ನಿಮ್ಮತ್ರ ಯಾವುದೇ ಬ್ಯಾಂಕ್ ಡೆಬಿಟ್ ಕಾರ್ಡ್ ಇದ್ರೂ ಸಹ ಸಿಗಲಿದೆ 10 ಲಕ್ಷ ರೂಪಾಯಿ ಬೆನಿಫಿಟ್!
ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ (Credit Card) ಅಥವಾ ಡೆಬಿಟ್ ಕಾರ್ಡ್ (Debit Card) ಇದ್ದರೆ ಅದರಿಂದ ಕೆಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಬ್ಯಾಂಕ್ ಅಕೌಂಟ್ ಹೊಂದಿದ್ದು, ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ (Credit Card) ಅಥವಾ ಡೆಬಿಟ್ ಕಾರ್ಡ್ (Debit Card) ಇದ್ದರೆ ಅದರಿಂದ ಕೆಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ ಬ್ಯಾಂಕ್ ಅಕೌಂಟ್ (Bank Account) ನಿಮ್ಮ ಹಣಕಾಸಿನ ವಹಿವಾಟು ಹೇಗಿದೆ ಎನ್ನುವುದರ ಮೇಲೆ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಕೊಡುತ್ತಾರೆ. ಕ್ರೆಡಿಟ್ ಕಾರ್ಡ್ ಇರುವವರಿಗೆ ಹೆಚ್ಚಿನ ಪ್ರಯೋಜನಗಳು ಸಿಗುತ್ತದೆ. ಆದರೆ ಡೆಬಿಟ್ ಕಾರ್ಡ್ ಇದ್ದರೆ ಅದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಗೊತ್ತಾ? ಹೌದು, 10 ಲಕ್ಷದವರೆಗೂ ಬೆನಿಫಿಟ್ ಪಡೆಯಬಹುದು. ಅದು ಹೇಗೆ ಎಂದು ಈಗ ತಿಳಿಯೋಣ..
ಸ್ಟೇಟ್ ಬ್ಯಾಂಕ್‌ನಲ್ಲಿ 2 ವರ್ಷಕ್ಕೆ 5 ಲಕ್ಷ ಡೆಪಾಸಿಟ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಡಿಬಿಟ್ ಕಾರ್ಡ್ ಇಂದ ಸಿಗುತ್ತದೆ ಈ ಸೌಲಭ್ಯ:
ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ ತಮ್ಮ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಕೊಡಲಾಗುತ್ತದೆ. ಈ ಕಾರ್ಡ್ ನಲ್ಲಿ ನಿಮಗೆ 10 ಲಕ್ಷದವರೆಗು ವಿಮಾ ಸೌಲಭ್ಯ ಸಿಗುತ್ತದೆ, ಹೌದು ಇದು ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಚಾರ.
ಎಟಿಎಂ ಕಾರ್ಡ್ ಹೊಂದಿದ್ದರೆ ಅದರಿಂದ ನೀವು 10 ಲಕ್ಷದವರೆಗು ಅಪಘಾತ ವಿಮೆಯ ಸೌಲಭ್ಯ (Insurance) ಪಡೆಯಬಹುದು. ಇದಕ್ಕಾಗಿ ನೀವು ಯಾವುದೇ ಪ್ರೀಮಿಯಂ ಪಾವತಿ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ಮತ್ತೊಂದು ಮುಖ್ಯವಾದ ವಿಷಯ ಆಗಿದೆ..
ನಷ್ಟದ ಮಾತೇ ಇಲ್ಲ, ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ ₹5,550! ಅರ್ಜಿ ಸಲ್ಲಿಸಿ
ಒಂದು ವೇಳೆ ಎಟಿಎಂ ಕಾರ್ಡ್ ಹೊಂದಿರುವ ವ್ಯಕ್ತಿ, ಅಚಾನಕ್ ಆಗಿ ಆಕ್ಸಿಡೆಂಟ್ ನಲ್ಲಿ ಮರಣ ಹೊಂದಿದರೆ, ಆತನ ಮನೆಯವರು ಈ ವಿಮೆಯನ್ನು ಕ್ಲೇಮ್ ಮಾಡಿಕೊಳ್ಳಬಹುದು. ವ್ಯಕ್ತಿ ನಿಧನ ಹೊಂದಿದ ನಂತರ ಬ್ಯಾಂಕ್ ಗೆ ತೆರಳಿ, ಇದಕ್ಕಾಗಿ ಅರ್ಜಿ ಸಲ್ಲಿಸಿ, ವಿಮೆಯ ಮೊತ್ತವನ್ನು ಪಡೆಯಬಹುದು.
