ಸ್ಟೇಟ್ ಬ್ಯಾಂಕ್‌ನಲ್ಲಿ 2 ವರ್ಷಕ್ಕೆ 5 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
SBI Fixed Deposit : SBI ನ ಈ FD ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಕೈತುಂಬಾ ಹಣ! ಇನ್ಯಾಕೆ ತಡ, ಇವತ್ತೇ ಹೂಡಿಕೆ ಶುರು ಮಾಡಿ
SBI Fixed Deposit : ನಮ್ಮ ಮುಂದಿನ ಭವಿಷ್ಯ ಚೆನ್ನಾಗಿರಬೇಕು ಎಂದರೆ ಈಗಿನಿಂದಲೇ ಹಣ ಉಳಿತಾಯ ಮಾಡುವುದಕ್ಕೆ ಶುರು ಮಾಡುವುದು ಒಳ್ಳೆಯದು. ಈಗಿನಿಂದ ಮಾಡುವ ಹೂಡಿಕೆ ಮುಂದೆ ಒಳ್ಳೆಯ ಲಾಭ ತಂದುಕೊಡುತ್ತದೆ.
ಹಣವನ್ನು ಉಳಿಸಿ, ಹೂಡಿಕೆ ಮಾಡಲು ಬ್ಯಾಂಕ್ FD ಯೋಜನೆಗಳು ಒಳ್ಳೆಯ ಆಯ್ಕೆ ಎಂದರೆ ತಪ್ಪಲ್ಲ. ನಮ್ಮ ದೇಶದಲ್ಲಿ ರಾಷ್ಟ್ರೀಕೃತವಾಗಿರುವ ಸಾಕಷ್ಟು ಬ್ಯಾಂಕ್ ಗಳಿವೆ, ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ ವಿವಿಧ FD ಯೋಜನೆಗಳು ಕೂಡ ಲಭ್ಯವಿದೆ..
ಅವುಗಳ ಪೈಕಿ SBI ಯೋಜನೆಗಳ ಬಗ್ಗೆ ಇಂದು ತಿಳಿಯೋಣ.. ದೇಶದಲ್ಲಿ ಹೆಚ್ಚಿನ ಜನರ ನಂಬಿಕೆಯನ್ನು ಮತ್ತು ವಿಶ್ವಾಸವನ್ನು ಗಳಿಸಿ, ಉತ್ತಮವಾದ ಸೇವೆ ನೀಡುತ್ತಿರುವ ಬ್ಯಾಂಕ್ ಗಳಲ್ಲಿ SBI ಪ್ರಮುಖವಾದ ಸ್ಥಾನದಲ್ಲಿ ನಿಲ್ಲುತ್ತದೆ.
ಮನೆಯಲ್ಲಿಯೇ ಇದ್ದುಕೊಂಡು ಮಾಡಬಹುದಾದ 10 ಆನ್‌ಲೈನ್ ಜಾಬ್‌ಗಳಿವು, ಲಕ್ಷಕ್ಕಿಂತ ಹೆಚ್ಚು ಆದಾಯ!
ಹೀಗಿರುವಾಗ ಜನರು ಕೂಡ ಈ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಆಸಕ್ತಿ ತೋರಿಸುತ್ತಾರೆ. SBI ನಲ್ಲಿ ಸ್ಥಿರ ಠೇವಣಿ ಅಂದರೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಮಾಡುವುದಕ್ಕೆ ಬಹಳಷ್ಟು ಆಯ್ಕೆಗಳನ್ನು ನಾವು ನೋಡಬಹುದು.
ಇವುಗಳ ಪೈಕಿ ಇಂದು ಒಂದು ಪ್ಲಾನ್ ನ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ಒಂದು FD ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ಉತ್ತಮವಾದ ಬಡ್ಡಿದರ, ಒಳ್ಳೆಯ ರಿಟರ್ನ್ಸ್ ಪಡೆಯುತ್ತೀರಿ. ಅಷ್ಟಕ್ಕೂ ಈ ಯೋಜನೆ ಯಾವುದು? ಈ FD ಯೋಜನೆಗೆ ಸಿಗುವ ಬಡ್ಡಿದರ ಎಷ್ಟು? ಮೆಚ್ಯುರಿಟಿ ವೇಳೆಗೆ ಎಷ್ಟು ರಿಟರ್ನ್ಸ್ ಬರುತ್ತದೆ. ಎಲ್ಲವನ್ನು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..
ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಕೆಗೆ ಡೈರೆಕ್ಟ್ ಲಿಂಕ್ ಇಲ್ಲಿದೆ
2 ವರ್ಷದ SBI FD ಯೋಜನೆ:
SBI ನ FD ಯೋಜನೆಗಳಿಗೆ ಒಳ್ಳೆಯ ರಿಟರ್ನ್ಸ್ ಮತ್ತು ಬಡ್ಡಿದರ ಸಿಗುತ್ತದೆ. ಇಲ್ಲಿನ FD ಯೋಜನೆಯಲ್ಲಿ 1 ವರ್ಷದ ಹೂಡಿಕೆಯ ಪ್ಲಾನ್ ಆಯ್ಕೆ ಮಾಡಿಕೊಂಡರೆ, ಅದಕ್ಕೆ 6.9% ಬಡ್ಡಿದರ ಬೀಳುತ್ತದೆ. ಒಂದು ವರ್ಷದ FD ಯೋಜನೆಯ ಹೂಡಿಕೆಯಲ್ಲಿ 5 ಲಕ್ಷ ರೂಪಾಯಿಗಳನ್ನು ನೀವು ಇನ್ವೆಸ್ಟ್ ಮಾಡಿದರೆ, ₹35,403 ರೂಪಾಯಿ ಬಡ್ಡಿ ರೂಪದಲ್ಲಿ ಸಿಗುತ್ತದೆ. 5 ವರ್ಷಗಳ ಬಳಿಕ ₹5,35,403 ರೂಪಾಯಿಗಳನ್ನು ರಿಟರ್ನ್ಸ್ ಆಗಿ ಪಡೆಯುತ್ತೀರಿ. ಒಂದು ವರ್ಷದ FD ಗೆ ಸಿಗುವ ರಿಟರ್ನ್ಸ್ ಇಷ್ಟು..
ಪ್ರತಿ ತಿಂಗಳು ಸಿಗಲಿದೆ ₹5000 ರೂಪಾಯಿ ಪೆನ್ಶನ್! ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಇದೇ 5 ಲಕ್ಷ ರೂಪಾಯಿಗಳನ್ನು SBI ನ 2 ವರ್ಷಗಳ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅದಕ್ಕಿಂತ ಹೆಚ್ಚಿನ ಲಾಭ ಸಿಗುತ್ತದೆ. 2 ವರ್ಷಗಳ ಅವಧಿಗೆ 6.9% ಬಡ್ಡಿದರಲ್ಲಿ ₹74,441 ರೂಪಾಯಿಗಳು ಬಡ್ಡಿ ಮೊತ್ತವಾಗಿ ಸಿಗುತ್ತದೆ. 2 ವರ್ಷಗಳ ನಂತರ ಮೆಚ್ಯುರಿಟಿ ವೇಳೆಗೆ ನೀವು ₹5,74,441 ರೂಪಾಯಿಗಳನ್ನು ಪಡೆಯುತ್ತೀರಿ. ಇದೇ 5 ಲಕ್ಷ ರೂಪಾಯಿಗಳನ್ನು ಒಂದೇ ಬಾರಿ ಇನ್ವೆಸ್ಟ್ ಮಾಡಿ, 5 ವರ್ಷಗಳ ಅವಧಿಗೆ FD ಮಾಡಿದರೆ, ಇನ್ನು ಹೆಚ್ಚಿನ ಲಾಭ ನಿಮ್ಮದಾಗುತ್ತದೆ..
ಈ 5 ವರ್ಷಗಳ ಠೇವಣಿಗೆ 7.5% ಬಡ್ಡಿದರ ಬೀಳುತ್ತದೆ. ಇದರ ಅನುಸಾರ 5 ವರ್ಷಗಳಲ್ಲಿ ₹2,24,974 ರೂಪಾಯಿಗಳನ್ನು ಬಡ್ಡಿ ಮೊತ್ತವಾಗಿ ಪಡೆಯುತ್ತೀರಿ. 5 ವರ್ಷಗಳ ಅವಧಿಯ ನಂತರ ನಿಮ್ಮ ಕೈಗೆ ₹7,24,974 ರೂಪಾಯಿ ಬರುತ್ತದೆ.
ಇಷ್ಟೆಲ್ಲಾ ಲಾಭಗಳು SBI FD ಯೋಜನೆಯಲ್ಲಿ ಸಿಗಲಿದ್ದು, ಇಂದೇ SBI ಗೆ ಭೇಟಿ ನೀಡಿ, FD ಯೋಜನೆಯಲ್ಲಿ ಹೂಡಿಕೆ ಮಾಡಿ.
ಎಟಿಎಂ ಫ್ರಾಂಚೈಸಿ ಶುರು ಮಾಡಿ ತಿಂಗಳಿಗೆ ₹60,000 ಸಂಪಾದನೆ ಮಾಡಿ, ಸ್ವಲ್ಪ ಜಾಗ ಇದ್ರೂ ಸಾಕು!
interest Rates on a 5 lakh Fixed deposit in State Bank for 2 years