಕೌಂಟ್ (Bank Account) ಮುಖ್ಯ.

ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲಾ ವಯೋಮಾನದವರ ಬಳಿ ಬ್ಯಾಂಕ್ ಅಕೌಂಟ್ ಇರುತ್ತದೆ. ಬ್ಯಾಂಕ್ ಅಕೌಂಟ್ ಹೊಂದಿರುವವರು, ಬ್ಯಾಂಕ್ ನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಹಾಗೆಯೇ ಬ್ಯಾಂಕ್ ನೀಡುವ ಎಚ್ಚರಿಕೆಯ ಕ್ರಮಗಳ ಬಗ್ಗೆ ಕೂಡ ತಿಳಿದುಕೊಂಡಿರಬೇಕು..

If there is no nominee name in the bank account, what happens to the money if the person holding the account dies

ಈಗ ವಿದ್ಯಾರ್ಥಿಗಳ ಸ್ಕಾಲರ್ಶಿಪ್ (Education Scholarship) ಮೊತ್ತ ಬರುವುದು ಬ್ಯಾಂಕ್ ಅಕೌಂಟ್ ಗೆ, ಕೆಲಸ ಮಾಡುವವರಿಗೆ ಸಂಬಳ ಬರುವುದು ಬ್ಯಾಂಕ್ ಅಕೌಂಟ್ ಗೆ, ಹಿರಿಯರಿಗೆ ಪೆನ್ಶನ್ ಹಣ (Pension Money) ಬರುವುದು ಕೂಡ ಬ್ಯಾಂಕ್ ಅಕೌಂಟ್ ಗೆ. ಹಾಗಾಗಿ ಬ್ಯಾಂಕ್ ಅಕೌಂಟ್ ಎಲ್ಲಾ ವಯೋಮಾನದವರಿಗೂ ಮುಖ್ಯ.

ಚಿನ್ನದ ಬೆಲೆ ಕೊಂಚ ಏರಿಕೆ, ಈ ವಾರ ಇನ್ನಷ್ಟು ಏರುಪೇರಾಗಲಿದೆಯಂತೆ ಚಿನ್ನ ಮತ್ತು ಬೆಳ್ಳಿ ಬೆಲೆ! ಇಲ್ಲಿದೆ ಡೀಟೇಲ್ಸ್

ಬ್ಯಾಂಕ್ ನಿಯಮಗಳನ್ನು (Bank Rules) ನಾವು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯ, ಒಂದು ವೇಳೆ ವಯಸ್ಸಾದವರು ಮನೆಯಲ್ಲಿದ್ದು, ಅವರ ಮೃತರಾದರೆ ಅವರ ಬ್ಯಾಂಕ್ ಖಾತೆಯಿಂದ ಹಣ ಪಡೆದುಕೊಳ್ಳುವುದು ಹೇಗೆ? ಇದರ ಬಗ್ಗೆ ಇಂದು ತಿಳಿದುಕೊಳ್ಳೋಣ..

ಬ್ಯಾಂಕ್ ನಿಯಮ ಇದು:

ಒಂದು ವೇಳೆ ಬ್ಯಾಂಕ್ ಅಕೌಂಟ್ ಇದ್ದು, ಅದರಲ್ಲಿ ಹಣವು ಇರುವ ವ್ಯಕ್ತಿ ಮರಣ ಹೊಂದಿದರೆ, ಅವರ ಅಕೌಂಟ್ ಇಂದ ಹಣ ಪಡೆಯುವುದು ಹೇಗೆ ಎಂದು ಹಲವರಿಗೆ ಗೊತ್ತಿರುವುದಿಲ್ಲ. ಸಾಕಷ್ಟು ಜನ ಅವರ ಎಟಿಎಮ್ ಕಾರ್ಡ್ (ATM Card) ಬಳಸಿ ಹಣ ಪಡೆಯಬಹುದು ಎಂದುಕೊಳ್ಳುವುದುಂಟು. ಆದರೆ ಇದು ಸರಿಯಾದ ಮಾರ್ಗವಲ್ಲ.

ಈ ರೀತಿ ಮಾಡಿದರೆ ಬ್ಯಾಂಕ್ ನಿಯಮ ಉಲ್ಲಂಘನೆ ಮಾಡಿದ ಹಾಗೆ ಆಗುತ್ತದೆ. ಮೃತ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು 2 ವಿಧಾನವನ್ನು ಬ್ಯಾಂಕ್ ತಿಳಿಸಿದೆ.. ಅವುಗಳನ್ನು ಎಲ್ಲರೂ ಪಾಲಿಸಬೇಕು.