ಈ ವಿಮೆಯ ಸೌಲಭ್ಯ ಪಡೆಯಲು, ನೀವು ಇದಕ್ಕಾಗಿ ಪ್ರೀಮಿಯಂ ಕಟ್ಟಬೇಕಾಗಿಲ್ಲ, ವಿಶೇಷವಾಗಿ ವಿಮೆಯ ಯೋಜನೆಯನ್ನು ಶುರು ಮಾಡಬೇಕಿಲ್ಲ. ಎಟಿಎಂ ಕಾರ್ಡ್ ನಿಮಗೆ ಸಿಕ್ಕ ಸಮಯದಿಂದಲೇ ಸ್ವಯಂಚಾಲಿತವಾಗಿ ಈ ವಿಮೆ ಸೇರಿಕೊಳ್ಳುತ್ತದೆ.
ವಿಮೆಯನ್ನು ಕ್ಲೇಮ್ ಮಾಡುವುದು ಹೇಗೆ?
ಬ್ಯಾಂಕ್ ಅಕೌಂಟ್ ಹೊಂದಿದ್ದು, ಅದರ ಜೊತೆಗೆ ಎಟಿಎಂ ಕಾರ್ಡ್ ಅನ್ನು ಕೂಡ ಹೊಂದಿರುವ ವ್ಯಕ್ತಿ ದಿಢೀರ್ ಎಂದು ಅಪಘಾತದಲ್ಲಿ ಮರಣ ಹೊಂದಿದರೆ, ಆ ವ್ಯಕ್ತಿ ತನ್ನ ಬ್ಯಾಂಕ್ ಅಕೌಂಟ್ ಗೆ ಯಾರನ್ನು ನಾಮಿನಿ ಮಾಡಿರುತ್ತಾರೋ, ಆ ವ್ಯಕ್ತಿ ಬ್ಯಾಂಕ್ ಗೆ ಹೋಗಿ ವಿಮೆಯ ಮೊತ್ತ (Insurance) ಕ್ಲೇಮ್ ಮಾಡಿಕೊಳ್ಳುವ ಪ್ರೊಸಿಜರ್ ಶುರು ಮಾಡಬಹುದು. ಬ್ಯಾಂಕ್ ಇಂದ ಈ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ.
ಮಹಿಳೆಯರಿಗಾಗಿ ಹೊಸ ಯೋಜನೆ, ಎಸ್‌ಬಿಐ ಬ್ಯಾಂಕ್ ಅಕೌಂಟ್ ಇದ್ರೆ ಜಮಾ ಆಗಲಿದೆ 50 ಸಾವಿರ!
ವಿಮೆ ಕ್ಲೇಮ್ ಮಾಡುವವರು, ಆ ವ್ಯಕ್ತಿ ನಿಧನರಾದ ಬಳಿಕ, ಅಂದರೆ 60 ದಿನಗಳ ಒಳಗೆ ಬ್ಯಾಂಕ್ ಗೆ ಹೋಗಬೇಕು. ಮರಣ ಹೊಂದಿದ ವ್ಯಕ್ತಿಯ ಬಗ್ಗೆ ಸುದ್ದಿ ತಿಳಿಸಿ, ಡೆತ್ ಸರ್ಟಿಫಿಕೇಟ್, ಪೊಲೀಸರು ಫೇಲ್ ಮಾಡಿರುವ FIR ಕಾಪಿ ಅಥವಾ ಪೊಲೀಸರಿಂದ ಬಂದಿರುವ ಪ್ರಮಾಣ ಪತ್ರ, ಇದೆಲ್ಲವನ್ನು ಬ್ಯಾಂಕ್ ನಲ್ಲಿ ನೀಡಿ, ವಿಮೆಯನ್ನು ಕ್ಲೇಮ್ ಮಾಡಿಕೊಳ್ಳಲು ಪ್ರಯತ್ನ ಪಡಬಹುದು.
ಆಗ ಈ ಹಣ ನಾಮಿನಿಯ ಅಕೌಂಟ್ ಗೆ ವರ್ಗಾವಣೆ ಆಗುತ್ತದೆ. ನೀಡಿರುವ ಮಾಹಿತಿ ಸರಿ ಇದೆಯಾ ಎಂದು ಚೆಕ್ ಮಾಡಿದ ಬಳಿಕ ಮಾತ್ರ ಬ್ಯಾಂಕ್ ಇಂದ ನಾಮಿನಿಗೆ ಹಣ ವರ್ಗಾವಣೆ ಆಗುತ್ತದೆ.
you will get a benefit of 10 lakh rupees, if you have any bank debit card