ಈ ಕಾರ್ಡ್ ಇದ್ರೆ ಸಿಗುತ್ತೆ 10 ಲಕ್ಷ ಲೋನ್! ಆಧಾರ್ ಅಲ್ಲ, ಪ್ಯಾನ್ ಕಾರ್ಡ್ ಅಲ್ಲ; ಯಾವ ಕಾರ್ಡ್ ಗೊತ್ತಾ?

Bank Accountನಾಮಿನಿ ಹಣವನ್ನು ಪಡೆಯಬಹುದು:

ಬ್ಯಾಂಕ್ ಅಕೌಂಟ್ ತೆರದಿರುವ ವ್ಯಕ್ತಿ ನಾಮಿನಿಯ ಹೆಸರನ್ನು ತಿಳಿಸಿರಬೇಕು. ನಾಮಿನಿಯ ಆಧಾರ್ ಕಾರ್ಡ್ ಕೊಟ್ಟು, ಆ ವ್ಯಕ್ತಿಯನ್ನು ನಾಮಿನಿಯನ್ನಾಗಿ ಮಾಡಿದ್ದರೆ, ಅಕೌಂಟ್ ಹೊಂದಿರುವ ವ್ಯಕ್ತಿ ಮರಣ ಹೊಂದಿದರೆ, ನಾಮಿನಿ ಆದವರು ಸುಲಭವಾಗಿ ಅಕೌಂಟ್ ನಲ್ಲಿರುವ ಹಣ ಪಡೆಯಬಹುದು.

ನಾಮಿನಿ ಆಗಿರುವ ವ್ಯಕ್ತಿ ತಮ್ಮ ಆಧಾರ್ ಕಾರ್ಡ್ (Aadhaar Card) ಜೊತೆಗೆ ಮರಣ ಹೊಂದಿದ ವ್ಯಕ್ತಿಯ ಆಧಾರ್ ಕಾರ್ಡ್ ತೆಗೆದುಕೊಂಡು ಹೋದರೆ ಅಕೌಂಟ್ ನಲ್ಲಿರುವ ಹಣ ಪಡೆಯಬಹುದು. ಜಾಯಿಂಟ್ ಅಕೌಂಟ್ ಹೊಂದಿರುವವರು ಸಿಂಗಲ್ ಅಕೌಂಟ್ ಆಗಿ ಮಾಡಿಸಲು ಕೂಡ ಇದೇ ರೀತಿ ಮಾಡಬೇಕು.

ಈ ಕಾರ್ಡ್ ಇದ್ರೆ ಸಿಗುತ್ತೆ 10 ಲಕ್ಷ ಲೋನ್! ಆಧಾರ್ ಅಲ್ಲ, ಪ್ಯಾನ್ ಕಾರ್ಡ್ ಅಲ್ಲ; ಯಾವ ಕಾರ್ಡ್ ಗೊತ್ತಾ?

ಒಂದು ಮೃತವಾಗಿರುವ ವ್ಯಕ್ತಿ ಯಾರನ್ನು ಕೂಡ ನಾಮಿನಿ ಮಾಡಿಲ್ಲ ಎಂದರೆ, ಆಗ ಆತನ ಅಕೌಂಟ್ ನಲ್ಲಿರುವ ಹಣವನ್ನು ನೀಡಲು ಅವರ ಕುಟುಂಬದ ವಂಶವೃಕ್ಷ ಬೇಕಾಗುತ್ತದೆ. ಮತ್ತು ಅವರ ಆಧಾರ್ ಕಾರ್ಡ್ ಬೇಕಾಗುತ್ತದೆ.

ಮರಣ ಹೊಂದಿರುವ ವ್ಯಕ್ತಿಯ ಆಧಾರ್ ಕಾರ್ಡ್, ಅವರ ಮಕ್ಕಳ ಆಧಾರ್ ಕಾರ್ಡ್, ಬ್ಯಾಂಕ್ ಡೀಟೇಲ್ಸ್, ಡೆತ್ ಸರ್ಟಿಫಿಕೇಟ್ ಈ ಎಲ್ಲಾ ದಾಖಲೆಗಳನ್ನು ಬ್ಯಾಂಕ್ ಗೆ ಕೊಟ್ಟು, ಮರಣ ಹೊಂದಿದ ವ್ಯಕ್ತಿಯ ಫ್ಯಾಮಿಲಿ ಅರ್ಜಿ ಸಲ್ಲಿಸಿ, ಬಳಿಕ ಅಕೌಂಟ್ ನಲ್ಲಿರುವ ಹಣವನ್ನು ಪಡೆದುಕೊಳ್ಳಬಹುದು.

How to withdraw money from dead person’s bank account